Sunday, January 19, 2025
ದಕ್ಷಿಣ ಕನ್ನಡಸುದ್ದಿ

ಕುಂಜತ್ತಬೈಲ್ ಉತ್ತರ ವಾರ್ಡ್ 13 ರ ಕೆ.ಎಚ್.ಬಿ ಕಾಲೋನಿಯಲ್ಲಿ 20 ಲಕ್ಷ ಅನುದಾನದಲ್ಲಿ ನಡೆಯಲಿರುವ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೇರವೇರಿಸಿದ ಶಾಸಕ ಡಾ.ವೈ ಭರತ್ ಶೆಟ್ಟಿ – ಕಹಳೆ ನ್ಯೂಸ್

ಮಂಗಳೂರು : ಉತ್ತರ ವಿಧಾನಸಭಾ ಕ್ಷೇತ್ರದ ಪಾಲಿಕೆ ವ್ಯಾಪ್ತಿಯ ಕುಂಜತ್ತಬೈಲ್ ಉತ್ತರ ವಾರ್ಡ್ 13 ರ ಕೆ.ಎಚ್.ಬಿ ಕಾಲೋನಿಯಲ್ಲಿ 10 ಲಕ್ಷ ರೂಪಾಯಿ ಅನುದಾನದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ ಹಾಗೂ 10 ಲಕ್ಷ ರೂಪಾಯಿ ಅನುದಾನದಲ್ಲಿ ಚರಂಡಿ ರಚನೆಯ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕರಾದ ಡಾ.ವೈ ಭರತ್ ಶೆಟ್ಟಿಯವರು ಗುದ್ದಲಿಪೂಜೆ ನೆರವೇರಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ಸ್ಥಳೀಯ ಕಾರ್ಪೊರೇಟರ್ ಶರತ್ ಕುಮಾರ್, ಉತ್ತರ ವಿಧಾನಸಭಾ ಕ್ಷೇತ್ರದ ಅಲ್ಪಸಂಖ್ಯಾತ ಅಧ್ಯಕ್ಷರಾದ ಶಹನಾಜ್, ಶಕ್ತಿಕೇಂದ್ರ ಪ್ರಮುಖರಾದ ಗಣೇಶ್, ಪ್ರಮುಖರಾದ, ಕಲಂದರ್, ನಿತೇಶ್ ದೇವಿನಗರ, ಸೂರಜ್ ದೇವಿನಗರ, ನಾಸಿರ್ ದೇವಿನಗರ, ಅಮ್ಜದ್ ಹಮದ್, ಕುಲಹಿರಿಯರಾದ ಕುಂಞಮೋನು, ಮಹಮದ್ ಅಜೀಜ್ ಕೆ ಎಚ್ ಬಿ ಕಾಲೋನಿ ಇಬ್ರಾಹಿಂ ಮರಕಡ ಬಸವರಾಜ್, ಶ್ರೀಮತಿ ಭಾರತಿ, ಶ್ರೀಮತಿ ರುಬಿನ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.