Recent Posts

Sunday, January 19, 2025
ಸುದ್ದಿ

Breaking News : ಬಂಟ್ವಾಳದಲ್ಲಿ ತುಕ್ಕುಹಿಡಿದ ಬಂದೂಕುಗಳಿಗೆ ಮತ್ತೆ ಜೀವ ತುಂಬಿದ ಪೊಲೀಸರು ; ಸಿನಿಮೀಯ ಚೇಸ್ , ದರೋಡೆಕೋರ ಮೇಲೆ ಫೈಯರಿಂಗ್, 3ವರು ಅಂದರ್ ! – ಕಹಳೆ ನ್ಯೂಸ್

ಬಂಟ್ವಾಳಇಲ್ಲಿನ ಮಣಿಹಳ್ಳದಲ್ಲಿ  ಪೋಲೀಸರು ದುಷ್ಕರ್ಮಿಗಳನ್ನು ಸಿನಿಮೀಯ ಶೈಲಿಯಲ್ಲಿ ಬೆನ್ನಟ್ಟಿ  ಫೈರಿಂಗ್ ನಡೆಸಿ ಮೂವರನ್ನು  ಬಂಧಿಸಿರುವ ಘಟನೆ ಗುರುವಾರ ತಡರಾತ್ರಿ ನಡೆದಿದೆ. ಇಬ್ಬರು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. 

ಬಂಧಿತರು ಸದ್ದಾಂ ಮಾರಿಪಳ್ಳ, ಮೌಸೀನ್ ಸುರತ್ಕಲ್, ಮಹಮ್ಮದ್ ಇರ್ಶಾದ್ ಬೊಳ್ಳಾಯಿ ಎಂದು ತಿಳಿದು ಬಂದಿದ್ದು ಮೂವರ ಮೇಲೆ ಹಲವು ಪ್ರಕರಣ ಗಳು ದಾಖಲಾಗಿರುವ ಬಗ್ಗೆ ಪೊಲೀಸರು ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಪರಾರಿಯಾದ ದುಷ್ಕರ್ಮಿಗಳು ಅಮ್ಮೆಮಾರ್ ನಿವಾಸಿ ಮನ್ಸೂರ್ ಮತ್ತು ಅಮ್ಮಿ ಎಂದು  ತಿಳಿದು ಬಂದಿದ್ದು  ಇವರ ಬಂಧನಕ್ಕೆ ಪೋಲೀಸರು ಬಲೆ ಬೀಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಆರೋಪಿ ಸದ್ದಾಂ ಕೊಲೆ ಮತ್ತು ಕೊಲೆಯತ್ನ ಆರೋಪಿಯಾಗಿದ್ದು, ಮೌಸೀನ್ ಸುಮಾರು 14 ಪ್ರಕರಣಗಳಲ್ಲಿ ವಿವಿಧ ಠಾಣೆ ಗಳ ಆರೋಪಿಯಾಗಿದ್ದಾನೆ.

ಘಟನೆಯ ವಿವರ

ಬಂಟ್ವಾಳ ದ ಮಣಿಹಳ್ಳದ ಚೆಕ್‌ಪೋಸ್ಟ್‌ನಲ್ಲಿ ಕೆಂಪು ಬಣ್ಣದ ಕಾರನ್ನು ನಿಲ್ಲಿಸಲು ಸೂಚನೆ ನೀಡಿದಾಗ ನಿಲ್ಲಿಸದೆ ಪೋಲೀಸ್ ಸಿಬಂದಿಗಳ ಮೇಲೆ ಹತ್ತಿಸಲು ಯತ್ನಿಸಿದ್ದಾರೆ. ಈ ವೇಳೆ ಪೊಲೀಸರ ರಕ್ಷಣೆಗೆ  ನಗರ ಠಾಣಾ ಎಸ್ ಐ ಚಂದ್ರಶೇಖರ್ ಮತ್ತು ಗ್ರಾಮಾಂತರ ಠಾಣಾ ಎಸ್ ಐ ಪ್ರಸನ್ನ ಅವರು ಫೈರಿಂಗ್‌ ಮಾಡಿದ್ದಾರೆ.

ಬೆಳ್ತಂಗಡಿಯಿಂದ ದರೋಡೆಕೋರರು  ಕೆಂಪು ಕಲರ್ ಮಾರುತಿ ಸ್ವಿಪ್ಟ್ ಕಾರಿನಲ್ಲಿ ಬರುತ್ತಿದ್ದಾರೆ ಎಂಬ ಖಚಿತ ಮಾಹಿತಿಯ ಮೇರೆಗೆ ಬಂಟ್ವಾಳ ಪೋಲೀಸರು ಕಾರ್ಯಚರಣೆಗಿಳಿದಿದ್ದರು.

ಬೆಳ್ತಂಗಡಿ ಚೆಕ್ ಪೋಸ್ಟ್ ನಲ್ಲಿ ಪೋಲೀಸರು ಕಾರು  ತಡೆದಾಗ ನಿಲ್ಲಿಸದೆ ಬ್ಯಾರಿಕೇಡ್ ಗೆ ಹೊಡೆದು ಪರಾರಿಯಾಗಿದ್ದು ಆ  ಬಳಿಕ ಪುಂಜಾಲಕಟ್ಟೆ ಚೆಕ್‌ಪೋಸ್ಟ್‌ನಲ್ಲೂ ನಿಲ್ಲಿಸದೆ ಪರಾರಿಯಾಗಿದ್ದಾರೆ.

ಬೆಳ್ತಂಗಡಿ ಪೋಲೀಸರ ಖಚಿತ ಮಾಹಿತಿಯ ಮೇಲೆ ಪ್ರೋಬೆಷನರಿ ಐ.ಪಿ.ಎಸ್ ಅಕ್ಷಯ್ ಎಮ್ ಹಾಕೆ ಅವರ ನೇತೃತ್ವದಲ್ಲಿ ಬಂಟ್ವಾಳ ಪೋಲೀಸರು ಮಣಿಹಳ್ಳ ಜಂಕ್ಷನ್ ನಲ್ಲಿ ವಾಹನ ನಿಲ್ಲಿಸಲು ಸೂಚನೆ ನೀಡಿದಾಗ ವಾಹನ ನಿಲ್ಲಿಸದೆ ಪೋಲೀಸ್ ಸಿಬಂದಿಗಳ ಮೇಲೆ ಹಾಯಿಸಲು ಮುಂದಾಗಿದ್ದಾರೆ. ಈ ವೇಳೆ  ಕಾರಿನ ಮೇಲೆ ಫೈರಿಂಗ್ ನೆಡೆಸಲಾಗಿದೆ.

ಕಾರನ್ನು ಸುತ್ತುವರಿದ ಪೊಲೀಸರು ಐದು ಮಂದಿ ಪೈಕಿ ಮೂವರನ್ನು ಪೋಲೀಸರು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾದರೆ ಇಬ್ಬರು ಪರಾರಿಯಾಗಿದ್ದಾರೆ.

‌ಕಾರಿನಲ್ಲಿ ತಲವಾರು ಸಹಿತ ಮಾರಾಕಾಸ್ತರಗಳು ದೊರೆತಿದ್ದು ಇವರು ದನ ದರೋಡೆ ಅಥವಾ ಇನ್ನಿತರ ಯಾವುದೋ ದರೋಡೆ ಗೆ ಮುಂದಾಗಿದ್ದರು ಎಂದು ಹೇಳಲಾಗುತ್ತಿದ್ದು ಪೋಲೀಸರ ತನಿಖೆ ಯ ಬಳಿಕ ಖಚಿತ ಮಾಹಿತಿ ತಿಳಿದು ಬರಬೇಕಿದೆ.

ಬಂಟ್ವಾಳ ತಾಲ್ಲೂಕಿನಲ್ಲಿ  ನಡೆದ ಪ್ರಥಮ ಫೈರಿಂಗ್ ಇದು ಎಂದು ಹೇಳಲಾಗುತ್ತಿದೆ. ಈವರೆಗೆ ಯಾರೂ ಕೂಡಾ ಫೈರಿಂಗ್ ಮಾಡಿ ಆರೋಪಿಗಳನ್ನು ಬಂಧಿಸಿದ ದಾಖಲೆಗಳು ಇಲ್ಲ.

ಬಂಟ್ವಾಳ ಕೋಮು ಗಲಭೆಯಿಂದ ತತ್ತರಿಸಿದ ಸಂದರ್ಭದಲ್ಲಿ ಎಸ್ ಪಿ ಸುಧೀರ್ ರೆಡ್ಡಿ ಅವರ ನೇತೃತ್ವದಲ್ಲಿ  ಬಂಟ್ವಾಳವನ್ನು ಹತೋಟಿಗೆ ತರಲು ನಗರ ಠಾಣಾ ಎಸ್ ಐ ಚಂದ್ರಶೇಖರ್ ಮತ್ತು ಗ್ರಾಮಾಂತರ ಎಸ್ ಐ ಪ್ರಸನ್ನ ಅವರು ವಿಶೇಷ ಮುತುವರ್ಜಿಯಿಂದ ಕೆಲಸ ಮಾಡಿದ್ದರು. ಅವರ ಕಾರ್ಯಾಚರಣೆಗೆ ಪ್ರಶಂಸೆ ವ್ಯಕ್ತವಾಗಿದೆ