Sunday, November 24, 2024
ದಕ್ಷಿಣ ಕನ್ನಡಸುದ್ದಿ

ಮಂಗಳೂರಿನ ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನಕ್ಕೆ ಪುತ್ತೂರು ವಲಯದ ವಿಶ್ವಕರ್ಮ ಬಾಂಧವರಿಂದ ಸ್ವರ್ಣಕಲಶ ಸಮರ್ಪಣೆ – ಕಹಳೆ ನ್ಯೂಸ್

ಪುತ್ತೂರು: ಮಂಗಳೂರು ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ ಬ್ರಹ್ಮಕಲಶೋತ್ಸವದ ಹಿನ್ನೆಲೆಯಲ್ಲಿ ಪುತ್ತೂರು ವಲಯದ ವಿಶ್ವಕರ್ಮ ಬಾಂಧವರಿಂದ ಸ್ವರ್ಣಕಲಶ ಸಿದ್ಧವಾಗಿದ್ದು. ಈ ಹಿನ್ನಲೆಯಲ್ಲಿ ಜ.19ರ ಬೆಳಗ್ಗೆ 10 ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಬೊಳುವಾರು ವಿಶ್ವಕರ್ಮ ಸಭಾಭವನದಲ್ಲಿ ಸ್ವರ್ಣಕಲಶವನ್ನು ವೀಕ್ಷಣೆಗೆ ಇಡಲಾಗುತ್ತದೆ. ಬಳಿಕ ಮದ್ಯಾಹ್ನ 3 ಗಂಟೆಗೆ ಮಂಗಳೂರು ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನಕ್ಕೆ ಸ್ವರ್ಣಕಲಶವನ್ನು ಸಮರ್ಪಿಸಲಾಗುತ್ತದೆ.

ಸ್ವರ್ಣಕಲಶದ ವೀಕ್ಷಣೆಗೆ ಆಗಮಿಸುವವರು ಸರಕಾರದ ಕೋವಿಡ್ ನಿಯಮ ಅನ್ವಯ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಪಾಲನೆ ಮಾಡುವಂತೆ ಸ್ವರ್ಣ ಕಲಶ ಸಮರ್ಪಣಾ ಸಮಿತಿ ಅಧ್ಯಕ್ಷರೂ, ಮಂಗಳೂರು ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರೂ ಆಗಿರುವ ವಿ. ಪುರುಷೋತ್ತಮ ಆಚಾರ್ಯ ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು


ಸ್ವರ್ಣಕಲಶ ಸಮರ್ಪಣಾ ಸಮಿತಿ ಪುತ್ತೂರು ವಲಯದ ನೇತೃತ್ವದಲ್ಲಿ ಚಿನ್ನ ಹಾಗೂ ದೇಣಿಗೆ ಸಂಗ್ರಹಿಸಿದ್ದು, ಹಳೆಯಂಗಡಿಯ ಶ್ರೀ ದುರ್ಗಾ ಜುವೆಲ್ಲರ್ ನ ಶಿಲ್ಪಿ ನಾಗರಾಜ್ ಶರ್ಮ ಪರ್ಕಳ ಸ್ವರ್ಣಕಲಶದ ಕೆಲಸ ನಿರ್ವಹಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜ.23 ರಂದು ಮಂಗಳೂರು ಶ್ರೀ ಕಾಳಿಕಾಂಬಾ ದೇವಿ ಹಾಗೂ ಶ್ರೀ ವಿನಾಯಕ ದೇವಸ್ಥಾನದಲ್ಲಿ  ದೇವರ ಬ್ರಹ್ಮಕಲಶ ಹಾಗೂ ಜ. 26 ರಂದು ಶತಚಂಡಿಕಾಯಾಗ ನಡೆಯಲಿದೆ.