Recent Posts

Sunday, January 19, 2025
ದಕ್ಷಿಣ ಕನ್ನಡಸುದ್ದಿ

ನಾಗರಿಕರ ದಶಕದ ಹಿಂದಿನ ಬೇಡಿಕೆಯನ್ನು ತಮ್ಮ ಶಾಸಕತ್ವದ ಮೊದಲ ಅವಧಿಯಲ್ಲಿಯೇ ಈಡೇರಿಸಿದ ಡಾ. ಭರತ್ ಶೆಟ್ಟಿ ವೈ – ಕಹಳೆ ನ್ಯೂಸ್

ಮಂಗಳೂರು: ಕಲ್ಪನೆ (ಬಿ.ಸಿ.ರೋಡು)ಯಿಂದ ಬೊಂಡಂತಿಲದ ತಾರಿಗುಡ್ಡೆಯಾಗಿ ಮಂಗಳೂರಿಗೆ ಸಂಪರ್ಕಿಸುವ ಸರಕಾರಿ ಬಸ್ ಸಾರಿಗೆ ವ್ಯವಸ್ಥೆಗೆ ಮಂಗಳೂರು ನಗರ ಉತ್ತರ ಶಾಸಕರಾದ ಡಾ.ಭರತ್ ಶೆಟ್ಟಿ ವೈ ಚಾಲನೆ ನೀಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಭಾಗದಲ್ಲಿ ಸೂಕ್ತ ಬಸ್ ವ್ಯವಸ್ಥೆ ಇಲ್ಲದೆ ಗ್ರಾಮಸ್ಥರು ನಿತ್ಯ ಸಮಸ್ಯೆ ಅನುಭವಿಸುತ್ತಿದ್ದರು. ಈ ಕುರಿತು ಶಾಸಕರಾದ ಡಾ.ಭರತ್ ಶೆಟ್ಟಿಯವರಿಗೆ ಮನವಿ ಸಲ್ಲಿಸಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜನರ ಬೇಡಿಕೆಗೆ ಸ್ಪಂದಿಸಿದ ಶಾಸಕರು ಕೆಎಸ್ ಆರ್ ಟಿಸಿ ಅಧಿಕಾರಿಗಳೊಂದಿಗೆ ಸಂವಹನ ನಡೆಸಿ ನಾಗರಿಕರ ದಶಕದ ಹಿಂದಿನ ಬೇಡಿಕೆಯನ್ನು ಈಡೇರಿಸುವಲ್ಲಿ ಶ್ರಮಿಸಿದ್ದಾರೆ. ತಮ್ಮ ಬಹುಕಾಲದ ನಿರೀಕ್ಷೆಯನ್ನು ಈಡೇರಿಸಿದ್ದಕ್ಕಾಗಿ ನಾಗರಿಕರು ಶಾಸಕರನ್ನು ಅಭಿನಂದಿಸಿ ಹರ್ಷ ವ್ಯಕ್ತಪಡಿಸಿದ್ದಾರೆ.

ಈ ಸಂದರ್ಭದಲ್ಲಿ ಗೋಪಾಲ್ ಪೂಜಾರಿ, ಚಂದ್ರಶೇಖರ್ ತಾರಿಗುಡ್ಡೆ, ಕೆಎಸ್ ಆರ್ ಟಿಸಿ ಅಧಿಕಾರಿಗಳು, ಗಣ್ಯರು, ಪ್ರಮುಖರು, ಸ್ಥಳೀಯರು ಉಪಸ್ಥಿತರಿದ್ದರು.