Saturday, November 23, 2024
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಸಾಂಪ್ರದಾಯಿಕ ಆಹಾರ ಪದ್ಧತಿ ಎಂಬ ಕಾರ್ಯಕ್ರಮದ ಅಡಿಯಲ್ಲಿ ಕಲ್ಲಡ್ಕ, ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಂದ ಬಾಳೆ ಎಲೆ ಊಟದ ಪ್ರಾತ್ಯಕ್ಷಿಕೆ ಕಾರ್ಯಕ್ರಮ- ಕಹಳೆ ನ್ಯೂಸ್

ಕಲ್ಲಡ್ಕ: ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಾಂಪ್ರದಾಯಿಕ ಆಹಾರ ಪದ್ಧತಿ ಎಂಬ ಕಾರ್ಯಕ್ರಮದ ಅಡಿಯಲ್ಲಿ ಎರಡನೇ ತರಗತಿ ವಿದ್ಯಾರ್ಥಿಗಳಿಂದ ಬಾಳೆ ಎಲೆ ಊಟದ ಪ್ರಾತ್ಯಕ್ಷಿಕೆ ಕಾರ್ಯಕ್ರಮ ನಡೆಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಬಾಳೆ ಎಲೆ ಊಟದ ಮಹತ್ವವನ್ನು ತಿಳಿಸುತ್ತಾ ಮಾತನಾಡಿದ ಪ್ರಾಥಮಿಕ ಶಾಲೆಯ ಇಂಗ್ಲೀμï ಅಧ್ಯಾಪಕರಾದ ರಾಜೇಶ್ವರಿಯವರು “ಬಾಳೆಎಲೆ ದೈವಿಕ ಅಂಶ ಉಳ್ಳದ್ದು. ಬಿಸಿಯಾದ ಪದಾರ್ಥ ಎಲೆಯ ಮೇಲೆ ಬಿದ್ದಾಗ ಅದರಿಂದ ಉತ್ಪತ್ತಿಯಾಗುವ ಪಾಲಿಫಿನೋಲ್ ಅಂಶವು ನಮ್ಮ ದೇಹದ ಒಳಗೆ ಸೇರಿದಾಗ ನಮ್ಮಲ್ಲಿರುವ ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ ” ಎಂದು ಹೇಳಿದರು.

ನಂತರ ಎರಡನೇ ತರಗತಿ ವಿದ್ಯಾರ್ಥಿಗಳಿಂದ ಇಂಗ್ಲೀಷ್ , ಕನ್ನಡ ಹಾಡು ಹಾಗೂ ನೃತ್ಯ ಪ್ರದರ್ಶನ ನಡೆಯಿತು. ತದನಂತರ ಸಾಂಪ್ರದಾಯಿಕ ಶೈಲಿಯಲ್ಲಿ ಮಕ್ಕಳಿಗೆ ಬಾಳೆ ಎಲೆಯಲ್ಲಿ ಊಟ ನೀಡಲಾಯಿತು.

 

ಕಾರ್ಯಕ್ರಮದಲ್ಲಿ ಮಕ್ಕಳ ಪೋಷಕರು, ಹಿರಿಯ ವಿದ್ಯಾರ್ಥಿಗಳು ಹಾಗೂ ಪ್ರಾಥಮಿಕ ವಿಭಾಗದ ಎಲ್ಲಾ ಅಧ್ಯಾಪಕರು ಭಾಗವಹಿಸಿದರು.
ವೇದಿಕೆಯಲ್ಲಿ ಆಡಳಿತ ಮಂಡಳಿಯ ಸದಸ್ಯ ಪಿ.ಕೆ. ಪದ್ಮನಾಭ, ಅಧ್ಯಾಪಕರಾದ ಸುಮಂತ್ ಆಳ್ವ ಹಾಗೂ ಅನ್ನಪೂರ್ಣ ಎನ್. ಭಟ್ ಉಪಸ್ಥಿತರಿದ್ದರು.
ಎರಡನೇ ತರಗತಿಯ ವಿದ್ಯಾರ್ಥಿಗಳಾದ ಸಮೃದ್ಧಿ ಸ್ವಾಗತಿಸಿ, ಶ್ರೀರಾಮ ವಂದಿಸಿದರು. ಸಾನ್ವಿ ಕಾರ್ಯಕ್ರಮ ನಿರೂಪಿಸಿದರು.