Sunday, November 24, 2024
ಹೆಚ್ಚಿನ ಸುದ್ದಿ

ಕರ್ನಾಟಕದ ಐವರಿಗೆ ಒಲಿದ ಪದ್ಮಶ್ರೀ ; ವಿಟ್ಲದ ಅಮೈ ಮಹಾಲಿಂಗ ನಾಯ್ಕರಿಗೂ ಪ್ರಶಸ್ತಿ – ಕಹಳೆ ನ್ಯೂಸ್

ಹೊಸದಿಲ್ಲಿ: ಬಹು ನಿರೀಕ್ಷೆಯ ಪದ್ಮಶ್ರೀ ಪ್ರಶಸ್ತಿ ಪಟ್ಟಿ ಪ್ರಕಟವಾಗಿದ್ದು, ಕರ್ನಾಟಕದ ಐವರಿಗೆ ಪದ್ಮಶ್ರೀ ಪ್ರಶಸ್ತಿ ಗೌರವ ಸಂದಿದೆ. ಕರ್ನಾಟಕದ ಅಮೈ ಮಹಾಲಿಂಗ ನಾಯ್ಕ, ಎಚ್.ಆರ್. ಕೇಶವಮೂರ್ತಿ, ಸುಬ್ಬಣ್ಣ ಅಯ್ಯಪ್ಪನ್, ಅಬ್ದುಲ್ ಖಾದರ್ ನಡಕಟ್ಟಿನ್ ಮತ್ತು ಮರಣೋತ್ತರವಾಗಿ ಸಾಹಿತಿ ಸಿದ್ದಲಿಂಗಯ್ಯ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಲಾಗುತ್ತಿದೆ.

ಪ್ರತೀ ವರ್ಷದಂತೆ ಈ ವರ್ಷವೂ ಮೂರು ವಿಭಾಗಗಳಲ್ಲಿ ಪ್ರಶಸ್ತಿ ನೀಡಲಾಗುತ್ತಿದ್ದು, ಕಲೆ, ಸಾಮಾಜಿಕ ಕೆಲಸ, ಸಾರ್ವಜನಿಕ ವ್ಯವಹಾರ, ವಿಜ್ಞಾನ ಮತ್ತು ತಂತ್ರಜ್ಞಾನ, ವ್ಯಾಪಾರ ಮತ್ತು ಉದ್ಯಮ, ವೈದ್ಯಕೀಯ, ಸಾಹಿತ್ಯ ಮತ್ತು ಶಿಕ್ಷಣ, ಕ್ರೀಡೆ, ನಾಗರಿಕ ಸೇವೆ ವಿಭಾಗಗಳಲ್ಲಿ ಪ್ರಶಸ್ತಿ ನೀಡಲಾಗಿದೆ. ಈ ವರ್ಷ ಒಟ್ಟು 128 ಮಂದಿಗೆ ಪ್ರಶಸ್ತಿ ನೀಡಲಾಗುತ್ತಿದ್ದು, ಇದರಲ್ಲಿ ನಾಲ್ವರಿಗೆ ಪದ್ಮವಿಭೂಷಣ, 17 ಮಂದಿಗೆ ಪದ್ಮಭೂಷಣ ಮತ್ತು 107 ಮಂದಿಗೆ ಪದ್ಮಶ್ರೀ ಪ್ರಶಸ್ತಿ ಘೋಷಿಸಲಾಗಿದೆ. 34 ಮಂದಿ ಮಹಿಳೆಯರು, 10 ಮಂದಿ ವಿದೇಶಿ/ಎನ್‍ಆರ್‍ಐಗಳು, 13 ಮಂದಿಗೆ ಮರಣೋತ್ತರವಾಗಿ ಪ್ರಶಸ್ತಿ ನೀಡಲಾಗುತ್ತದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ರಾಜ್ಯದ ಐವರಿಗೆ ಗೌರವ
1.ಸುಬ್ಬಣ್ಣ ಅಯ್ಯಪ್ಪನ್: ವಿಜ್ಞಾನ ಮತ್ತು ತಂತ್ರಜ್ಞಾನ
2.ಎಚ್.ಆರ್. ಕೇಶವಮೂರ್ತಿ: ಕಲೆ
3.ಅಬ್ದುಲ್ ಖಾದರ್ ನಡಕಟ್ಟಿನ್: ಆವಿಷ್ಕಾರ
4.ಅಮೈ ಮಹಾಲಿಂಗ ನಾಯ್ಕ: ಕೃಷಿ
5.ಸಿದ್ದಲಿಂಗಯ್ಯ (ಮರಣೋತ್ತರ): ಸಾಹಿತ್ಯ

ಜಾಹೀರಾತು
ಜಾಹೀರಾತು
ಜಾಹೀರಾತು