Friday, September 20, 2024
ದಕ್ಷಿಣ ಕನ್ನಡಸುದ್ದಿ

ಜೈನಧರ್ಮದ ಯುಗಲ ಮುನಿ ಮಹಾರಾಜರ ಅಹಿಂಸಾ ಸಂದೇಶದಿಂದ ಪಾವನವಾಯಿತು ಕಡಲ ನಗರಿ ಮಂಗಳೂರು –ಕಹಳೆ ನ್ಯೂಸ್

ಮಂಗಳೂರು: ಸೋಮವಾರ ಮಂಗಳೂರು ಬಜಿಲಕೇರಿಯಲ್ಲಿ ಭಗವಾನ್ ಆಧಿನಾಥ ತೀಥರ್ಂಕರರ ಮೋಕ್ಷಕಲ್ಯಾಣ ಪೂಜೆಯು ಪ್ರಜ್ಞಾಶ್ರಮಣ ಆಚಾರ್ಯ ರತ್ನ ಪರಮ ಪೂಜ್ಯ 108 ದೇವನಂದಿ ಮಹಾರಾಜರ ಪರಮ ಶಿಷ್ಯರಾದ ಯುಗಲ ಮುನಿ ಖ್ಯಾತಿಯ ಪರಮ ಪೂಜ್ಯ ಮುನಿಶ್ರೀ 108 ಅಮೋಘಕೀರ್ತಿ ಮಹಾರಾಜ್ ಮತ್ತು ಪರಮ ಪೂಜ್ಯ ಮುನಿಶ್ರೀ 108 ಅಮರಕೀರ್ತಿ ಮಾಹಾರಾಜ್ ರವರ ಪಾವನ ಸಾನಿಧ್ಯದಲ್ಲಿ ವೈಭವೋಪೇತವಾಗಿ ಜರಗಿತು. ತದನಂತರ ಮುನಿವರ್ಯರ ಮಂಗಲ ವಿಹಾರವು ಉಚ್ಚ ನ್ಯಾಯಾಲಯದ ಹಿರಿಯ ನ್ಯಾಯವಾದಿ ಶ್ರೀ ಪದ್ಮ ಪ್ರಸಾದ್ ಹೆಗ್ಡೆಯವರ ಕದ್ರಿ (ಶ್ಯಾಮಲಾ) ನಿವಾಸಕ್ಕೆ ಚಿತೈಸಿತು.

ಸಂಜೆ 05.30 ಕದ್ರಿ ಮೈದಾನದಲ್ಲಿ ಪೂಜ್ಯ ಯುಗಲ ಮುನಿಗಳ ಭವ್ಯ ಪ್ರವಚನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಮೊದಲಿಗೆ ಮುನಿಗಳಿಗೆ ವಿನಯಾಂಜಲಿ ಮಾತನಾಡಿದ ಶ್ರೀ ಪಿ.ಪಿ. ಹೆಗ್ಡೆ ಯವರು ಜೈನ ದರ್ಮದಲ್ಲಿ ಭಕ್ತರ ಮತ್ತು ತ್ಯಾಗಿಗಳ ನಡುವಿನ ಭಾಂದವ್ಯತೆ ಮತ್ತು ಜೈನ ಮುನಿಗಳ ಆಚಾರ ವಿಚಾರಗಳ ಬಗ್ಗೆ ನೆರೆದ ಜನರಿಗೆ ತಿಳಿಯಪಡಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು

ಮುಂದೆ ಮುನಿವರೇಣ್ಯರ ಪ್ರವಚನಾಮೃತದಲ್ಲಿ ಯುಗಲ ಮುನಿಗಳು ಜೈನ ಮುನಿಗಳ ಕರ್ತವ್ಯವೇನು ? ಸಮಾಜದಲ್ಲಿ ನಿಜವಾದ ಗುರುಗಳ ಲಕ್ಷಣಗಳೇನು ? ಎನ್ನುತ್ತಾ ಜೀವನದಲ್ಲಿ ನಾವು ಇನ್ನೊಬ್ಬರನ್ನು ಸಂತೋಷಪಡಿಸುವಿದರಿಂದ ಮಾತ್ರ ನಾವು ಕೂಡ ಸಂತೋಷ ಪಡೆಯಬಹುದು. ಮುನಿಧರ್ಮದ ನಿಯಮಗಳನ್ನು ಜನಮನ ಮುಟ್ಟುವಂತೆ ವಿವರಿಸಿದರು. ಈ ಕಾರ್ಯಕ್ರಮದಲ್ಲಿ ಭಾರತೀಯ ಜೈನ್ ಮಿಲನ್ ವಲಯ- 8 ಅಧ್ಯಕ್ಷರಾದ ವೀರ್ ಪುಷ್ಪರಾಜ್ ಜೈನ್, ಮಂಗಳೂರು ಜೈನ್ ಮಿಲನ್ ಅದ್ಯಕ್ಷರಾದ ವೀರ್ ಪ್ರಮೋದ್ ಜೈನ್, ದ.ಕ ಜಿಲ್ಲಾ ಆರ್ .ಎಸ್ .ಎಸ್ ನ ಪ್ರದಾನ ಸಂಚಾಲಕರಾದ ಶ್ರೀ ಡಾ. ವಾಮನ ಶೆಣೈ, ವಿ.ಹಿಂ.ಪ. ನ ಪ್ರಮುಖರಾದ ಶ್ರೀ ಎಂ. ಬಿ ಪುರಾಣಿಕ್, ತಹಶಿಲ್ದಾರ್ ಪುರಂದರ ಹೆಗ್ಡೆ, ಮಂಗಳೂರು ವಕೀಲರ ಸಂಘದ ಅಧ್ಯಕ್ಷರಾದ ಶ್ರೀ ನರಸಿಂಹ ಹೆಗ್ಡೆ, ಸರಕಾರಿ ಮುಖ್ಯ ಅಭಿಯೋಜಕರಾದ ಶ್ರೀ ರಾಜು ಪೂಜಾರಿ , ಮ.ನ.ಪಾ ಸದಸ್ಯ ಕದ್ರಿ ಮನೋಹರ್ ಶೆಟ್ಟಿ ಹಾಗೂ ಸರಕಾರಿ ಅದಿಕಾರಿಗಳು, ಪೋಲೀಸ್ ಅಧಿಕಾರಿಗಳು , ರಾಜಕೀಯ ಮುತ್ಸದ್ದಿಗಳು, ಅನೇಕ- ಸಂಘ ಸಂಸ್ಥೆಗಳ ಪ್ರಮುಖರು ಉಪಸ್ಥಿತರಿದ್ದರು. ಮಂಗಳೂರಿನ ಸಮಸ್ತ ಜೈನ ಬಂದವರು ಹಾಗೂ ಸರ್ವಧರ್ಮೀಯ ಅಪಾರ ಸಂಖ್ಯೆಯ ಭಾಗವಹಿಸಿದ್ದರು.