ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಕಣಿಯೂರು ವಲಯದ ಅಂಡೇತ್ತಡ್ಕ ಕಾರ್ಯಕ್ಷೇತ್ರದಲ್ಲಿ ಡಿಜಿಟಲ್ ಸೇವಾ ಕಾಮನ್ ಸರ್ವಿಸ್ ಸೆಂಟರ್- ಕಹಳೆ ನ್ಯೂಸ್
ಅಂಡೇತ್ತಡ್ಕ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಕಣಿಯೂರು ವಲಯದ ಅಂಡೇತ್ತಡ್ಕ ಕಾರ್ಯಕ್ಷೇತ್ರದಲ್ಲಿ ಡಿಜಿಟಲ್ ಸೇವಾ ಕಾಮನ್ ಸರ್ವಿಸ್ ಸೆಂಟರ್ ಉದ್ಘಾಟನೆಗೊಂಡಿತು.
ಶಂಕರ ಭಟ್ ನಿಡ್ಡಾಜೆಯವರು ದೀಪ ಬೆಳಗಿಸಿ ಉದ್ಘಾಟನೆ ಮಾಡಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಕಣಿಯೂರು ವಲಯ ಒಕ್ಕೂಟದ ಅಧ್ಯಕ್ಷ ರಾದ ರಾಮಾನಂದ, ಜನಜಾಗೃತಿ ವೇದಿಕೆ ಯ ಮಾಜಿ ಅಧ್ಯಕ್ಷ ರಾದ ಅಬ್ಬಾಸ್ ಬಟ್ಲಾಡ್ಕ, ಅಂಡೆತ್ತಡ್ಕ ಒಕ್ಕೂಟದ ಅಧ್ಯಕ್ಷರಾದ ಬಾಲಕೃಷ್ಣ ಪೂಜಾರಿ, ಕಣಿಯೂರು ವಲಯದ ಮೇಲ್ವಿಚಾರಕರಾದ ಶ್ರೀಮತಿ ಪ್ರೇಮಾ ಹಾಗೂ ಒಕ್ಕೂಟದ ಪದಾಧಿಕಾರಿಗಳು ಸೇವಾ ಪ್ರತಿನಿಧಿ ವಸಂತಿ, ಸೀತಾರಾಮ ಆಳ್ವ ಮತ್ತಿತರರು ಉಪಸ್ಥಿತರಿದ್ದರು.