Saturday, September 21, 2024
ದಕ್ಷಿಣ ಕನ್ನಡಬಂಟ್ವಾಳರಾಜ್ಯಸುದ್ದಿ

ಅಮೈ ಮಹಾಲಿಂಗ ನಾಯ್ಕರ ಮನೆಗೆ ಪೇಜಾವರ ಶ್ರೀ ದಿಢೀರ್ ಭೇಟಿ ; ” ನಾಯ್ಕರ ಸಾಧನೆ ದೇಶಕ್ಕೆ ಮಾತ್ರವಲ್ಲ, ಜಗತ್ತಿಗೇ ಸ್ಫೂರ್ತಿ ” ಪೇಜಾವರ ಶ್ರೀ – ಕಹಳೆ ನ್ಯೂಸ್

ಮಂಗಳೂರು :  ಭಾರತ ಸರ್ಕಾರದಿಂದ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಯಾಗಿರುವ ಸಾಹಸಿ ರೈತ ಅಮೈ ಮಹಾಬಲ ನಾಯ್ಕರ ತೋಟಕ್ಕೆ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಭೇಟಿ ನೀಡಿದರು.

ಶ್ರೀಗಳವರ ದಿಢೀರ್ ಭೇಟಿಯಿಂದ ಅಚ್ಚರಿಗೊಂಡ ನಾಯ್ಕರು ಅತೀವ ಸಂತಸಪಟ್ಟು ಭಕ್ತಿ ಗೌರವದಿಂದ ಬರಮಾಡಿಕೊಂಡರು .

 

ಜಾಹೀರಾತು
ಜಾಹೀರಾತು
ಜಾಹೀರಾತು

ನಾಯ್ಕರ ತೋಟಕ್ಕೆ ತೆರಳಿದ ಶ್ರೀಗಳು ಭಗೀರಥ ಯತ್ನದಿಂದ ಕೊರೆದ ಸುರಂಗದ ಒಳಹೊಕ್ಕು ವಿಸ್ಮಯಗೊಂಡರು . ಸುರಂಗ ಕೊರೆದು ಗಂಗೆಯನ್ನು ಪಡೆದ ಯಶೋಗಾಥೆಯನ್ನು ನಾಯ್ಕರಿಂದಲೇ ಕೇಳಿ , ತುಂಬಿರುವ ಸಮೃದ್ದ ಜಲಸೆಲೆಯನ್ನು ಕಂಡು ಸಂತಸವ್ಯಕ್ತಪಡಿಸಿದರು . ತೋಟದಲ್ಲಿ ಸಮೃದ್ಧವಾಗಿ ಬೆಳೆದು ನಿಂತು ನಾಯ್ಕರ ಸಾರ್ಥಕ ಶ್ರಮದ ಫಲಕ್ಕೆ ಸಾಕ್ಷಿ ಹೇಳುತ್ತಿರುವ ತೆಂಗು ಕಂಗು , ಬಾಳೆ ಮಾವು ಹಲಸು ಮೊದಲಾದವುಗಳನ್ನು ವೀಕ್ಷಿಸಿದ ಬಳಿಕ ಮನೆಗೆ ಮರಳಿದ ಶ್ರೀಗಳವರಿಗೆ ನಾಯ್ಕರು ಮತ್ತವರ ಮನೆ ಮಂದಿ …ಗೌರವಾರ್ಪಣೆಗೈದರು.

ಜಾಹೀರಾತು

ನಾಯ್ಕರ ಕೃಷಿಯ ಅವಿರತ ಸಾಧನೆಯನ್ನು ಮನಸಾರೆ ಬಣ್ಣಿಸಿದ ಶ್ರೀಗಳು ಪದ್ಮಶ್ರೀ ಪುರಸ್ಕಾರಕ್ಕೆ ಆಯ್ಕೆಯಾಗಿರುವುದು ಅತ್ಯಂತ ಅಭಿನಂದನೀಯ ಎಂದರು . ನಾಯ್ಕರಿಗೆ ಶಾಲು , ಶ್ರೀಕೃಷ್ಣನವಿಗ್ರವಿರುವ ಕಾಷ್ಠಮಂಟಪದ ಸ್ಮರಣಿಕೆ , ನಗದು , ಫಲ ಮಂತ್ರಾಕ್ಷತೆ ನೀಡಿ ಆಶೀರ್ವದಿಸಿದರು . ಸ್ಥಳೀಯರಾದ ಜನಾರ್ದನ ಭಟ್ , ಪಂಚಾಯತ್ ಅಧ್ಯಕ್ಷರು ಸದಸ್ಯರು ಉಪಸ್ಥಿತರಿದ್ದರು .