Recent Posts

Sunday, January 19, 2025
ಪುತ್ತೂರುಬಂಟ್ವಾಳಸುದ್ದಿ

ಬರಿಮಾರು ಗ್ರಾ.ಪಂ. ವ್ಯಾಪ್ತಿಯ ಬಿಜೆಪಿ ಬೂತ್ ಸಮಿತಿ ಅಧ್ಯಕ್ಷರುಗಳ ಮನೆ ಬೇಟಿ ಮಾಡಿ ನಾಮಫಲಕ ಅನಾವರಣ ಕಾರ್ಯಕ್ರಮ- ಕಹಳೆ ನ್ಯೂಸ್

ಬಂಟ್ವಾಳ ವಿಧಾನ ಸಭಾ ಕ್ಷೇತ್ರದಲ್ಲಿರುವ ಪ್ರತಿ ಮನ ಮತ್ತು ಮನೆಯನ್ನು ಬಿಜೆಪಿಯತ್ತ ಸೆಳೆಯುವ ಕೆಲಸವನ್ನು ಬಿಜೆಪಿ ಕಾರ್ಯಕರ್ತರು ಮಾಡಬೇಕು ಎಂದು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಅವರು ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಬರಿಮಾರು ಗ್ರಾ.ಪಂ. ವ್ಯಾಪ್ತಿಯ ಬಿಜೆಪಿ ಬೂತ್ ಸಮಿತಿ ಅಧ್ಯಕ್ಷರುಗಳ ಮನೆ ಬೇಟಿ ಮಾಡಿ ನಾಮಫಲಕ ಅನಾವರಣ ಕಾರ್ಯಕ್ರಮ ಹಾಗೂ ವಿವಿಧ ಕಾಮಗಾರಿಗಳ ಉದ್ಘಾಟನೆ ನಡೆಸಿ ಮಾತನಾಡಿದರು.

ಮುಂದಿನ ದಿನಗಳಲ್ಲಿ ಬರುವ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಿವುದಕ್ಕಾಗಿ ಕಾರ್ಯಕರ್ತರು ಇಂದಿನಿಂದಲೇ ಕಾರ್ಯಪ್ರವೃತ್ತರಾಗಬೇಕು ಎಂದು ಹೇಳಿದರು.
ಸರಕಾರದ ಸಾಧನೆಗಳು, ಅಭಿವೃದ್ಧಿಗಳು ಹಾಗೂ ಸರಕಾರದ ಯೋಜನೆಗಳು ಗ್ರಾಮದ ಜನರಿಗೆ ತಿಳಿಸುವ ಕಾರ್ಯಗಳನ್ನು ಕಾರ್ಯಕರ್ತರು ಮಾಡಬೇಕು.
ಕಾರ್ಯಕರ್ತರು ನಿಷ್ಠೆಯಿಂದ ಪಕ್ಷದ ಸಿದ್ದಾಂತವನ್ನು ಅರಿತುಕೊಂಡು ಸಂಘಟನೆಗೆ ಹೆಚ್ಚಿನ ಒತ್ತು ನೀಡುವಂತೆ ಅವರು ತಿಳಿಸಿದರು. ಜನರ ಪ್ರೀತಿ ವಿಶ್ವಾಸಕ್ಕೆ ಯಾವುದೇ ಕುಂದುಬಾರದ ರೀತಿಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡುವ ಭರವಸೆ ನೀಡಿದರು.

ಬೂತ್ ಸಂಖ್ಯೆ 160ರ ಸಂತೋಷ್ ಕುಮಾರ್ ಬೂತ್ ಸಂಖ್ಯೆ 161ರ ಅಧ್ಯಕ್ಷ ವಸಂತ ಕಲ್ಲೆಟ್ಟಿ,ಬೂತ್ ಸಂಖ್ಯೆ 162 ರ ಅಧ್ಯಕ್ಷ ವಿನಯ ಕುಮಾರ್ ಅವರ ಮನೆಗೆ ಬೇಟಿ ನೀಡಿ ನಾಮಫಲಕ ಅನಾವರಣ ಮಾಡಿ ಗೌರವ ಸಲ್ಲಿಸಿದರು.

ಬಿಜೆಪಿ ಮಂಡಲದ ಪ್ರಧಾನ ಕಾರ್ಯದರ್ಶಿ ಡೊಂಬಯ್ಯ ಅರಳ ಮಾತನಾಡಿ ಭಾರತೀಯ ಜನತಾಪಕ್ಷಕ್ಕೆ ಶಕ್ತಿಯನ್ನು ತುಂಬುವ ಕಾರ್ಯಕರ್ತರಿಗೆ ಮಾನ್ಯತೆ ನೀಡುವ ವಿಶೇಷ ಕಾರ್ಯಕ್ರಮ ನಾಮಫಲಕ ಅನಾವರಣ ವಾಗಿದೆ ಎಂದು ಅವರು ಹೇಳಿದರು.ಮುಂದಿನ ದಿನಗಳಲ್ಲಿ ಪ್ರತಿ ಮನೆಯೂ ಬಿಜೆಪಿ ಮನೆಯಾಗುವ ನಿಟ್ಟಿನಲ್ಲಿ ಕಾರ್ಯಪದ್ದತಿಯಲ್ಲಿ ಕೆಲಸವನ್ನು ಮಾಡುತ್ತಿದೆ.

ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ರವೀಶ್ ಶೆಟ್ಟಿ ಕರ್ಕಳ, ಕಾರ್ಯದರ್ಶಿ ರಮನಾಥ ರಾಯಿ, ಗ್ರಾ.ಪಂ.ಅಧ್ಯಕ್ಷ ಶಶಿಕಲಾ , ಉಪಾಧ್ಯಕ್ಷ ಸದಾಶಿವ, ಬಾಳ್ತಿಲ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಮೋಹನ್ ಪಿ.ಎಸ್. ಪ್ರಧಾನ ಕಾರ್ಯದರ್ಶಿ ಅಶ್ವಥ್ ಬರಿಮಾರು, ಪ್ರಮುಖರಾದ ಯಶೋಧರ ಕರ್ಬೆಟ್ಟು, ಆನಂದ ಪಾಪೆತ್ತಿಮಾರು, ಶಿವಾನಂದ ಕರ್ತೆಕೋಡಿ, ಧನಂಜಯ ಬಲ್ಯ, ಸುಧಾಕರ ಸಪಲ್ಯ, ದಿನಕರ ಅಂಚನ್ ಮತ್ತಿತರರು ಉಪಸ್ಥಿತರಿದ್ದರು.