ಭಾರತೀಯ ಜನತಾ ಪಾರ್ಟಿ ಮಂಗಳೂರು ನಗರ ದಕ್ಷಿಣ ಮಂಡಲದ ಉತ್ತರ ಮಹಾಶಕ್ತಿ ಕೇಂದ್ರದ ಮಾಸಿಕ ಸಭೆ – ಬೂತ್ ಮಟ್ಟದಲ್ಲಿ ಪಕ್ಷದ ಚಟುವಟಿಕೆ, ಸಮಿತಿ ರಚನೆ,ಮೈಕ್ರೋ ಡೊನೇಶ್ ಹಾಗೂ ವ್ಯಾಕ್ಸಿನೇಷನ್ ಬಗ್ಗೆ ಮಾಹಿತಿ –ಕಹಳೆ ನ್ಯೂಸ್
ಭಾರತೀಯ ಜನತಾ ಪಾರ್ಟಿ ಮಂಗಳೂರು ನಗರ ದಕ್ಷಿಣ ಮಂಡಲದ ಉತ್ತರ ಮಹಾಶಕ್ತಿ ಕೇಂದ್ರದ ಮಾಸಿಕ ಸಭೆಯು ಮಂಗಳೂರು ನಗರ ದಕ್ಷಿಣ ಶಾಸಕರಾದ ಶ್ರೀ ಡಿ ವೇದವ್ಯಾಸ ಕಾಮತ ರವರ ಸೂಚನೆಯಂತೆ ಮಂಡಲ ಉಪಾಧ್ಯಕ್ಷರು ಹಾಗೂ ಮಹಾಶಕ್ತಿ ಕೇಂದ್ರ ಅಧ್ಯಕ್ಷರಾದ ಶ್ರೀ ರಮೇಶ್ ಹೆಗ್ಡೆ ಅವರ ಅದ್ಯಕ್ಷತೆಯಲ್ಲಿ ಹಾಗೂ ಮಂಡಲ ಅಧ್ಯಕ್ಷರಾದ ಶ್ರೀ ವಿಜಯ ಕುಮಾರ್ ಶೆಟ್ಟಿ ಅವರ ಉಪಸ್ಥಿತಿಯಲ್ಲಿ ಅಟಲ್ ಸೇವಾ ಕೇಂದ್ರದಲ್ಲಿ ಜರುಗಿತು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ಮಂಡಲ ಪ್ರಭಾರಿ ಶ್ರೀಮತಿ ಕಸ್ತೂರಿ ಪಂಜ ಅವರು ಬೂತ್ ಮಟ್ಟದಲ್ಲಿ ಪಕ್ಷದ ಸಂಘಟನೆ ಬಗ್ಗೆ ಸಲಹೆ ಸೂಚನೆಗಳನ್ನು ನೀಡಿದರು ಹಾಗೂ ಮುಂದಿನ ತಿಂಗಳಲ್ಲಿ ಜಿಲ್ಲೆಯ ಎಲ್ಲ ಮಂಡಲದ ಪದಾಧಿಕಾರಿಗಳು ಅವರಿಗೆ ನಿಗದಿಪಡಿಸಿದ ಬೇರೆ ಮಂಡಲಗಳ ಶಕ್ತಿಕೇಂದ್ರಗಳ ಪ್ರವಾಸ ಮಾಡಲಿದ್ದು ಆ ಸಮಯದಲ್ಲಿ ಬೂತ್ ಮಟ್ಟದಲ್ಲಿ ಪಕ್ಷದ ಚಟುವಟಿಗಳ ಬಗ್ಗೆ, ಬೂತ್ ಸಮಿತಿಗಳ ರಚನೆ ಬಗ್ಗೆ, ಪೇಜ್ ಪ್ರಮುಖರ ಹಾಗೂ ಪೇಜ್ ಸಮಿತಿ ಬಗ್ಗೆ ,ಮೈಕ್ರೋ ಡೊನೇಶ್ ನ ಹಾಗೂ ವ್ಯಾಕ್ಸಿನೇಷನ್ ಬಗ್ಗೆ ಮಾಹಿತಿಯನ್ನು ಪಡೆದು ಪಕ್ಷದ ವರಿಷ್ಠರಿಗೆ ವರದಿಯನ್ನು ಸಲ್ಲಿಸಲಿದ್ದು ಆದುದರಿಂದ ಬೂತ್ ಮಟ್ಟದ ಸಮಿತಿಯು ಇನ್ನಷ್ಟು ಕ್ರಿಯಾಶೀಲ ವಾಗಿ ಕಾರ್ಯ ಮಾಡಬೇಕು ಎಂದು ಹೇಳಿದರು.
ಮೈಕ್ರೋ ಡೊನೇಶ್‌ನ ಅಭಿಯಾನದ ಬಗ್ಗೆ ಮಾಹಿತಿಯನ್ನು ನೀಡಿ ಪಕ್ಷದ ಎಲ್ಲಾ ಪ್ರಮುಖರು ಹಾಗೂ ಕಾರ್ಯಕರ್ತರು ಈ ಮೈಕ್ರೋ ಡೊನೇಶನ್‌ನಲ್ಲಿ ಭಾಗವಹಿಸಿ ತಮ್ಮಿಂದಾದ ದೇಣಿಗೆ ಕನಿಷ್ಠ ರೂ.5 ರೂಪಾಯಿ ಯಿಂದ ಗರಿಷ್ಠ ರೂ.1000 ದವರೆಗೆ ನೀಡುವಂತೆ ತಿಳಿಸಿದರು.
ಮಂಡಲ ಅಧ್ಯಕ್ಷರಾದ ಶ್ರೀ ವಿಜಯ ಕುಮಾರ್ ಶೆಟ್ಟಿ ಅವರು ಮಾತನಾಡುತ್ತ ಪಕ್ಷವನ್ನು ಇನ್ನಷ್ಟ್ಟು ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ಬೂತ್ ಮಟ್ಟದಲ್ಲಿ ಸಂಘಟಿಸುವ ಉದ್ದೇಶದಿಂದ ಮುಂದಿನ ದಿನಗಳಲ್ಲಿ ಬೂತ್ ಸಭೆಗಳನ್ನು ಮಾಡಬೇಕು ಹಾಗೂ ಪ್ರತಿ ತಿಂಗಳ ಕೊನೆಯ ಆದಿತ್ಯವಾರ ಜರಗುವ ಮನ್ ಕಿ ಬಾತ್ ಕಾರ್ಯಕ್ರಮವನ್ನು ಎಲ್ಲರೂ ತಮ್ಮ ತಮ್ಮ ಬೂತುಗಳಲ್ಲಿ ವೀಕ್ಷಿಸಬೇಕೆಂದು ಹೇಳಿದರು ಮತ್ತು ಬೂತ್ ಮಟ್ಟದಲ್ಲಿ ಆದಷ್ಟು ಹೆಚ್ಚಿನ ಜನರನ್ನು ಮೈಕ್ರೋ ಡೊನೇಷನ್ ಅಭಿಯಾನದಲ್ಲಿ ತೊಡಗಿಸಿಕೊಳ್ಳಬೇಕೆಂದು ತಿಳಿಸಿದರು.
ಮಹಾಶಕ್ತಿಕೇಂದ್ರ ಅಧ್ಯಕ್ಷರಾದ ಶ್ರೀ ರಮೇಶ್ ಹೆಗ್ಡೆ ಅವರು ಮಹಾಶಕ್ತಿ ಕೇಂದ್ರದ ವರದಿಯನ್ನು ನೀಡುತ್ತಾ ತಮಗೆ ಸಹಕಾರವನ್ನು ನೀಡಿದ ಮ ನ ಪಾ ಸದಸ್ಯರು, ಮಹಾಶಕ್ತಿ ಕೇಂದ್ರ ಪದಾಧಿಕಾರಿಗಳು ಹಾಗೂ ಶಕ್ತಿ ಕೇಂದ್ರ ಪ್ರಮುಖರನ್ನು ಶ್ಲಾಘಿಸಿದರು. ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಸುರೇಂದ್ರ ಜೆ ಸ್ವಾಗತಿಸಿದರು ಹಾಗೂ ಮಹಾಶಕ್ತಿ ಕೇಂದ್ರ ಉಪಾಧ್ಯಕ್ಷರಾದ ಶ್ರೀ ಚರಿತ್ ಪೂಜಾರಿ ವಂದಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಸುಧೀರ್ ಶೆಟ್ಟಿ ಕಣ್ಣೂರ್, ಮ ನ ಪಾ ಸದಸ್ಯರು, ಮಂಡಲ ಸಾಮಾಜಿಕ ಜಾಲ ತಾಣ ಪ್ರಕೋಷ್ಠದ ಸಂಚಾಲಕರಾದ ಶ್ರೀ ನಿಲೇಶ್ ಕಾಮತ, ಮಹಾಶಕ್ತಿ ಕೇಂದ್ರ ಪದಾಧಿಕಾರಿಗಳು, ಶಕ್ತಿ ಕೇಂದ್ರ ಪ್ರಮುಖರು ಉಪಸ್ಥಿತರಿದ್ದರು. ಇದೆ ವೇಳೆಯಲ್ಲಿ ಕುದ್ರೋಳಿ ಶಕ್ತಿ ಕೇಂದ್ರದ ಪ್ರಮುಖರಾಗಿ ಶ್ರೀ ಗಿರೀಶ್ ಕರ್ಕೇರ ಹಾಗೂ ಉತ್ತರ ಮಹಾಶಕ್ತಿ ಕೇಂದ್ರದ ಮಹಿಳಾ ಸದಸ್ಯೆಯಾಗಿ ಸುಶ್ಮಿತಾ ಅವರ ಆಯ್ಕೆಯನ್ನು ಘೋಷಿಸಲಾಯಿತು.