Recent Posts

Sunday, January 19, 2025
ಸುದ್ದಿ

ತೋಟದ ಮನೆಯಲ್ಲಿ ವೇಶ್ಯಾವಾಟಿಕೆ, ಪೊಲೀಸರ ದಾಳಿ ; ಇಬ್ಬರು ಅಂದರ್ – ಬೆಂಗಳೂರಿನ 38 ವರ್ಷದ ಮಹಿಳೆ, ತೀರ್ಥಹಳ್ಳಿಯ 28 ವರ್ಷದ ಯುವತಿ ಹಾಗೂ ಕುಂದಾಪುರದ 22 ವರ್ಷದ ಯುವತಿಯರ ರಕ್ಷಣೆ – ಕಹಳೆ ನ್ಯೂಸ್

ಶಿವಮೊಗ್ಗ(ಜ.30):  ವೇಶ್ಯಾವಾಟಿಕೆ (Prostitution) ಅಡ್ಡೆ ಮೇಲೆ ಮಹಿಳಾ ಠಾಣೆಯ ಪೋಲಿಸರು ದಾಳಿ(Raid) ಮಾಡಿ ವೃದ್ಧ ಸೇರಿ ಇಬ್ಬರ ಬಂಧಿಸಿ ಮೂವರು ಮಹಿಳೆಯರನ್ನ(Woman) ರಕ್ಷಿಸಿದ ಘಟನೆ ನಗರದ ಹೊರವಲಯದಲ್ಲಿ ಇಂದು(ಭಾನುವಾರ) ನಡೆದಿದೆ. ಬಂಧಿತರನ್ನ(Arrest) ದುರ್ಗಿಗುಡಿ ಕೆ.ಎಚ್.ಶಂಕರ್ ಮತ್ತು ಭೋಜಪ್ಪ ಕ್ಯಾಂಪ್‌ನ ಮುನಿಯಪ್ಪ ಎಂದು ಗುರುತಿಸಲಾಗಿದೆ. 

ಖಚಿತ ಮಾಹಿತಿ ಮೇರೆಗೆ ನಗರದ ಹೊರವಲಯದಲ್ಲಿ ತೋಟದ ಮನೆ ಮೇಲೆ ಪೊಲೀಸರು(Police) ದಾಳಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ದಾಳಿ ವೇಳೆ ಬೆಂಗಳೂರಿನ (Bengaluru) 38 ವರ್ಷದ ಮಹಿಳೆ, ತೀರ್ಥಹಳ್ಳಿಯ 28 ವರ್ಷದ ಯುವತಿ ಹಾಗೂ ಕುಂದಾಪುರ ತಾಲೂಕಿನ 22 ವರ್ಷದ ಯುವತಿಯನ್ನ ರಕ್ಷಣೆ ಮಾಡಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸೊಗಾನೆ ಬಳಿಯಿರುವ ಭೋಜಪ್ಪ ಕ್ಯಾಂಪ್‌ನ ತೋಟದ ಮನೆಯಲ್ಲಿ ಅಕ್ರಮ ಚಟುವಟಿಕೆ(Illegal Activity) ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಪೊಲೀಸರು ಈ ಕಾರ್ಯಾಚರಣೆಯನ್ನ ಮಾಡಿದ್ದಾರೆ. ಮಹಿಳಾ ಠಾಣೆ ಇನ್‌ಸ್ಪೆಕ್ಟರ್ ವೀರೇಶ್ ಅವರ ನೇತೃತ್ವದಲ್ಲಿ ದಾಳಿ ಮಾಡಲಾಗಿದೆ ಅಂತ ತಿಳಿದು ಬಂದಿದೆ. ದಾಳಿ ವೇಳೆ ಪೊಲೀಸರು ಒಂದು ಬೈಕ್‌ನ್ನು ಜಪ್ತಿ ಮಾಡಿದ್ದಾರೆ. ಈ ಸಂಬಂಧ ತುಂಗಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು