ಕೊರಟಗೆರೆ :- ಚಿಲ್ಲರೆ ಅಂಗಡಿಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಮಹಿಳೆಯನ್ನು ಅಬಕಾರಿ ಅಧಿಕಾರಿಗಳು ಬಂಧಿಸಿದ ಘಟನೆ ಕೊರಟಗೆರೆ ತಾಲೂಕಿನ ಹುಲಿಕುಂಟೆ ಗ್ರಾಮದಲ್ಲಿ ನಡೆದಿದೆ.
ಗಾಯಿತ್ರಿ ಎಂಬ ಮಹಿಳೆಯು ಚಿಲ್ಲರೆ ಅಂಗಡಿಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ಕೊರಟಗೆರೆ ಅಬಕಾರಿ ಇಲಾಖೆಯ ಅಧಿಕಾರಿ ಶ್ರೀ ಲತಾ ಹಾಗೂ ತಂಡ ತಡರಾತ್ರಿ ದಾಳಿ ನಡೆಸಿ ಚಿಲ್ಲರೆ ಅಂಗಡಿಯಲ್ಲಿ ಇಟ್ಟಿದ್ದ ೮ ಲೀಟರ್ ನಷ್ಟು ಮದ್ಯವನ್ನು `ವಶಪಡಿಸಿಕೊಂಡು ಆರೋಪಿಯನ್ನು ಸ್ಥಳದಲ್ಲಿ ಬಂಧಿಸಿ ಘೋರ ಪ್ರಕರಣ ದಾಖಲಿಸಿದ್ದಾರೆ .
ದಾಳಿ ಸಂದರ್ಭದಲ್ಲಿ ಅಬಕಾರಿ ನಿರೀಕ್ಷಕರಾದ ಶ್ರೀಲತಾ ಬಿ, ಸಿಬ್ಬಂದಿಗಳಾದ ಹಮೀದ್ ಬುಡಕಿ, ಮಲ್ಲಿಕಾರ್ಜುನ್, ಮಂಜುಳಾ ,ಮಧು ದಾಳಿ ಸಂದರ್ಭದಲ್ಲಿ ಹಾಜರಿದ್ದರು .