Breaking News : ಪೇಜಾವರ ಶ್ರೀ ಇಪ್ತಾರ್ ಕೂಟ ; ತುಷ್ಟೀಕರಣದ ರಾಜಕೀಯದ ವಿರುದ್ಧ ಹಿಂದೂ ಸಂಘಟನೆಗಳ ಯುವರಿಂದ ತೀವ್ರ ಆಕ್ರೋಶ – ಕಹಳೆ ನ್ಯೂಸ್
ಉಡುಪಿ : ಮುಸಲ್ಮಾನ ನಾಯಕರು ಒಪ್ಪಿಗೆ ಸೂಚಿಸಿದರೆ ಈ ಬಾರಿಯೂ ಸತ್ಕಾರ ಕೂಟ ಮಾಡುತ್ತೇನೆ ಎಂದು ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕಳೆದ ಬಾರಿಯಂತೆ ಈ ಬಾರಿಯೂ ಇಫ್ತಾರ್ ಕೂಟ ಮಾಡಬೇಕು ಎಂಬ ಭಾವನೆ ಇದೆ. ಆದರೆ ಈ ಬಾರಿ ಮುಸ್ಲಿಮರು ಇಫ್ತಾರ್ ಕೂಟಕ್ಕೆ ಉತ್ಸಾಹ ತೋರಿಸುತ್ತಿಲ್ಲ. ಮುಸಲ್ಮಾನ ನಾಯಕರು ಒಪ್ಪಿಗೆ ಸೂಚಿಸಿದರೆ ಈ ಬಾರಿಯೂ ಸತ್ಕಾರ ಕೂಟ ಮಾಡುತ್ತೇನೆ. ಎಂದು ಹೇಳಿದ್ದಾರೆ.
ಕಳೆದ ಬಾರಿ ನಡೆದಿದ್ದ ಇಫ್ತಾರ್ ಕೂಟ ಬಹಳ ಚರ್ಚೆಗೆ ಕಾರಣವಾಗಿತ್ತು. ಮೂರ್ತಿ ಇರುವಲ್ಲಿ ಕಾರ್ಯಕ್ರಮ ಆಯೋಜಿಸಲು ಮುಸಲ್ಮಾನರು ಒಪ್ಪಿಗೆ ನೀಡುತ್ತಿಲ್ಲ. ಇದೇ 13ರಂದು ನಗರದ ಗೋವಿಂದ ಕಲ್ಯಾಣ ಮಂಟಪದಲ್ಲಿ ಇಫ್ತಾರ್ ಕೂಟ ಆಯೋಜಿಸಲು ನಿರ್ಧರಿಸಲಾಗಿದೆ. ಆದರೆ, ಇಫ್ತಾರ್ ಕೂಟದಲ್ಲಿ ಭಾಗವಹಿಸಬೇಕೆ ಬೇಡವೇ ಎಂಬ ಬಗ್ಗೆ ಮುಸ್ಲಿಂ ಸಮಾಜದ ಮುಖಂಡರಿಂದ ಇದುವರೆಗೂ ಒಮ್ಮತದ ತೀರ್ಮಾನವಾಗಿಲ್ಲ ಎಂದು ತಿಳಿಸಿದ್ದಾರೆ.
ದೇಶದಲ್ಲಿ ಎಲ್ಲರನ್ನೂ ಸಮಾನವಾಗಿ ಕಾಣಬೇಕು. ಎಲ್ಲರಿಗೂ ಒಂದೇ ನ್ಯಾಯ ಇರಬೇಕು. ಅಲ್ಪಸಂಖ್ಯಾತರನ್ನು ಮತ್ತು ಬಹು ಸಂಖ್ಯಾತರನ್ನು ಸಮಾನವಾಗಿ ಕಾಣಬೇಕು. ಸಂವಿಧಾನ ಬದಲಿಸಿ ಅಂತ ನಾನು ಯಾವತ್ತೂ ಹೇಳಿಲ್ಲ. ಸರ್ಕಾರದ ಯೋಜನೆಗಳು ಎಲ್ಲಾ ಧರ್ಮದ ಬಡವರಿಗೆ ಸಿಗಬೇಕು ಎಂದು ಪೇಜಾವರ ಶ್ರೀ ಹೇಳಿದ್ದಾರೆ.
ಹಿಂದೂ ಸಂಘಟನೆಗಳು ಮತ್ತು ಪರಿವಾರ ಸಂಘಟನೆಯ ಯುವಕರು ಪೇಜಾವರ ಶ್ರೀಗಳ ನಡೆಯನ್ನು ಖಂಡಿಸಿ ತೀವ್ರ ಆಕ್ರೋಶ ಮತ್ತು ಆಸಮಾಧಾನ ಹೊರಹಾಕಿದ್ದಾರೆ. ಸಮಾಜಿಕ ಜಾಲತಾಣಗಳಲ್ಲಿ ಶ್ರೀಗಳ ಹೇಳಿಕೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ.