ಪುತ್ತೂರು : ಗಣರಾಜ್ಯೋತ್ಸವದ ಸಮಯದಲ್ಲಿ ರಾಷ್ಟ್ರ ಧ್ವಜದ ಮೇಲಾಗುವ ಅಪಮಾನವನ್ನು ತಡೆಯಲು ಮತ್ತು ಉಚ್ಚ ನ್ಯಾಯಾಲಯದ ಆದೇಶದಂತೆ ಕಾರ್ಯಚರಣೆ ಮಾಡಲು ಹಾಗೂ ರಾಜ್ಯ ಸರ್ಕಾರದಿಂದ ಪ್ಲಾಸ್ಟಿಕ್ ಧ್ವಜದ ಮೇಲಿನ ನಿರ್ಬಂಧದ ನಿರ್ಣಯದ ಕುರಿತು ಕ್ರಮಕೆಗೊಳ್ಳಬೇಕೆಂದು ಆಗ್ರಹಿಸಿ ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಪುತ್ತೂರಿನ ಉಪವಿಭಾಗಾಧಿಕಾರಿಗಳಾದ “ಶ್ರೀ ಯತೀಶ್ ಉಳ್ಳಾಲ್” ಇವರಿಗೆ ಮನವಿ ನೀಡಲಾಗಿದೆ.
ಜೊತೆಗೆ ಮಂಗಳೂರಿನ ಚುನಾವಣಾ ತಹಸೀಲ್ದಾರ್ ಕೆ.ಯಸ್ ದಯಾನಂದ ಇವರ ಮೂಲಕ ಜಿಲ್ಲಾಧಿಕಾರಿಗಳಿಗೆ ಮತ್ತು ಕಮಿಷನರ್ ಕಚೇರಿಯ ಪೊಲೀಸ್ ಸಿಬಂಧಿಯಾದ ವರುಣ ಇವರ ಮೂಲಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿಯನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಧರ್ಮಪ್ರೆಮಿಗಳಾದ ಶ್ರೀ ಗಣಪತಿ ಬಂಡಾರ್ಕರ್, ಶ್ರೀ ವೇಣುಗೋಪಾಲ್ ಮಣಿಯಾಣಿ, ನವೀನ್ ಆಚಾರ್ಯ, ದೀಕ್ಷಿತ್, ಸತೀಶ್ ಬಂಡಾರಿ, ದಯಾನಂದ, ಮತ್ತು ಪುತ್ತೂರಿನ ಹಿಂದೂ ಜನಜಾಗೃತಿ ಸಮಿತಿಯ ಸಮನ್ವಯಕರು ಹರಿಪ್ರಸಾದ್ ಶೆಟ್ಟಿ, ಹಿಂದೂ ಜನಜಾಗೃತಿ ಸಮಿತಿಯಿಂದ ಪ್ರಭಾಕರ ನಾಯಕ್, ಉಪೇಂದ್ರ, ರಾಜೇಶ್ ಆಚಾರ್ಯ, ಅಜಿತ್, ಧರ್ಮಪ್ರೇಮಿಗಳಾದ ಉಮೇಶ್ ಅತ್ತಾವರ, ಗೋರಕ್ಷ ಪ್ರಮುಖರಾದ ವೈಶಾಂಕ್, ಹೊಸ ಬೆಟ್ಟು ಸಂಕೇತ್ ಮೆಲ್ಕಾರ್ , ಸುರೇಶ್ ಕೋಣಾಜೆ, ಜಯಂತ್ ನೆಲ್ಯಾಡಿ, ಉಮೇಶ್ ನೆಲ್ಯಾಡಿ, ಇವರು ಉಪಸ್ಥಿತರಿದ್ದರು
.