Sunday, January 19, 2025
ದಕ್ಷಿಣ ಕನ್ನಡಪುತ್ತೂರುಸುದ್ದಿ

ಫೆ. 12 ಮತ್ತು 13 ರಂದು ನಡೆಯಲಿರುವ ನರಿಮೊಗರು ಶ್ರೀ ಬ್ರಹ್ಮಬೈದೆರ್ಕಳ ಗರಡಿ ಕೈಪಂಗಳ ಬಾರಿಕೆ ಕ್ಷೇತ್ರದ ವಿಜ್ಞಾಪನ ಪತ್ರ ಬಿಡುಗಡೆ ಕಾರ್ಯಕ್ರಮ – ಕಹಳೆ ನ್ಯೂಸ್

ಪುತ್ತೂರು: ಫೆ. 12 ರಿಂದ 13 ರವರೆಗೆ ಶ್ರೀ ಬ್ರಹ್ಮಬೈದೆರ್ಕಳ ಗರಡಿ ಕೈಪಂಗಳ ಬಾರಿಕೆ ನರಿಮೊಗರಿನಲ್ಲಿ ವಾರ್ಷಿಕ ನೇಮೋತ್ಸವ ಹಾಗೂ ಶ್ರೀ ಕ್ಷೇತ್ರದ ದೈವಗಳಿಗೆ ಹಾಗು ಶ್ರೀ ಕೋಟಿ ಚೆನ್ನಯ ಬ್ರಹ್ಮಬೈದೇರುಗಳಿಗೆ ಮುಂದಿನ ನೇಮೋತ್ಸವದ ಮೊದಲು ದೈವಗಳಿಗೆ ಭಕ್ತಾದಿಗಳೆಲ್ಲರೂ ಸಮರ್ಪಿಸುವುದೆಂದು ತೀರ್ಮಾನಿಸಿದ್ದ, ಬೆಳ್ಳಿಯ ತಲೆಮಣಿ, ತಲೆಪಟ್ಟಿ, ಅಪ್ಪರಕೊಂಬು, ಮುಂತಾದ ದೈವ ಆಭರಣಗಳ ಅಂದಾಜು 15 ಲಕ್ಷ ರೂಪಾಯಿ ವೆಚ್ಚವಿರುವ ಕ್ಷೇತ್ರದ ವಿಜ್ಞಾಪನ ಪತ್ರವನ್ನು ಬಿಡುಗಡೆ ಮಾಡಲಾಯಿತು.

ಕೋಟಿ ಚೆನ್ನಯ ಗೆಳೆಯರ ಬಳಗದ ಅಧ್ಯಕ್ಷರಾದ ರಾಜೇಶ್ ಕೆದ್ಕಾರ್ ಇವರ ಅದ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಆಡಳಿತ ಮುಕೇಸ್ತರರು ಮೋನಪ್ಪ ಕುಲಾಲ್ ಬಾರಿಕೆ, ನೇಮೋತ್ಸವ ಸಮಿತಿ ಜೊತೆ ಕಾರ್ಯದರ್ಶಿ ವಸಂತ ಪೂಜಾರಿ ದೋಳ, ಕೋಟಿ ಚೆನ್ನಯ ಗೆಳೆಯರ ಬಳಗದ ಗೌರವಾಧ್ಯಕ್ಷರು ಪ್ರಭಾಕರ ಗೌಡ ಕೆದ್ಕಾರ್, ಪ್ರಧಾನ ಕಾರ್ಯದರ್ಶಿ ಸುಜಿತ್ ಅಂಚನ್ ದೋಳ, ಸಂಘಟನಾ ಕಾರ್ಯದರ್ಶಿ ಸುನಿಲ್ ಸಾಲ್ಯಾನ್ ದೋಳ, ಖಜಾಂಜಿ ಶುಭಕರ ಕುಲಾಲ್ ಬಾರಿಕೆ, ಸದಸ್ಯರಾದ ಅನಿಲ್ ಕುಮಾರ್ ದೋಳ, ಅಕ್ಷಯ್ ಕೋಟ್ಯಾನ್ ದೋಳ, ಮಲ್ಲೇಶ ಬಾರಿಕೆ, ಉಮೇಶ್ ಗೌಡ ಕೆದ್ಕಾರ್, ದೀಪಕ್ ದೋಳ, ಸುಜಯ್ ಕೋಟ್ಯಾನ್ ದೋಳ, ಜೀವನ್ ಬಂಗೇರ ದೋಳ, ಹರೀಶ ಪೂಜಾರಿ ಬಾರಿಕೆ, ದರ್ನಪ್ಪ ಬಾರಿಕೆ, ಉಮೇಶ ಬಾರಿಕೆ ಉಪಸ್ಥಿತರಿದ್ದರು

ಜಾಹೀರಾತು
ಜಾಹೀರಾತು
ಜಾಹೀರಾತು

 

ಜಾಹೀರಾತು
ಜಾಹೀರಾತು
ಜಾಹೀರಾತು