ಶಾಸಕರ 15 ಲಕ್ಷ ರೂ. ಅನುದಾನದಲ್ಲಿ ನಿರ್ಮಾಣಗೊಳ್ಳಲಿರುವ ಪಲ್ಲಮಜಲು-ಬರ್ಕಟ-ಅರಂತಡೆ ರಸ್ತೆ ಕಾಂಕ್ರೀಟೀಕರಣ ಕಾಮಗಾರಿಗೆ ಗುದ್ದಲಿಪೂಜೆ- ಕಹಳೆ ನ್ಯೂಸ್
ಮಂಗಳೂರು: ದೇವಂದಬೆಟ್ಟು ಶ್ರೀ ಲಕ್ಷ್ಮೀ ವಿಷ್ಣುಮೂರ್ತಿ ದೇವಸ್ಥಾನ ಅಷ್ಟಬಂಧ ಬ್ರಹ್ಮಕಲಶೋತ್ಸವ ಪ್ರಯುಕ್ತ ಬಿ.ಮೂಡ ಗ್ರಾಮಸ್ಥರಿಗೆ ದೇವಂದಬೆಟ್ಟು ಪ್ರದೇಶಕ್ಕೆ ತಲುಪಲು ಬಳಸುವ ಅತೀ ಮುಖ್ಯ ರಸ್ತೆ ಪಲ್ಲಮಜಲು-ಬರ್ಕಟ-ಅರಂತಡೆ-ಕಂಜತ್ತೂರು-ಮಾಡಂಗೆ ರಸ್ತೆಯನ್ನು ಅಭಿವೃದ್ಧಿಪಡಿಸಲು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಈ ಹಿಂದೆ 15 ಲಕ್ಷ ಅನುದಾನ ಒದಗಿಸಿದ್ದರು. ಅದರಲ್ಲಿ ಮಾಡಂಗೆ-ಕಂಜತ್ತೂರು ವರೆಗೆ ರಸ್ತೆ ಅಭಿವೃದ್ಧಿಗೊಂಡಿತ್ತು. ಬಾಕಿವುಳಿದ ರಸ್ತೆ ಅಭಿವೃದ್ಧಿಗಾಗಿ ಬಿ.ಮೂಡ ಗ್ರಾಮಸ್ಥರು ಹಾಗೂ ಕಳ್ಳಿಗೆ ಗ್ರಾಮಸ್ಥರ ಪರವಾಗಿ ಶಾಸಕರಿಗೆ ಮನವಿಯಲ್ಲಿ ತಿಳಿಸಲಾಗಿತ್ತು. ಇದೀಗ ಈ ಬೇಡಿಕೆಯೂ ಈಡೇರಿದ್ದು, ಹೆಚ್ಚುವರಿ 15 ಲಕ್ಷ ರೂ. ಅನುದಾನವನ್ನು ಒದಗಿಸಿ ಒಟ್ಟು 30 ಲಕ್ಷ ರೂ ವೆಚ್ಚದಲ್ಲಿ ಪಲ್ಲಮಜಲು-ಬರ್ಕಟ-ಮಾಡಂಗೆ ರಸ್ತೆ ಅಭಿವೃದ್ಧಿಗೊಳ್ಳಲಿದ್ದು, ಇಂದು ಈ ರಸ್ತೆಯ ಗುದ್ದಲಿಪೂಜೆ ನೆರವೇರಿತು. ಕಳ್ಳಿಗೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಯಶೋದಾ ಜಾರಂದಗುಡ್ಡೆ ಕಾಮಗಾರಿಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಕಳ್ಳಿಗೆ ಗ್ರಾಮ ಪಂಚಾಯತ್ ಉಪಾಧ್ಯಕ್ಷ, ದೇವಂದಬೆಟ್ಟು ವ್ಯವಸ್ಥಾಪನಾ ಸಮಿತಿ ಕಾರ್ಯದರ್ಶಿ ದಾಮೋದರ ನೆತ್ತರಕೆರೆ, ಪಂಚಾಯತ್ ಸದಸ್ಯ ಮನೋಜ್ ವಳವೂರು, ಬಂಟ್ವಾಳ ಪುರಸಭಾ ಸದಸ್ಯೆ ಚೈತನ್ಯ ಎ ದಾಸ್, ವ್ಯವಸ್ಥಾಪನಾ ಸಮಿತಿ ಸದಸ್ಯ ದಿವಾಕರ ಶೆಟ್ಟಿ ಕುಪ್ಪಿಲಗುತ್ತು, ಪ್ರಮುಖರಾದ ದೇವಿಪ್ರಸಾದ್ ಎಂ ದೇವಂದಬೆಟ್ಟು, ಸತೀಶ್ ಮಾಡಂಗೆ, ದಯಾನಂದ ಜಾರಂದಗುಡ್ಡೆ, ಗಣೇಶ್ ದಾಸ್ ಪಲ್ಲಮಜಲು, ಸಂಜೀವ ಪೂಜಾರಿ ಕಂಜತ್ತೂರು, ರತ್ನಾಕರ ಕಂಜತ್ತೂರು, ಜ್ಯೋತಿ ಚೌಟ, ನಾರಾಯಣ ಶೆಟ್ಟಿ ಕೊರಗುಂಡಿ, ರಾಘವೇಂದ್ರ ಕುಪ್ಪಿಲ, ಉಮೇಶ್ ಪಲ್ಲಮಜಲು, ರಮೇಶ್ ಸುವರ್ಣ, ವನಜಾ ಕಂಜತ್ತೂರು, ಯಾದವ ಟೈಲರ್ ಹೊಸಹೊಕ್ಲು, ಮನೋಹರ ಶೆಟ್ಟಿ, ಕಿಶೋರ್ ಜಾರಂದಗುಡ್ಡೆ, ದೂಮಪ್ಪ ಮಾಡಂಗೆ, ದಿವಾಕರ ದೇರ್ಲಕ್ಕೆ, ಸುನೀಲ್ ಜಾರಂದಗುಡ್ಡೆ, ಸಿಬಿನ್ ಜಾರಂದಗುಡ್ಡೆ, ಸಂಪ್ರೀತ್ ಆಯರಗುಡ್ಡೆ, ಲೋಹಿತ್ ಜಾರಂದಗುಡ್ಡೆ ಮತ್ತಿತರರು ಉಪಸ್ಥಿತರಿದ್ದರು.