Recent Posts

Monday, January 20, 2025
ರಾಜಕೀಯರಾಜ್ಯಸುದ್ದಿ

ಸಂಪುಟ ಪುನಾರಚನೆಗೆ ಬಿಜೆಪಿ ವರಿಷ್ಠರ ಸೂಚನೆ | ಕರಾವಳಿಯ ಪ್ರಭಾವಿ ಶಾಸಕರೊಬ್ಬರ ಹೆಸರು‌‌ ವರಿಷ್ಠರ ಪಟ್ಟಿಯಲ್ಲಿ…! ; ಸಂಪುಟ ಪುನಾರಚನೆ ವರಿಷ್ಠರು ನಿರ್ಧರಿಸುತ್ತಾರೆ ಎಂದ ಬೊಮ್ಮಾಯಿ ; ವರಿಷ್ಠರು ಖಾಲಿ ಇದ್ದ ಸ್ಥಾನಗಳನ್ನು ಭರ್ತಿ ಮಾಡುವಂತೆ ಸೂಚಿಸಿದ್ದಾರೆ ಎಂದ ಜೆ.ಸಿ.ಮಾಧುಸ್ವಾಮಿ – ಕಹಳೆ ನ್ಯೂಸ್

ಬೆಂಗಳೂರು : ಸಂಪುಟ ಪುನಾರಚನೆ ಮಾಡುವ ಬಗ್ಗೆ ಬಿಜೆಪಿ ಪಕ್ಷದ ವರಿಷ್ಠರು ಚಿಂತನೆ ನಡೆಸಿದ್ದು, ಸಿಎಂ ಬೊಮ್ಮಾಯಿಯವರಿಗೆ ಸೂಚನೆ ನೀಡಿದ್ದಾರೆ. ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಪುಟ ಪುನಾರಚನೆ ವಿಚಾರ ವರಿಷ್ಠರ ಗಮನದಲ್ಲಿ ಇದೆ. ಪುನಾರಚನೆ ಯಾವಾಗ ಎಂದು ವರಿಷ್ಠರು ನಿರ್ಧರಿಸುತ್ತಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಆಕಾಂಕ್ಷಿಗಳು ಸಚಿವ ಸ್ಥಾನ ಕೇಳುವುದು ಸಹಜ. ಈ ಬಗ್ಗೆ ವರಿಷ್ಠರು ಯಾವಾಗ ಕರೆಯುತ್ತಾರೋ ಆಗ ಭೇಟಿ ಮಾಡಿ ತೀರ್ಮಾನ ಮಾಡುತ್ತೇನೆ ಎಂದು ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಸಂಪುಟ ಪುನಾರಚನೆ ಯಾವಗ ಎಂಬುದು ಗೊತ್ತಿಲ್ಲ ಆದರೆ, ವರಿಷ್ಠರು ಖಾಲಿ ಇದ್ದ ಸ್ಥಾನಗಳನ್ನು ಭರ್ತಿ ಮಾಡುವಂತೆ ಸೂಚಿಸಿದ್ದಾರೆ ಎಂದು ತಿಳಿಸಿದ್ದಾರೆ.

ಚುನಾವಣೆಗೆ ಒಂದು ವರ್ಷ ಬಾಕಿ ಇರುವಾಗ ಸಚಿವ ಸ್ಥಾನ ಖಾಲಿ ಬಿಡಬಾರದು. ಹಾಗಾಗಿ ಭರ್ತಿ ಮಾಡಬಹುದು ಎಂದ ಅವರು, ಇದೇ ತಿಂಗಳ 27ಕ್ಕೆ ಕ್ಯಾಬಿನೆಟ್ ಸಭೆ ಇದೆ. ಅದಾದ ಬಳಿಕ ಕೆಲ ನಿರ್ಧಾರ ಆಗಬಹುದು. ಜೊತೆಗೆ ಉಸ್ತುವಾರಿ ಸಚಿವರ ನೇಮಕ ಕೂಡ ಇದೇ ಸಭೆಯಲ್ಲಿ ನಿರ್ಧಾರ ಆಗಬಹುದು. ಆದರೆ ನಿಗಮ ಮಂಡಳಿಯ ಪುನಾರಚನೆ ಇಲ್ಲ. ಬದಲಾಗಿ ಖಾಲಿ ಇರುವ 18-20 ಸ್ಥಾನಗಳು ಭರ್ತಿಯಾಗಬಹುದು ಎಂದು ತಿಳಿಸಿದರು.

ಕರಾವಳಿಯ ಪ್ರಭಾವಿ ಶಾಸಕರೊಬ್ಬರ ಮೇಲೆ ಪಕ್ಷದ ವರಿಷ್ಠರ ಕಣ್ಣು..!

ಎಸ್, ಕರಾವಳಿಯ ಪ್ರಭಾವಿ ಶಾಸಕರೊಬ್ಬರ ಹೆಸರು ಮಂತ್ರಿಸ್ಥಾನದ ರೇಸ್ ನಲ್ಲಿದ್ದು, ಕುದ್ದು ಪಕ್ಷದ ಹಿರಿಯ ಮುಖಂಡರು ಹಾಗೂ ಸಂಘದ ಹಿರಿಯರು ಈ ಶಾಸಕರಿಗೆ ಸಚಿವಸ್ಥಾನ ನೀಡಲು ಶಿಫಾರಸ್ಸು ಮಾಡಿದ್ದು, ಕರಾವಳಿಗೆ ಮತ್ತೊಂದು ಸಚಿವ ಸ್ಥಾನ ಒಲಿಯುವುದು ಬಹುತೇಕ ಖಚಿತವಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 8 ವಿಧಾನಸಭಾ ಕ್ಷೇತ್ರದ ಪೈಕಿ 7 ವಿಧಾನಸಭಾ ಕ್ಷೇತ್ರದಲ್ಲೂ ಬಿಜೆಪಿ ಜೈಸಿದ್ದು, ಒಬ್ಬ ಶಾಸಕ ಮಾತ್ರ ಸಚಿವರಾಗಿದ್ದು, ಇನ್ನೊಂದು ಅವಕಾಶ ನೀಡಬೇಕು ಎಂಬುದಾಗಿ ಈ ಹಿಂದೆಯೇ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಪಕ್ಷದ ಉನ್ನತಮಟ್ಟದ ಸಭೆಯಲ್ಲಿ ಧ್ವನಿ ಎತ್ತಿದ್ದರು. ಈಗ ಸಂಘದ ಹಿರಿಯರು ಈ ಬಗ್ಗೆ ನೇರ ಪಕ್ಷದ ಹಿರಿಯರಿಗೆ ಸೂಚನೆ ನೀಡಿದ್ದು, ಸಂಪುಟ ಪುನರ್ ರಚನೆಯ ಸಂದರ್ಭದಲ್ಲಿ ಇದು ಪರಿಗಣೆಗೆ ಬರುವುದು ಬಹುತೇಕ ಖಚಿತವಾಗಿದ್ದು, ಕರಾವಳಿ ಯುವ ಶಾಸಕರೊಬ್ಬರಿಗೆ ಸಚಿವ ಸ್ಥಾನ ಒಲಿಯಲಿದೆ.