Saturday, November 23, 2024
ಉಡುಪಿದಕ್ಷಿಣ ಕನ್ನಡಸಿನಿಮಾಸುದ್ದಿ

ಕೋಸ್ಟಲ್‌ವುಡ್‌ನ ಬಹು ನಿರೀಕ್ಷೆಯ, ಬೋಜರಾಜ್ ವಾಮಂಜೂರು ಮೊದಲ ಬಾರಿಗೆ ನಾಯಕ ನಟನಾಗಿ ಕಾಣಿಸಿಕೊಳ್ಳುತ್ತಿರುವ ” ಬೋಜರಾಜ್ MBBS ” ತುಳುಚಿತ್ರ ಫೆ 18 ತೆರೆಗೆ – ಕಹಳೆ ನ್ಯೂಸ್

ಕೋಸ್ಟಲ್‌ವುಡ್‌ನ ಬಹು ನಿರೀಕ್ಷೆಯ, ಬೋಜರಾಜ್ ವಾಮಂಜೂರು ಮೊದಲ ಬಾರಿಗೆ ನಾಯಕ ನಟನಾಗಿ ಕಾಣಿಸಿಕೊಳ್ಳುತ್ತಿರುವ ” ಬೋಜರಾಜ್ MBBS ” ತುಳುಚಿತ್ರ ಫೆ 18 ತೆರೆಗೆ

‘ತಾಂಟ್ಟ್ರೆ ಬಾ ತಾಂಟ್’ ಬ್ಯಾರಿ ಗೆಟಪ್‌ನಲ್ಲಿ ಅರವಿಂದ್ ಬೋಳಾರ್

ಕಾಪಿಕಾಡ್ ಮತ್ತು ಕೊಡಿಯಾಲ್ ಬೈಲ್ ಒಂದೇ ಚಿತ್ರದಲ್ಲಿ..! ಇಸ್ಮಾಯಿಲ್ ಮೂಡುಶೆಡ್ಡೆ ಆಕ್ಷನ್ ಕಟ್

ತುಳುವರು ಕಾತುರದಿಂದ ಕಾಯುತ್ತಿರುವ ಬಹು ನಿರೀಕ್ಷೆಯ ಬೋಜರಾಜ್ ಎಂ.ಬಿ.ಬಿ.ಎಸ್ ಚಿತ್ರ ಹೊಸತೊಂದು ಹವಾ ಕ್ರಿಯೇಟ್ ಮಾಡಿದೆ.ಬೋಜರಾಜ್ ವಾಮಂಜೂರು ಮೊದಲ ಬಾರಿಗೆ ನಾಯಕ ನಟನಾಗಿ ಕಾಣಿಸಿಕೊಂಡಿರುವ ಪಕ್ಕಾ ಕಾಮಿಡಿ ಚಿತ್ರ ‘ಬೋಜರಾಜ್ MBBS’ ಹಲವು ಕಾರಣಗಳಿಂದ ಕೌತುಕದ ಕೇಂದ್ರಬಿಂದುವಾಗಿದೆ.  ತುಳುವರು ನಿರೀಕ್ಷೆಯಲ್ಲಿ ಬಿಡುಗಡೆಗೆ ಕಾಯುತ್ತಿರುವ ಈ ಚಿತ್ರ ಇದೀಗ ಈ ಇಬ್ಬರು ಕಲಾವಿದರು ಸ್ಕ್ರೀನ್ ಶೇರ್ ಮಾಡಿಕೊಂಡಿರುವುದು ಪ್ರೇಕ್ಷಕರಲ್ಲಿ ಇನ್ನಷ್ಟು ಕೂತೂಹಲ ಹೆಚ್ಚಿಸಿದೆ . ಈ ಚಿತ್ರವನ್ನು ದರ್ಬಾರ್ ಸಿನೆಮಾಸ್ ಬ್ಯಾನರಿನಲ್ಲಿ ರಫೀಕ್ ದರ್ಬಾರ್ ನಿರ್ಮಿಸಿದ್ದು, ಪರ್ವೇಜ್ ಬೆಳ್ಳಾರೆ ಮತ್ತು ಶರಣ್ ರಾಜ್ ಸುವರ್ಣ ಸಹ ನಿರ್ಮಾಪಕರಾಗಿದ್ದಾರೆ. ಇಸ್ಮಾಯಿಲ್ ಮೂಡುಶೆಡ್ಡೆ ಆಕ್ಷನ್ ಕಟ್ ಹೇಳಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಕೋಸ್ಟಲ್‌ವುಡ್‌ನಲ್ಲಿ DK v/s VK ಹವಾ.. ತುಳು ಸಿನಿಲೋಕದಲ್ಲೀಗ ಇದರದ್ದೇ ಕುತೂಹಲ..

ತುಳು ಚಿತ್ರರಂಗ ಮತ್ತು ರಂಗಭೂಮಿಯ ಎರಡು ಕಣ್ಣುಗಳಂತಿರುವ ದೇವದಾಸ್ ಕಾಪಿಕಾಡ್ ಮತ್ತು ವಿಜಯಕುಮಾರ್ ಕೊಡಿಯಾಲ್ ಬೈಲ್ ಎಂಬಿಬ್ಬರು ದಿಗ್ಗಜರುಗಳು ಮೊದಲ ಬಾರಿಗೆ ಒಂದೇ ಚಿತ್ರದಲ್ಲಿ ಬಣ್ಣ ಹಚ್ಚಿಕೊಂಡಿರುವುದು ತುಳುನಾದಲ್ಲಿ ಸಾಕಷ್ಟು ಸುದ್ದಿಯಾಗಿದೆೆ. ಅದರಲ್ಲೂ ಇತ್ತೀಚೆಗೆ ಈ ಚಿತ್ರದ ಈ ಇಬ್ಬರು ಮಹಾನ್ ಕಲಾವಿದರ ಇಂಟ್ರೊ ಸೀನ್ ಟ್ರಿಜರ್ arc Kannada musiq ಚಾನೆಲ್‌ನಲ್ಲಿ ಬಿಡುಗಡೆ ಆಗಿದೆ.

ಅದರಲ್ಲೂ ಇನ್ನಷ್ಟು ವಿಶೇಷಗಳಿವೆ. ಇಬ್ಬರ ಲೂಕ್‌ಗೂ ತುಳು ಪ್ರೇಕ್ಷಕರು ಫಿದಾ ಆಗಿದ್ದಾರೆ. ಕಾಪಿಕಾಡ್ ಮತ್ತು ಕೊಡಿಯಾಲ್ ಬೈಲ್ ನಡುವಿನ ಪೈಪೋಟಿ ಸಂಭಾಷಣೆಯ ತುಣುಕುಗಳು ಹರಿದಾಡುತ್ತಿದ್ದು ಅಭಿಮಾನಿಗಳ ಕೂತೂಹಲವನ್ನು ಹೆಚ್ಚಿಸಿದೆ.

ಸಿನೆಮಾದಲ್ಲೂ ‘ತಾಂಟ್ಟ್ರೆ ಬಾ ತಾಂಟ್’ ಪ್ರತಿಧ್ವನಿ..:

ಹಿಂದೊಮ್ಮೆ ಮಂಗಳೂರಿನಲ್ಲಿ ಎಸ್ಡಿಪಿಐ ನಾಯಕರೊಬ್ಬರ ಭಾಷಣದ ತುಣುಕು ಕರಾವಳಿಯಾದ್ಯಂತ ಬಹಳ ಸುದ್ದಿ ಆಗಿತ್ತು. ಸಂಸದ ನಳಿನ್ ಕುಮಾರ್ ಕಟೀಲ್‌ಗೆ ವಿರುದ್ಧವಾಗಿ ರಿಯಾಜ್ ಪರಂಗಿಪೇಟೆ ತಮ್ಮ ಭಾಷಣದಲ್ಲಿ ‘ತಾಂಟ್ಟ್ರೆ ಬಾ ತಾಂಟ್’ ಎಂಬ ಪದ ಬಳಸಿದ್ದರು. ಇದು ಭಾರೀ ಟ್ರೋಲ್ ಆಗಿತ್ತು. ದೊಡ್ಡ ರೀತಿಯಲ್ಲಿ ಶೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿತ್ತು .

ಇದೀಗ ಬಿಡುಗಡೆಗೆ ಸಿದ್ದವಾಗಿವ ಕೋಸ್ಟಲ್‌ವುಡ್‌ನ ಬಹುನಿರೀಕ್ಷೆಯ ತುಳು ಚಿತ್ರ ‘ಬೋಜರಾಜ್ MBBS’ನಲ್ಲಿ ಹಾಸ್ಯ ನಟ ಅರವಿಂದ್ ಬೋಳಾರ್ ಅವರು, ಬ್ಯಾರಿ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ.  ಕೈಯಲ್ಲಿ ಕತ್ತಿ ಹಿಡಿದುಕೊಂಡು ‘ತಾಂಟ್ಟ್ರೆ ಬಾ ತಾಂಟ್’ ಎಂದು ಅಬ್ಬರಿಸುವ ಡೈಲಾಗ್ ಇದೆಯಂತೆ. ಇದರ ಟೀಸರ್ ಇತ್ತೀಚೆಗೆ ಬಿಡುಗಡೆ ಆಗಿ ಶೋಷಿಯಲ್ ಮಿಡಿಯಾದಲ್ಲಿ ಸದ್ದು ಮಾಡುತ್ತಿದೆ.

 

ಈ ಬಗ್ಗೆ ನಿರ್ದೇಶಕ ಇಸ್ಮಾಯಿಲ್ ಮೂಡುಶೆಡ್ಡೆಯವರು ತಮ್ನದೇ ದಾಟಿಯಲ್ಲಿ ಪ್ರತಿಕ್ರಿಯಿಸಿದ್ದು, ಇದು ಈ ಬ್ಯಾರಿ ಭಾಷೆಯಲ್ಲಿ ಬಹುಕಾಲದಿಂದ ಇರುವ ಪದ. ಹುಡುಗರು ಗಲಾಟೆ ಮಾಡುವಾಗ, ಆಟ ಆಡುವಾಗ ಚಾಲೆಂಜ್ ಸಂದರ್ಭದಲ್ಲಿ ಬಳಸುವಂತ ಪದ. ಆ ಡೈಲಾಗ್ ತಮಾಷೆ ರೂಪದಲ್ಲಿ ‘ಭೋಜರಾಜ್…’ ಸಿನಿಮಾದಲ್ಲಿ ಬಳಕೆಯಾಗಿದೆ ಎಂದಿದ್ದಾರೆ.

ನಾವು ನಮ್ಮ ಚಿತ್ರದಲ್ಲಿ ಹಾಸ್ಯ ಸನ್ನಿವೇಶವೊಂದರಲ್ಲಿ ಈ ಪದವನ್ನು ಬಳಸಿದ್ದೇವೆ. ಈಗಾಗಲೇ ಚಿತ್ರದ ಬಿಡುಗಡೆ ಎದುರು ನೋಡುತ್ತಿರುವ ತುಳು ಚಿತ್ರ ಪ್ರೇಕ್ಷಕರಿಗೆ ಈ ಡೈಲಾಗ್ ಚಿತ್ರದ ಬಗ್ಗೆ ಮತ್ತಷ್ಟು ಕೂತೂಹಲವನ್ನು ಹೆಚ್ಚಿಸಿದೆ. ತುಳು ಚಿತ್ರವನ್ನು ಇಲ್ಲಿನ ಸರ್ವ ಧರ್ಮ, ಜಾತಿ ಬಾಂಧವರು ಕೂಡ ಎಂಜಾಯ್ ಮಾಡುವಂತಿದೆ ಎನ್ನುತ್ತಾರೆ ನಿರ್ದೇಶಕರು.