Recent Posts

Sunday, January 19, 2025
ದಕ್ಷಿಣ ಕನ್ನಡಪುತ್ತೂರುರಾಜ್ಯಸುದ್ದಿ

ಅನೇಕ ಧಾರ್ಮಿಕ ಕ್ಷೇತ್ರದ ಹೊಣೆ ಹೊತ್ತು ಶ್ರಮಿಸಿದ, ಬ್ರಹ್ಮಕಲಶೋತ್ಸವದ ಅನ್ಯಾನ್ಯ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿಭಾಯಿಸಿದ ಖ್ಯಾತ ನ್ಯಾಯವಾದಿ ಮಹೇಶ್ ಕಜೆ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಉಪಾಧ್ಯಕ್ಷರಾಗಿ ನೇಮಕ – ಕಹಳೆ ನ್ಯೂಸ್

ಪುತ್ತೂರು: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಉಪಾಧ್ಯಕ್ಷರಾಗಿ ಪುತ್ತೂರಿನ ಖ್ಯಾತ ವಕೀಲ ಮಹೇಶ್ ಕಜೆ ಅವರು ನೇಮಕಗೊಂಡಿದ್ದಾರೆ. ಸಮುದಾಯಕ್ಕೆ ನಿರಂತರವಾಗಿ ಸಲ್ಲಿಸುತ್ತಿರುವ ಸೇವೆಯನ್ನು ಪರಿಗಣಿಸಿ ಮಹೇಶ್ ಕಜೆಯವರನ್ನು 2022-23ರ ಅವಧಿಗೆ ಉಪಾಧ್ಯಕ್ಷರನ್ನಾಗಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಮಹಾಸಭಾಧ್ಯಕ್ಷ ಅಶೋಕ ಹಾರನಕಳ್ಳಿ ನೇಮಕಗೊಳಿಸಿದ್ದಾರೆ.


ಉಪ್ಪಿನಂಗಡಿ ಸಮೀಪದ ‘ಕೇದಾರ’ ನಿವಾಸಿಯಾಗಿರುವ ಮಹೇಶ್ ಕಜೆಯವರು ಬೊಳುವಾರು ಕಜೆ ಲಾ ಛೇಂಬರ್ಸ್ನ ಮುಖ್ಯಸ್ಥರಾಗಿದ್ದಾರೆ. ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಮಾಜಿ ಸದಸ್ಯರೂ, ಪುತ್ತೂರು ವಕೀಲರ ಸಂಘದ ಮಾಜಿ ಅಧ್ಯಕ್ಷರೂ ಆಗಿರುವ ಮಹೇಶ್ ಕಜೆ ವಿವಿಧ ಸಂಘ ಸಂಸ್ಥೆಗಳಲ್ಲಿಯೂ ಇವರು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು