ಸ್ಯಾಂಡಲ್‍ವುಡ್ ನಟ ಕಂ ನಿರ್ದೇಶಕನ ವಿರುದ್ಧ ಅತ್ಯಾಚಾರ ಪ್ರಕರಣ ; ಸಹ ನಟಿ ಬಾಳಿನಲ್ಲಿ ಆಕ್ಷನ್ ಕಟ್ ಹೇಳಿದ ನಟ, ನಿರ್ದೇಶಕ ಹರ್ಷವರ್ಧನ್ ಸೆಕ್ಸ್ ಸ್ಕ್ಯಾಂಡಲ್ ಸ್ಟೋರಿ – ಕಹಳೆ ನ್ಯೂಸ್
ಬೆಂಗಳೂರು: ಸ್ಯಾಂಡಲ್‍ವುಡ್ ನಾಯಕ ನಟ, ನಿರ್ದೇಶಕರೊಬ್ಬರ ವಿರುದ್ಧ ಅತ್ಯಾಚಾರ ಪ್ರಕರಣವೊಂದು ದಾಖಲಾಗಿದೆ. ಇನ್ನೊಬ್ಬಳ ಬಾಳಿನಲ್ಲಿ ಆಕ್ಷನ್ ಕಟ್ ಹೇಳಿದ ಸೆಕ್ಸ್ ಸ್ಕ್ಯಾಂಡಲ್ ಸ್ಟೋರಿ ಇದಾಗಿದೆ.
ವಿಷನ್ 2023 ಚಿತ್ರದ ನಿರ್ದೇಶಕ ಮತ್ತು ನಾಯಕ ನಟನಾಗಿರುವ ಹರ್ಷವರ್ಧನ್ ವಿರುದ್ಧ ಈ ಆರೋಪ ಕೇಳಿಬಂದಿದೆ. ನೀಲಿ ಚಿತ್ರ ತೋರಿಸಿ ಸಹ ನಟಿಯ ಮೇಲೆ ನಿರಂತರವಾಗಿ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಿ ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ.
ಮದುವೆಯಾಗುವುದಾಗಿ ನಂಬಿಸಿ ಹರ್ಷವರ್ಧನ್, 8 ತಿಂಗಳ ಕಾಲ ನಿರಂತರ ಅತ್ಯಾಚಾರ ನಡೆಸಿದ್ದಾರೆ ಎಂದು ಆರೋಪಿಸಿ ಸಹ ನಟಿ ದೂರು ನೀಡಿದ್ದಾರೆ. ನಟಿಯ ದೂರಿನ ಆಧಾರದ ಮೇಲೆ ಇದೀಗ ಹರ್ಷವರ್ಧನ್ ವಿರುದ್ಧ ಪೊಲೀಸರು ಎಫ್‍ಐಆರ್ ದಾಖಲು ಮಾಡಿಕೊಂಡು ಬಂಧಿಸಿದ್ದಾರೆ. ಅಲ್ಲದೆ ನ್ಯಾಯಾಂಗ ಬಂಧನಕ್ಕೆ ಕಳುಹಿದ್ದಾರೆ.
ಈ ಸಂಬಂಧ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.