Sunday, January 19, 2025
ದಕ್ಷಿಣ ಕನ್ನಡಸುದ್ದಿಸುಬ್ರಹ್ಮಣ್ಯ

ಸುಬ್ರಹ್ಮಣ್ಯ: ನೇಣು ಬಿಗಿದುಕೊಂಡು ಆತ್ಮಹತ್ಯೆ ಶರಣಾದ ಶಾಲಾ ಬಾಲಕಿ- ಕಹಳೆ ನ್ಯೂಸ್

ಸುಬ್ರಹ್ಮಣ್ಯ : ಶಾಲಾ ಬಾಲಕಿಯೊಬ್ಬಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗುತ್ತಿಗಾರು ಎಂಬಲ್ಲಿ ನಡೆದಿದೆ.

ಗುತ್ತಿಗಾರಿನ ನ್ಯಾಯವಾದಿ ಹರೀಶ್ ಪೂಜಾರಿಕೋಡಿ ಎಂಬವರ ಪುತ್ರಿ ನಿಹಾರಿಕಾ (13 ವರ್ಷ) ಆತ್ಮಹತ್ಯೆ ಮಾಡಿಕೊಂಡ ಬಾಲಕಿ. ಸುಬ್ರಹ್ಮಣ್ಯದ ಕುಮಾರಸ್ವಾಮಿ ಶಾಲೆಯ ವಿದ್ಯಾರ್ಥಿನಿಯಾಗಿದ್ದ ನಿಹಾರಿಕಾ ಏಳನೇ ತರಗತಿಗೆ ನವೋದಯ ಶಾಲೆಗೆ ಆಯ್ಕೆಯಾಗಿದ್ದಳು. ಕೊರೋನ ಕಾರಣದಿಂದಾಗಿ ಶಾಲೆ ಆರಂಭಗೊಳ್ಳದೆ, ಮನೆಯಲ್ಲಿಯೇ ನವೋದಯದ ಆನ್‍ಲೈನ್ ತರಗತಿ ನಡೆಯುತ್ತಿತ್ತು. ಇನ್ನು ಒಂದೆರಡು ದಿನಗಳಲ್ಲಿ ನವೋದಯ ಶಾಲೆ ಪುನರಾರಂಭಗೊಳ್ಳುವುದರಲ್ಲಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ಇಂದು ಮುಂಜಾನೆ ಹರೀಶ್ ಪೂಜಾರಿಕೋಡಿಯವರು ಮನೆಯಿಂದ ಹೊರಟು ಸುಳ್ಯದ ಕಡೆಗೆ ಬಂದ ಸ್ವಲ್ಪ ಹೊತ್ತಲ್ಲೇ ಬಾಲಕಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ವಿಷಯ ಗೊತ್ತಾಗಿ ತಕ್ಷಣ ಹೋಗಿ ಹಗ್ಗದಿಂದ ಕೆಳಗಿಳಿಸಿ, ಗುತ್ತಿಗಾರಿಗೆ ಆಸ್ಪತ್ರೆಗೆ ಕರೆತಂದರು. ಬಳಿಕ ಹೆಚ್ಚಿನ ಚಿಕಿತ್ಸೆಗೆ ಸುಳ್ಯ ಸರಕಾರಿ ಆಸ್ಪತ್ರೆಗೆ ತರಲಾಯಿತು. ಆದರೆ ಆಸ್ಪತ್ರೆ ತಲುಪಿದಾಗ ಆಕೆ ಕೊನೆಯುಸಿರೆಳೆದಿರುವ ಬಗ್ಗೆ ವೈದ್ಯರು ತಿಳಿಸಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ.

ಜಾಹೀರಾತು
ಜಾಹೀರಾತು
ಜಾಹೀರಾತು