Sunday, January 19, 2025
ದಕ್ಷಿಣ ಕನ್ನಡಸಂತಾಪಸುದ್ದಿ

ಖ್ಯಾತ ಸಂಗೀತ ಕಲಾವಿದೆ ಶೀಲಾ ದಿವಾಕರ್ ನಿಧನ – ಕಹಳೆ ನ್ಯೂಸ್

ಮಂಗಳೂರು, ಜ 26 : ಕಳೆದ ಕೆಲವು ದಿನಗಳಿಂದ ಮೆದುಳಿನ ರಕ್ತಸ್ರಾವದಿಂದ ಬಳಲುತ್ತಿದ್ದ ಖ್ಯಾತ ಸಂಗೀತ ಕಲಾವಿದೆ ಶೀಲಾ ದಿವಾಕರ್(53) ಅವರು ಜನವರಿ 26 ಬುಧವಾರದಂದು ನಿಧನರಾಗಿದ್ದಾರೆ.

ಶೀಲಾ ಅವರ ಸಂಗೀತದ ಸಾಧನೆ ಮತ್ತು ಸೇವೆಯನ್ನು ಗುರುತಿಸಿ ಆರ್ಯಭಟ ಪ್ರಶಸ್ತಿ ನೀಡಲಾಗಿತ್ತು. ಅವರು ಕಳೆದ 30 ವರ್ಷಗಳಿಂದ ಸಂಗೀತ ಕಲಿಸುತ್ತಿದ್ದು, ವಿದ್ಯಾರ್ಥಿಗಳಿಗೂ ಸಂಗೀತ ಕಲಿಸುತ್ತಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಶೀಲಾ ಅವರು ದಿವಂಗತ ನಾಗರಾಜ್ ರಾವ್ ಮತ್ತು ದಿವಂಗತ ಶ್ರೀಮತಿ ನಾಗರಾಜ್ ಅವರಿಗೆ ಜೂನ್ 28, 1968 ರಂದು ಹೊಸಬೆಟ್ಟು ಗ್ರಾಮದಲ್ಲಿ ಜನಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇನ್ನು ಮೃತರು ಪತಿ ದಿವಾಕರ್, ಮಗ ಧೀರಜ್ ರಾವ್ ಮತ್ತು ಮಗಳು ನವ್ಯಾ ರಾವ್ ಅವರನ್ನು ಅಗಲಿದ್ದಾರೆ.