Recent Posts

Monday, January 20, 2025
ಕ್ರೈಮ್ರಾಜಕೀಯರಾಜ್ಯಸುದ್ದಿ

ಹಿಂದು ಧರ್ಮ ಬಿಟ್ಟು ಕ್ರೈಸ್ತ ಧರ್ಮ ಪಾಲಿಸಿದರೆ ಮಾತ್ರ ನೀನು ನಿನ್ನ ಹೆಂಡತಿ- ಮಗು ನೋಡಬಹುದು ; ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡೋಕೆ ಯತ್ನಿ, ಚಿತ್ರದುರ್ಗದ ಹಿಂದು ಯುವಕ ಕಣ್ಣೀರು – ಕಹಳೆ ನ್ಯೂಸ್

ಹೊಸದುರ್ಗ(ಚಿತ್ರದುರ್ಗ): ನನ್ನ ಹೆಂಡ್ತಿ-ಮಗುವನ್ನೂ ನೋಡೋಕೆ ಬಿಡ್ತಿಲ್ಲ, ಮತಾಂತರ ಆದರಷ್ಟೇ ಮನೆಗೆ ಸೇರಿಸ್ತಾರಂತೆ… ದಯವಿಟ್ಟು ನನಗೆ ನ್ಯಾಯ ಕೊಡಿಸಿ, ಬಲವಂತವಾಗಿ ನನ್ನನ್ನು ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡೋಕೆ ಯತ್ನಿಸುತ್ತಿರುವ ನನ್ನ ಮಾವನ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಹಿಂದು ಯುವಕನೊಬ್ಬ ಪೊಲೀಸ್​ ಠಾಣೆ ಮೆಟ್ಟಿಲೇರಿದ್ದಾನೆ.

ಇಂತಹ ಘಟನೆ ಚಿತ್ರದುರ್ಗ ಜಿಲ್ಲೆ ಹೊಸದುರ್ಗದಲ್ಲಿ ಸಂಭವಿಸಿದೆ. ವಿಜಯನಗರದ ಹೊಸಪೇಟೆಯ ಅರವಿಂದನಗರ ಪಕ್ಕದ ಬುಡ್ಜ ಜಂಗಮ ಕಾಲನಿಯ ನಿವಾಸಿ ದೊಡ್ಡಮಾರಪ್ಪ ನೀಡಿದ ದೂರಿನ ಮೇರೆಗೆ ಈತನ ಅಕ್ಕನ ಗಂಡ ವಸಂತ್​ಕುಮಾರ್​ ಸೇರಿ ಐವರ ವಿರುದ್ಧ ಕೇಸ್​ ದಾಖಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ದೊಡ್ಡಮಾರಪ್ಪನ ಅಕ್ಕ ಗಂಡ ವಸಂತಕುಮಾರ್. ಅಕ್ಕನ ಮಗಳು ಸರಳಾ ಎಂಬಾಕೆ ಜತೆ 2020ರ ಜುಲೈ 6ರಂದು ದೊಡ್ಡಮಾರಪ್ಪನ ಮದುವೆ ಆಗಿದೆ. ಅಂದು ದೀಕ್ಷಾ ಸ್ನಾನದ ಹೆಸರಿನಲ್ಲಿ ನೀರಿನಲ್ಲಿ ಮುಳುಗಿಸಿ ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡಿ ವಸಂತಕುಮಾರ್​ ತನ್ನ ಮಗಳು ಸರಳಾರನ್ನು ಮದುವೆ ಮಾಡಿಕೊಟ್ಟಿದ್ದರು. ಬೇರೊಂದು ಧರ್ಮ ಪಾಲಿಸಲಾಗದೆ ನಾನು ಹಿಂದು ಧರ್ಮದಲ್ಲೇ ಮುಂದವರಿದೆ ಎಂದು ದೊಡ್ಡಮಾರಪ್ಪ ದೂರಿನಲ್ಲಿ ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಮಧ್ಯೆ 2021ರ ಡಿಸೆಂಬರ್​ 2ರಂದು ಹೆರಿಗೆಗೆಂದು ನನ್ನ ಪತ್ನಿ ಸರಳಾರನ್ನು ವಸಂತಕುಮಾರ ದಂಪತಿ ತವರು ಮನೆಗೆ ಕರೆದುಕೊಂಡು ಹೋಗಿದ್ರು. ನನ್ನ ಪತ್ನಿ ಗಂಡು ಮಗುವಿಗೆ ಜನ್ಮನೀಡಿದ್ದಾರೆ. ಈ ವಿಷಯವನ್ನು ನನಗೆ ತಿಳಿಸಿರಲಿಲ್ಲ. ಹೇಗೋ ಮಾಹಿತಿ ತಿಳಿಯುತ್ತಿದ್ದಂತೆ ಮಗು ನೋಡಲು ನನ್ನ ಸಹೋದರರ ಜತೆ ಹೊಸದುರ್ಗದ ಮಾವನ ಮನೆಗೆ ಹೋದೆ. ಆದರೆ ಅವರು ನನ್ನನ್ನು ಮನೆಯೊಳಗೆ ಬಿಟ್ಟುಕೊಳ್ಳಲಿಲ್ಲ. ಹಿಂದು ಧರ್ಮ ಬಿಟ್ಟು ಕ್ರೈಸ್ತ ಧರ್ಮ ಪಾಲಿಸಿದರೆ ಮಾತ್ರ ನೀನು ನಿನ್ನ ಹೆಂಡತಿ- ಮಗು ನೋಡಬಹುದು ಎಂದು ನನ್ನ ಮಾವ ತಾಕೀತು ಮಾಡಿದರು. ಈ ವೇಳೆ ನನ್ನ ಹಾಗೂ ನನ್ನ ಸಹೋದರರಾದ ದೊಡ್ಡ ಹುಸೇನಿ, ಸಣ್ಣ ಹುಸೇನಿ, ಕಾರ್ತಿಕ, ಚಂದ್ರು ಮೇಲೆ ಹಲ್ಲೆಯನ್ನೂ ನಡೆಸಿದರು. ನಮ್ಮ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ. ಇವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ದೊಡ್ಡ ಮಾರಪ್ಪ ಹೊಸದುರ್ಗದ ಪೊಲೀಸ್​ ಠಾಣೆಗೆ 2 ದಿನದ ಹಿಂದೆ ದೂರು ನೀಡಿದ್ದಾರೆ. ದೊಡ್ಡಮಾರಪ್ಪ ನೀಡಿದ ದೂರು ಆಧರಿಸಿ ಹೊಸದುರ್ಗದ ಜಂಗಮನಗರದ ವಸಂತಕುಮಾರ್​, ರಾಮಚಂದ್ರಪ್ಪ, ಸುಧಾಕರ್​, ಮಂಜುನಾಥ್​, ಸಂಕಪ್ಪ ವಿರುದ್ಧ ದೂರು ದಾಖಲಾಗಿದೆ.