Friday, September 20, 2024
ಸುದ್ದಿ

ಸಿಇಟಿಯಲ್ಲಿ ಗರಿಷ್ಠ ಸಾಧನೆ ; ಡಾ. ಮೋಹನ್ ಆಳ್ವರ ಸಾರಥ್ಯದ ಆಳ್ವಾಸ್ ಗೆ 100ರೊಳಗೆ 99 ರ್‍ಯಾಂಕ್‌ – ಕಹಳೆ ನ್ಯೂಸ್

ಮೂಡಬಿದಿರೆ: 2018ನೇ ಸಾಲಿನ ಸಿಇಟಿ ಪರೀಕ್ಷೆಯಲ್ಲಿ ಆಳ್ವಾಸ್‌ ಪದವಿಪೂರ್ವ ಕಾಲೇಜು ಗಮನಾರ್ಹ ಸಾಧನೆ ತೋರಿದೆ. 7 ವಿಷಯಗಳಲ್ಲಿ 99 ಮಂದಿ 100ರೊಳಗೆ ರ್‍ಯಾಂಕ್‌ ಗಳಿಸಿದ್ದಾರೆ. ಇವರಲ್ಲಿ 16 ಮಂದಿ 25ರೊಳಗೆ ರ್‍ಯಾಂಕ್‌ ಪಡೆದಿದ್ದಾರೆ ಎಂದು ಆಳ್ವಾಸ್‌ ಎಜ್ಯುಕೇಶನ್‌ ಫೌಂಡೇಶನ್‌ನ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ಅವರು ಪತ್ರಿಕಾಗೋಷ್ಠಿಯಲ್ಲಿ  ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಎಂಜಿನಿಯರಿಂಗ್‌, ಬಿ.ಎಸ್‌ಸಿ. ಎಗ್ರಿಕಲ್ಚರ್‌, ವೆಟರ್ನರಿ ಸೆ„ನ್ಸ್‌, ಬಿ.ಫಾರ್ಮ, ಡಿ.ಫಾರ್ಮ, ಬಿ.ಎಸ್‌ಸಿ. ಎಗ್ರಿಕಲ್ಚರ್‌ ಪ್ರಾಕ್ಟಿಕಲ್‌, ವೆಟರ್ನರಿ ಸೆ„ನ್ಸ್‌ ಪ್ರಾಕ್ಟಿಕಲ್‌ ಹೀಗೆ 7 ವಿಷಯಗಳಲ್ಲಿ  200 ಒಳಗಡೆ 224, 300 ಒಳಗಡೆ 312 ರ್‍ಯಾಂಕ್‌, 400 ಒಳಗಡೆ 412 ರ್‍ಯಾಂಕ್‌, 500 ಒಳಗಡೆ 498 ರ್‍ಯಾಂಕ್‌ಗಳು ಬಂದಿವೆ.

ಜಾಹೀರಾತು

25ರೊಳಗೆ ಒಟ್ಟು  15 ರ್‍ಯಾಂಕ್‌ಗಳು
ಎಂಜಿನಿಯರಿಂಗ್‌ ವಿಭಾಗದಲ್ಲಿ ಶಶಾಂಕ್‌ ಡಿ. 12ನೇ ರ್‍ಯಾಂಕ್‌ ಗಳಿಸಿದ್ದಾರೆ. ಬಿ.ಎಸ್‌ಸಿ. ಅಗ್ರಿಕಲ್ಚರ್‌ (ಪ್ರಾಕ್ಟಿಕಲ್‌)ನಲ್ಲಿ ಮೆಲಿಶಾ ರೊಡ್ರಿಗಸ್‌ 2ನೇ ರ್‍ಯಾಂಕ್‌, ಹಲ್ಲೆಪ್ಪ ಗೌಡ 10ನೇ ರ್‍ಯಾಂಕ್‌, ಅಭಿಷೇಕ್‌ 17ನೇ , ಶರಧಿ ಡಿ. ರಾವ್‌ 19ನೇ, ದೇವರಾಜ್‌ 20ನೇ,  ದುಷ್ಯಂತ  22ನೇ ರ್‍ಯಾಂಕ್‌ ಗಳಿಸಿದ್ದಾರೆ. ವೆಟರ್ನರಿ ಸೆ„ನ್ಸ್‌ (ಪ್ರಾಕ್ಟಿಕಲ್‌)ನಲ್ಲಿ  ದರ್ಶನ್‌ 4ನೇ ರ್‍ಯಾಂಕ್‌, ಕಿರಣ್‌ ಎಸ್‌. 11ನೇ, ರವೀನಾ ಕೆ. 23ನೇ ರ್‍ಯಾಂಕ್‌ ಗಳಿಸಿದ್ದಾರೆ. ಬಿ.ಎಸ್‌ಸಿ. ಅಗ್ರಿಕಲ್ಚರ್‌ನಲ್ಲಿ   ಸೌರವ್‌ ಪಪತಿ 7ನೇ, ಪ್ರಸನ್ನ ಭಟ್‌ 10ನೇ ರ್‍ಯಾಂಕ್‌, ಮಹೇಶ್‌ ಕೊಪ್ಪದ 11ನೇ, ಶಶಾಂಕ್‌ ಡಿ. 12ನೇ, ಚಂದನಾ 19ನೇ ಹಾಗೂ ಶಿವರಾಜ್‌ 21ನೇ ರ್‍ಯಾಂಕ್‌  ಪಡೆದಿದ್ದಾರೆ. ರ್‍ಯಾಂಕ್‌ ವಿಜೇತ ವಿದ್ಯಾರ್ಥಿಗಳನ್ನು  ಡಾ| ಆಳ್ವ ಅಭಿನಂದಿಸಿದರು.

ಪತ್ರಿಕಾಗೋಷ್ಠಿಯಲ್ಲಿ  ಪಿಯು ಕಾಲೇಜಿನ ಪ್ರಾಚಾರ್ಯರಾದ ರಮೇಶ್‌ ಶೆಟ್ಟಿ, ಗಣನಾಥ ಶೆಟ್ಟಿ, ಅಶ್ವತ್ಥ್ ಎಸ್‌. ಎಲ್‌., ಡೀನ್‌ ವೆಂಕಟೇಶ್‌ ನಾಯಕ್‌, ಸಂಯೋಜಕ ಚಂದ್ರಶೇಖರ ಉಪಸ್ಥಿತರಿದ್ದರು.