Friday, September 20, 2024
ಬೆಳ್ತಂಗಡಿಸುದ್ದಿ

ಉಜಿರೆ ಬೆನಕ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರ- ಕಹಳೆ ನ್ಯೂಸ್

ಬೆಳ್ತಂಗಡಿ : ರಕ್ತದಾನ ಎಂದರೆ ಒಂದು ಜೀವಕ್ಕೆ ಉಡುಗೊರೆ ನೀಡಿದಂತೆ ದಾನಗಳಲ್ಲಿ ಶ್ರೇಷ್ಠದಾನ ರಕ್ತದಾನ ರಕ್ತಕ್ಕೆ ಜಾತಿ ಇಲ್ಲ ಡಾ. ಗೋಪಾಲಕೃಷ್ಣ. ಕೆ ದಾನಗಳಲ್ಲಿ ಶ್ರೇಷ್ಠದಾನ ರಕ್ತದಾನ ಎಂಬ ಮಾತಿದೆ. ರಕ್ತಕ್ಕೆ ಜಾತಿ ಇಲ್ಲ. ಯಾವುದೇ ಓರ್ವರೋಗಿಗೆ ಅಗತ್ಯವಾಗಿ ರಕ್ತ ಬೇಕಾದಾಗ ಅವನ ಜಾತಿ ನೋಡಿ ರಕ್ತ ನೀಡಲಾಗುವುದಿಲ್ಲ. ನಾವು ಮಾಡುವ ರಕ್ತದಾನಕ್ಕೆ ಮತ್ತೊಬ್ಬರ ಜೀವವನ್ನು ಉಳಿಸುವ ಶಕ್ತಿಯಿದೆ ಎಂದು ಉಜಿರೆ ಬೆನಕ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಗೋಪಾಲಕೃಷ ್ಣಕೆ. ಅಭಿಪ್ರಾಯಪಟ್ಟರು. ಡಾ.ಗೋಪಾಲಕೃಷ್ಣ.ಕೆ ಅವರು ಉಜಿರೆಯ ಬೆನಕ ಹೆಲ್ತ್ ಸೆಂಟರ್, ರೋಟರಿ ಕ್ಲಬ್ ಬೆಳ್ತಂಗಡಿ ರೋಟರಿ ಕ್ಲಬ್ ಹಾಗೂ ಸೇವಾಭಾರತಿ ಕನ್ಯಾಡಿ ಇವರ ಸಂಯುಕ್ತ ಆಶ್ರಯದಲ್ಲಿ ಭಾರತೀಯ ರೆಡ್ ಕ್ರಾಸ್ ಸ್ಸೊಸೈಟಿ ಹಾಗೂ ಸರಕಾರಿ ಲೇಡಿಗೋಶನ್ ಆಸ್ಪತ್ರೆ ಮಂಗಳೂರು ಇವರ ಸಹಯೋಗದಲ್ಲಿ ಉಜಿರೆಯ ಬೆನಕ ಹೆಲ್ತ್ ಸೆಂಟರಿನಲ್ಲಿ ನಡೆದ ರಕ್ತದಾನ ಶಿಬಿರದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು

ಡಾ.ಗೋಪಾಲಕೃಷ್ಣ ಅವರು ಮಾತನಾಡುತ್ತಾ ರಕ್ತದಾನ ಜೀವ ಹೋಗುವ ಸ್ಥಿತಿಯಲ್ಲಿರುವ ರೋಗಿಯನ್ನು ಹೆಚ್ಚು ಕಾಲ ಬದುಕಲು ಮತ್ತು ಉನ್ನತ ಮಟ್ಟದ ಜೀವನ ಸಾಗಿಸಲು ನೆರವಾಗುತ್ತದೆ. ಗಾಯ ಗೊಂಡವರಿಗೆ, ಶಸ್ತ್ರಚಿಕಿತ್ಸೆಗೆ ಒಳಗಾದವರಿಗೆ ಮತ್ತು ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳಿಗೆ ಯಾವುದೇ ಪರಿಸ್ಥಿತಿಯಲ್ಲಿ ರಕ್ತದ ಅವಶ್ಯಕತೆ ಇರುತ್ತದೆ. ಕೇವಲ ಒಂದು ದಾನವು ನಾಲ್ವರ ಜೀವವನ್ನು ಉಳಿಸುತ್ತದೆ. ರಕ್ತದಾನ ಎಂದರೆ ಒಂದು ಜೀವಕ್ಕೆ ಉಡುಗೊರೆ ನೀಡಿದಂತೆ ಎಂದು ಅಭಿಪ್ರಾಯಪಟ್ಟರು.

ರಕ್ತದಾನ ಮಾಡುವ ಮೂಲಕ ಶಿಬಿರವನ್ನು ಉದ್ಘಾಟಿಸಿದ ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷೆ ನವೀನಾ ಜೆಕೆ ಅವರು ಮಾತನಾಡುತ್ತಾ ರಕ್ತದಾನ ಮಾಡುವುದರಿಂದ ಕೇವಲ ಸ್ವೀಕರಿಸಿದವರಿಗೆ ಮಾತ್ರ ಪ್ರಯೋಜನವಾಗುವುದಿಲ್ಲ, ರಕ್ತದಾನ ಮಾಡಿದವರಿಗೂ ಹೆಚ್ಚು ಸಹಾಯವಾಗುತ್ತದೆ ಎಂದು ತಿಳಿಸಿದರು.

ಸೇವಾಭಾರತಿ ಕನ್ಯಾಡಿಯ ಅಧ್ಯಕ್ಷರಾದ ವಿನಾಯಕ್ ರಾವ್ ಕನ್ಯಾಡಿ ಅವರು ಮಾತನಾಡುತಾ ನಾವು ಎಲೆಯಂತೆ ಜೀವಿಸಬೇಕು. ಎಲೆಯೊಂದು ಗಿಡಕ್ಕೆ ಪೂರಕವಾಗಿ ಸಹಕರಿಸುವಂತೆ ನಾವೂ ಸಹ ಜಗವೆಂಬ ವೃಕ್ಷಕ್ಕೆ ಪೂರಕವಾಗಿ ಬದುಕಬೇಕು ಎಂದು ಕರೆ ನೀಡಿದರು.

ಬೆಳ್ತಂಗಡಿ ರೋಟರಿ ಕ್ಲಬ್ ನ ಅಧ್ಯಕ್ಷ ಶರತ್ ಕೃಷ್ಣ ಪಡುವೆಟ್ನಾಯ ವೇದಿಕೆಯಲ್ಲಿ ಉಪಸ್ಥಿತರಿದ್ದು ಶುಭ ಹಾರೈಸಿದರು. ಬೆನಕ ಆಸ್ಪತ್ರೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಎಸ್.ಜಿ. ಭಟ್ ವಹಿಸಿದ ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ನ ಕಾರ್ಯದರ್ಶಿ ಡಾ.ಭಾರತಿ `ಜಿ ಕೆ ವಂದಿಸಿದರು.

ಭಾರತೀಯ ರೆಡ್ ಕ್ರಾಸ್ ಸೊಸೈಟಿಯ ಪ್ರವೀಣ್ ಹಾಗೂ ಬೆನಕ ಆಸ್ಪತ್ರೆಯ ಮ್ಯಾನೇಜರ್ ರ್ದೇವಸ್ಯ ನೇತೃತ್ವದಲ್ಲಿ50 ಕ್ಕೂ ಅಧಿಕ ಜನ ಬೆನಕ ಆಸ್ಪತ್ರೆಯ ಸಿಬ್ಬಂದಿ, ರೋಟರಿ ಸದಸ್ಯರು ಹಾಗೂ ಸಾರ್ವಜನಿಕರು ರಕ್ತದಾನ ಮಾಡಿದರು.