ಶ್ರೀ ಲಕ್ಷ್ಮೀ ವಿಷ್ಣುಮೂರ್ತಿ ದೇವಸ್ಥಾನ ದೇವಂದಬೆಟ್ಟು ಇದರ ಅಷ್ಟಬಂಧ ಬ್ರಹ್ಮಕಲಶೋತ್ಸವ ಪ್ರಯುಕ್ತ ಬ್ರಹ್ಮಕಲಶ ಆಮಂತ್ರಣ ಗೀತೆ ಟೀಸರ್ ಬಿಡುಗಡೆ – ಕಹಳೆ ನ್ಯೂಸ್
ಬಂಟ್ವಾಳ: ಶ್ರೀ ಲಕ್ಷ್ಮೀ ವಿಷ್ಣುಮೂರ್ತಿ ದೇವಸ್ಥಾನ ದೇವಂದಬೆಟ್ಟು ಕಳ್ಳಿಗೆ ಗ್ರಾಮ ಬಂಟ್ವಾಳ ತಾಲೂಕು ಇದರ ಅಷ್ಟಬಂಧ ಬ್ರಹ್ಮಕಲಶೋತ್ಸವ ಪ್ರಯುಕ್ತ ಫೆ.6ರಂದು ಬ್ರಹ್ಮಕಲಶ ಆಮಂತ್ರಣ ಗೀತೆ ಟೀಸರ್ ಬಿಡುಗಡೆಗೊಳ್ಳಲಿದೆ.
ಇಡೀ ತುಳುನಾಡಿನಾದ್ಯಂತ ಸಂಚಲನ ಸೃಷ್ಟಿಸಿದ ಕರಿಯಜ್ಜೆ ಖ್ಯಾತಿಯ ತುಳುನಾಡ ಕಲಶ ಜಿಎಸ್ ಗುರುಪುರ ರಚನೆಯಿಂದ ಇದೀಗ ಮೂಡಿ ಬರುತ್ತಿರುವಂತಹ ದೇವಂದಬೆಟ್ಟು ಬ್ರಹ್ಮಕಲಶ ಆಮಂತ್ರಣ ಗೀತೆಯೊಂದಿಗೆ ಮತ್ತೊಂದು ಭಕ್ತಿ ಪ್ರಧಾನ ಹಾಡು ಮುಂದಿನ ವಾರ ತೆರೆಕಾಣಲಿದೆ.
ಖ್ಯಾತ ಗಾಯಕಿ ಕು. ಚೈತ್ರಾ ಗಾಣಿಗ ಕಲ್ಲಡ್ಕ ಮಾರ್ಗದರ್ಶನದಲ್ಲಿ ಅವರ ಸಹೋದರಿ ಕು. ಧನುಷ ಗಾಣಿಗ ಕಲ್ಲಡ್ಕ ಕಂಠಸಿರಿಯಲ್ಲಿ ಮೂಡಿಬರುತ್ತಿರುವ ಪ್ರಥಮ ಭಕ್ತಿಗೀತೆ ಇದಾಗಿದ್ದು, ಗೀತೆ ಬಿಡುಗಡೆಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
ಗ್ಲ್ಯಾಡ್ ಸ್ಟುಡಿಯೋ ಬಿ.ಸಿ.ರೋಡು ಇಲ್ಲಿ ಬುಧವಾರ ರೆಕಾಡಿರ್ಂಗ್ ಕೆಲಸ ಪೂರ್ಣಗೊಂಡಿದ್ದು, ಮುಂದಿನ ವಾರ ಕಳ್ಳಿಗೆ ಗ್ರಾಮದ ಹಲವು ಕಡೆಗಳಲ್ಲಿ ಚಿತ್ರೀಕರಣ ಕೆಲಸ ನಡೆಯಲಿದೆ. ಶ್ರೀ ಟಾಕೀಸ್ ಬಂಟ್ವಾಳ ತಂಡ ಚಿತ್ರೀಕರಣದ ಮತ್ತು ಸಂಕಲನ ಜವಾಬ್ದಾರಿ ವಹಿಸಿದ್ದು, ಶ್ರೀ ಪ್ರಸಾದ್ ನಿರ್ದೇಶನ ನೀಡಲಿದ್ದಾರೆ.
ಕು. ಸ್ವರೇಣ್ಯ ಜ್ಯೋತಿಗುಡ್ಡೆ ಭಕ್ತಿಗೀತೆಗೆ ಅಭಿನಯಿಸಲಿದ್ದು, ಮುಂದಿನ ವಾರ ಗಿoಛಿಚಿಟ ಒeಜiಚಿ ಏuಜಟಚಿ ಯೂಟ್ಯೂಬ್ ಚಾನೆಲ್ ಮೂಲಕ ಆಮಂತ್ರಣ ಗೀತೆ ತೆರೆಕಾಣಲಿದೆ.
ಶ್ರೀ ಅನಿಲ್ ಕುಮಾರ್ ಪಂಡಿತ್ ವಳವೂರು, ಶ್ರೀ ವೇಣುಗೋಪಾಲ ಶೆಟ್ಟಿ ಕುಪ್ಪಿಲಗುತ್ತು, ಶ್ರೀಮತಿ ಪ್ರಿಯದರ್ಶಿನಿ ಸುನೀಲ್ ದರಿಬಾಗಿಲು, ವಿಜಿ ಕೆಟರರ್ಸ್ ವಳವೂರು ಮತ್ತು ಶ್ರೀಮತಿ ಜಯಶ್ರೀ ಮತ್ತು ಶ್ರೀ ಪ್ರವೀಣ್ ಕಂಜತ್ತೂರು ನಿರ್ಮಾಪಕರಾಗಿದ್ದಾರೆ.
ದೇವಿಪ್ರಸಾದ್ ಎಂ ದೇವಂದಬೆಟ್ಟು ಶೀರ್ಷಿಕೆ ವಿನ್ಯಾಸ ಮತ್ತು ಪ್ರಚಾರಕಲೆ ಜವಾಬ್ದಾರಿ ನಿರ್ವಹಿಸಲಿದ್ದು, ಯೋಗೀಶ್ ಕುಮಾರ್ ಕೆ ದರಿಬಾಗಿಲು, ವ್ಯವಸ್ಥಾಪನಾ ಸಮಿತಿ ಮತ್ತು ಬ್ರಹ್ಮಕಲಶೋತ್ಸವ ಸಮಿತಿ ಸಂಪೂರ್ಣ ಸಹಕಾರ ನೀಡಿದ್ದಾರೆ.