Saturday, September 21, 2024
ಹೆಚ್ಚಿನ ಸುದ್ದಿ

ಬೆಳಿಗ್ಗೆ ಲಾಟರಿ ಖರೀದಿಸಿದ್ದ ಪೇಂಟರ್ : ಮಧ್ಯಾಹ್ನದ ವೇಳೆ ಕೋಟ್ಯಾಧಿಪತಿ- ಕಹಳೆ ನ್ಯೂಸ್

ಕೊಟ್ಟಾಯಂ : ಲಾಟರಿಯಲ್ಲಿ ಪೇಂಟರ್ ಓರ್ವ ಬರೊಬ್ಬರಿ 12 ಕೋಟಿ ಗೆದ್ದಿರುವ ಘಟನೆ ಕೊಟ್ಟಾಯಂನ ಕುಡಯಂಪಾಡಿಯಲ್ಲಿ ನಡೆದಿದೆ.

ಸದಾನಂದನ್ ಎಂಬ ಪೇಂಟರ್ ಬಹುಕೋಟಿ ಲಾಟರಿ ವಿಜೇತ. ವೃತ್ತಿಯಲ್ಲಿ ಪೇಂಟರ್ ಆಗಿರುವ ಸದಾನಂದನ್ ಭಾನುವಾರ ಬೆಳಗ್ಗೆ ಕೇರಳ ಸರ್ಕಾರದ ಕ್ರಿಸ್‍ಮಸ್-ಹೊಸ ವರ್ಷದ ಬಂಪರ್ ಲಾಟರಿ ಟಿಕೆಟ್ ಖರೀದಿಸಿದ್ದಾರೆ. ಮತ್ತು ಕೆಲವೇ ಗಂಟೆಗಳಲ್ಲಿ ಅಂದರೆ ಮಧ್ಯಾಹ್ನ, ಅವರು ಲಾಟರಿ ಹಣ ಗೆದ್ದಿದ್ದಾರೆ.
ಸದಾನಂದನ್ ಹಲವು ವರ್ಷಗಳಿಂದ ಲಾಟರಿ ಟಿಕೆಟ್‍ಗಳನ್ನು ಖರೀದಿಸುತ್ತಿದ್ದಾರೆ. ಆದರೆ ಈ ಬಾರಿ ಮಾತ್ರ ಅವರು ಜಾಕ್‍ಪಾಟ್ ಹೊಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

“ನಾನು ಹತ್ತಿರದ ಮಾಂಸದ ಅಂಗಡಿಗೆ ಹೋಗುತ್ತಿದ್ದೆ ನನ್ನಲ್ಲಿ ಚೇಂಜ್ ಇರಲಿಲ್ಲ. ಇದಕ್ಕಾಗಿ ಲಾಟರಿ ಖರೀದಿಸಿದೆ. ಮಧ್ಯಾಹ್ನದ ವೇಳೆಗೆ ಫಲಿತಾಂಶ ಬಂದಿದೆ. ತಮ್ಮ ಕುಟುಂಬದ ಸಾಲವನ್ನು ತೀರಿಸುವುದು ಮತ್ತು ಉತ್ತಮವಾದ ಮನೆಯನ್ನು ನಿರ್ಮಿಸುವುದಾಗಿ” ಸದಾನಂದನ್ ಸಂತಸ ಹಂಚಿಕೊಂಡಿದ್ದಾರೆ.

ಜಾಹೀರಾತು