Saturday, November 23, 2024
ದಕ್ಷಿಣ ಕನ್ನಡಪುತ್ತೂರುಸುದ್ದಿ

ಬೆಳ್ಳಾರೆಯಲ್ಲಿ ಫೆ.5ರಂದು ಮುಳಿಯ ಗಾನರಥ – ಕರೋಕೆ ಹಾಡುಗಳ ಗಾಯನ ಸ್ಪರ್ಧೆಯ : 5ನೇ ಸುತ್ತಿನ ಆಡಿಷನ್ – ಕಹಳೆ ನ್ಯೂಸ್

ಪುತ್ತೂರು : ಅಮೃತ ಮಹೋತ್ಸವ ಸಂಭ್ರಮದಲ್ಲಿರುವ ನಾಡಿನ ಹೆಸರಾಂತ ಚಿನ್ನಾಭರಣಗಳ ಮಳಿಗೆ ಮುಳಿಯ ಜ್ಯುವೆಲ್ಸ್ ಕಲೆ- ಸಂಸ್ಕøತಿಗಳಿಗೆ ಬೆಂಬಲ ನೀಡುವ ಸಲುವಾಗಿ ಆಯೋಜಿಸುತ್ತಿರುವ “ಮುಳಿಯ ಗಾನರಥ” ಕರೋಕೆ ಹಾಡುಗಳ ಗಾಯನ ಸ್ಫರ್ಧೆಯ ಐದನೇ ಆಡಿಷನ್ ರೌಂಡ್ ಫೆ. 5ರಂದು ಬೆಳ್ಳಾರೆಯಲ್ಲಿ ನಡೆಯಲಿದೆ.
ಬೆಳ್ಳಾರೆಯ ಅಮ್ಮು ರೈ ದೇವಿ ಹೈಟ್ಸ್ ಕಾಂಪ್ಲೆಕ್ಸ್ ಮುಂಭಾಗದಲ್ಲಿ ಸಂಜೆ 4.30ಕ್ಕೆ ಈ ಕಾರ್ಯಕ್ರಮ ನಡೆಯಲಿದ್ದು, 12ರಿಂದ 21 ವರ್ಷದೊಳಗಿನವರು ಮೊದಲ ವಿಭಾಗದಲ್ಲಿ ಹಾಗೂ 21 ವರ್ಷಕ್ಕೆ ಮೇಲ್ಪಟ್ಟವರು ಸಾರ್ವಜನಿಕರ ವಿಭಾಗದಲ್ಲಿ ಸ್ಪರ್ಧಿಸಬಹುದಾಗಿದೆ.
ಕನ್ನಡ, ಹಿಂದಿ ತುಳು ಹಾಗೂ ಮಲಯಾಳಂ ಸೇರಿದಂತೆ 4 ಭಾಷೆಗಳ ಹಾಡುಗಳಿಗೆ ಅವಕಾಶ ಕಲ್ಪಿಸಲಾಗಿದ್ದು, ಆಡಿಷನ್ ನೋಂದಾವಣೆಗಾಗಿ 9743175916ಗೆ ಕರೆ ಮಾಡಬಹುದಾಗಿದೆ. ಈ ಕಾರ್ಯಕ್ರಮವನ್ನು ಮುಳಿಯ ಜ್ಯುವೆಲ್ಸ್ ನ ಫೇಸ್‍ಬುಕ್ ಮುಖಾಂತರವೂ ವೀಕ್ಷಿಸಬಹುದಾಗಿದೆ

ಸ್ಪರ್ಧೆಯ ನಿಬಂಧನೆಗಳು ಹೀಗಿವೆ:
ಮುಳಿಯ ಗಾನರಥ ಇದೊಂದು ಪುತ್ತೂರು ತಾಲೂಕಿನ ಉದಯೋನ್ಮುಖ ಗಾಯಕ – ಗಾಯಕಿಯವರಿಗೆ ವೇದಿಕೆ ಸೃಷ್ಟಿ ಮಾಡುವ ಅಪೂರ್ವ ಕಾರ್ಯಕ್ರಮವಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇದರ ನಿವಂಧನೆಗಳು ಹೀಗಿವೆ.
1. ವಯೋಮಿತಿ ಆಧಾರಕ್ಕಾಗಿ ಆಧಾರ್ ಕಾರ್ಡ್ ಜೆರಾಕ್ಸ್ ಪ್ರತಿ ಕಡ್ಡಾಯ.
2. ಪ್ರೇಕ್ಷಕರಿಗೆ ಕಾರ್ಯಕ್ರಮ ವೀಕ್ಷಿಸಲು ಆನ್‍ಲೈನ್‍ನಲ್ಲಿ ವ್ಯವಸ್ಥೆ ಮಾಡಲಾಗುವುದು.
3. ಕರೋಕೆ ಗಾಯನದಲ್ಲಿ ಹಾಡುವಾಗ ಎಲ್ಲಿಯೂ ಕರೋಕೆ ತಪ್ಪದಂತೆ ಹಾಡಬೇಕು.
4. ಕರೋಕೆ ಗಾಯನ ಹಾಡುವವರು ಕರೋಕೆ ಇರುವ ಶೃತಿಯಲ್ಲಿ ಹಾಡಬೇಕು.
5. ಕರೋಕೆ ಗಾಯನದಲ್ಲಿ ತಾಳಬದ್ಧವಾಗಿ ಹಾಡಬೇಕು, ಸಾಹಿತ್ಯ ತಪ್ಪಾಗಿ ಇರಬಾರದು.
6. ಗೀತೆಯನ್ನು ಅಚ್ಚುಕಟ್ಟಾಗಿ ಪ್ರಸ್ತುತಪಡಿಸಬೇಕು.
7. ಚಿಕ್ಕಮಕ್ಕಳೊಂದಿಗೆ ಪೋಷಕರು ಹಾಜರಿರತಕ್ಕದ್ದು.
8. ವಯೋಮಿತಿ 12 ವಯಸ್ಸಿನಿಂದ 21ರವರೆಗೆ ಹಾಗೂ ಮೇಲ್ಪಟ್ಟ ವಯಸ್ಸಿನವರನ್ನು ಸಾರ್ವಜನಿಕ ವಿಭಾಗವೆಂದು 2 ವಿಭಾಗ ಮಾಡಲಾಗುವುದು.
9. ಆಡಿಷನ್‍ನಲ್ಲಿ 50 ಸ್ಪರ್ಧಿಗಳು ಮೇಲ್ಪಟ್ಟು ಇದ್ದಲ್ಲಿ ಹಾಡಿನ ಪಲ್ಲವಿ ಮತ್ತು ಪ್ರಥಮ ಚರಣ ಮಾತ್ರ ಹಾಡಲು ಅವಕಾಶ ನೀಡಲಾಗುವುದು.
10. ಕರೋಕೆ ಹಾಡುವ ಸ್ಫರ್ಧಿಗಳು ಕನ್ನಡ, ಹಿಂದಿ, ತುಳು ಹಾಗೂ ಮಲಯಾಳಂ ಭಾಷೆಗಳ ಹಾಡುಗಳನ್ನು
ಹಾಡಲು ಅವಕಾಶ ಇರುತ್ತದೆ.
11. ಆಡಿಷನ್‍ನಲ್ಲಿ ಭಾಗವಹಿಸಿದ ಪ್ರತೀಯೊಬ್ಬ ಸ್ಪರ್ಧಿಗೂ ಪ್ರಮಾಣ ಪತ್ರ ನೀಡಿ ಪುರಸ್ಕರಿಸಲಾಗುವುದು.
12. ಆಡಿಷನ್ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸ್ಪರ್ಧಿಗಳಲ್ಲಿ ಆಯ್ಕೆಯಾದವರಿಗೆ ಸಮಿ ಫಿನಾಲೆ ಸುತ್ತಿನಲ್ಲಿ ಸ್ಪರ್ಧಿಸಲು ಅವಕಾಶ.
13. ಗ್ರ್ಯಾಂಡ್ ಫಿನಾಲೆಯ ವಿಜೇತರನ್ನು ಪುತ್ತೂರು ಮುಳಿಯ ಗಾನ ಕೋಗಿಲೆ ಎಂಬ ಬಿರುದು ನೀಡಿ ಪುರಸ್ಕರಿಸಲಾಗುವುದು.
14. ನುರಿತ ಹಿನ್ನಲೆ ಸಂಗೀತ ತೀರ್ಪುಗಾರರು ಹಾಗೂ ಸಂಸ್ಥೆಯ ತೀರ್ಮಾನವೇ ಅಂತಿಮ.
15. ಕೋವಿಡ್ ನಿಯಮವನ್ನು ಪಾಲಿಸುವಲ್ಲಿ ಎಲ್ಲರೂ ಸಹಕರಿಸತಕ್ಕದ್ದು.

ಜಾಹೀರಾತು
ಜಾಹೀರಾತು
ಜಾಹೀರಾತು

ಹೆಚ್ಚಿನ ಮಾಹಿತಿಗಾಗಿ ಕಾರ್ಯಕ್ರಮದ ಸಂಯೋಜಕರಾದ ಪ್ರವೀಣ್ ಮತ್ತು ಆನಂದ್ ಕುಲಾಲ್ ಅವರನ್ನು 9743175916 ಮತ್ತು
9844602916 ಸಂಖ್ಯೆಗಳಲ್ಲಿ ಸಂಪರ್ಕಿಸಬಹುದು.