Recent Posts

Sunday, January 19, 2025
ದಕ್ಷಿಣ ಕನ್ನಡಸುದ್ದಿ

ಕಂಕನಾಡಿ ಕುದ್ಕೋರಿ ಗುಡ್ಡೆ ಕಾಲುಸಂಕ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ ಶಾಸಕ ವೇದವ್ಯಾಸ್ ಕಾಮತ್ – ಕಹಳೆ ನ್ಯೂಸ್

ಮಂಗಳೂರು: ಮಹಾನಗರ ಪಾಲಿಕೆಯ ಕದ್ರಿ ಶಿವಭಾಗ್ ವಾರ್ಡಿನ ಕಂಕನಾಡಿ ಕುದ್ಕೋರಿ ಗುಡ್ಡೆಯಲ್ಲಿ ಕಾಲುಸಂಕ ನಿರ್ಮಾಣ ಕಾಮಗಾರಿಗೆ ಶಾಸಕ ವೇದವ್ಯಾಸ್ ಕಾಮತ್ ಭೂಮಿಪೂಜೆ ನೆರವೇರಿಸಿದರು.

ಬಳಿಕ ಮಾತನಾಡಿದ ಶಾಸಕರು, ನಗರದ ವಿವಿಧ ಭಾಗಗಳಲ್ಲಿ ರಾಜ್ಯ ಸರಕಾರದ ಲೋಕೋಪಯೋಗಿ ಇಲಾಖೆಯ ಮೂಲಕ ಸಾಕಷ್ಟು ಅನುದಾನಗಳನ್ನು ಜೋಡಿಸಲಾಗಿದೆ. ಕಾಲುಸಂಕ ನಿರ್ಮಾಣ ಕಾಮಗಾರಿಗೆ ವಿವಿಧ ಕಡೆಗಳಲ್ಲಿ ಅನುದಾನ ಬಿಡುಗಡೆಗೊಳಿಸಿದ್ದು ಕುದ್ಕೋರಿ ಗುಡ್ಡೆಯಲ್ಲಿ ಕಾಲುಸಂಕ ನಿರ್ಮಾಣಕ್ಕಾಗಿ ಭೂಮಿಪೂಜೆ ನೆರವೇರಿಸಲಾಗಿದೆ ಎಂದು ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ಸ್ಥಳೀಯ ಕಾರ್ಪೋರೇಟರ್ ಕಾವ್ಯಾ ನಟರಾಜ್ ಆಳ್ವ, ಪಾಲಿಕೆ ಮುಖ್ಯ ಸಚೇತಕರಾದ ಸುಧೀರ್ ಶೆಟ್ಟಿ ಕಣ್ಣೂರು, ಪಾಲಿಕೆ ನಾಮನಿರ್ದೇಶಿತ ಸದಸ್ಯರಾದ ಭಾಸ್ಕರ್ ಚಂದ್ರ ಶೆಟ್ಟಿ, ಬಿಜೆಪಿ ಮುಖಂಡರಾದ ವಿಜಯ್ ಕುಮಾರ್ ಶೆಟ್ಟಿ, ಅಜಯ್ ಕುಲಶೇಖರ, ಕಿರಣ್ ರೈ ಎಕ್ಕೂರು, ನವೀನ್ ಶೆಣೈ, ವರುಣ್ ಅಂಬಟ್, ನಾಗೇಶ್ ಕುದ್ಕೋರಿಗುಡ್ಡೆ, ಯೋಗಿಶ್ ಶೆಣೈ, ರಾಧಾಕೃಷ್ಣ, ವಸಂತ್ ಜೆ ಪೂಜಾರಿ, ಮಹಾಬಲ ಸಾಲ್ಯಾನ್, ವಿಜಯ್ ಹೊಸಮನೆ, ಸತೀಶ್, ಚೇತನ್, ಪ್ರಕಾಶ್, ನವೀನ್, ನಟರಾಜ್ ಆಳ್ವ ಮುಂತಾದವರು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು