Sunday, November 24, 2024
ಕುಂದಾಪುರಬೈಂದೂರುರಾಜಕೀಯರಾಜ್ಯಸುದ್ದಿ

ಹಿಜಬ್ ಮಾನಸಿಕತೆ ಮೋಸ್ಟ್ ಡೇಂಜರಸ್ ; ಪ್ರಮೋದ್ ಮುತಾಲಿಕ್ ಆಕ್ರೋಶ – ಕಹಳೆ ನ್ಯೂಸ್

ಬೆಳಗಾವಿ : ಹಿಜಬ್ ಪ್ರಕರಣ ಎರಡು ತಿಂಗಳಿನಿಂದ ನಡೆಯುತ್ತಿದೆ. ಆಗಲೇ ವಿದ್ಯಾರ್ಥಿನಿಯರನ್ನು ಅಮಾನತು ಮಾಡಿದರೆ ರಾಜ್ಯ ವ್ಯಾಪ್ತಿ ವಿಸ್ತಾರ ಆಗುತ್ತಿರಲಿಲ್ಲ ಎಂದು ಶ್ರೀ ರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ

ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಹಿಜಬ್ ಬಗ್ಗೆ ನಿಮಗೆ ಹಕ್ಕು ಸ್ವಾತಂತ್ರ್ಯ ಇರಬಹುದು. ಕಾಲೇಜಿನ ಹೊರಗಡೆ ಸ್ವತಂತ್ರವಾಗಿ ಇರಬಹುದು. ಆದರೆ ಕಾಲೇಜಿನ ನೀತಿ ನಿಯಮ ಪಾಲಿಸಬೇಕು. ಕಾಲೇಜಿನ ಆವರಣದಲ್ಲಿ ಇದ್ದರೆ ಕಾಲೇಜು ನಿಯಮದಲ್ಲಿರಬೇಕು. ಅಲ್ಲಿ ಹಿಜಬ್, ಬುರ್ಖಾ ಹಾಕುತ್ತೇನೆ ಅಂದರೆ ನಡೆಯುವುದಿಲ್ಲ. ಮುಸ್ಲಿಂ ವಿದ್ಯಾರ್ಥಿನಿಯರ ಹಿಂದೆ ಎಸ್.ಡಿ.ಪಿ.ಐ ಮತ್ತು ಪಿಎಫ್‍ಐ, ಎಂಐಎಂ ಸಂಘಟನೆ ಇದೆ. ಇವರ ನೀಚ ಕೃತ್ಯಕ್ಕೆ ವಿದ್ಯಾರ್ಥಿನಿಯರು ಬಲಿಯಾಗುತ್ತಿದ್ದಾರೆ. ಶಿಕ್ಷಣದಲ್ಲಿ ಇಸ್ಲಾಮೀಕರಣ ಮಾಡಲಾಗುತ್ತಿದೆ. ಸರ್ಕಾರ ಇದಕ್ಕೆ ಅವಕಾಶ ಮಾಡಿಕೊಡಬಾರದು. ಇನ್ನೂ ಆರು ಜನ ವಿದ್ಯಾರ್ಥಿನಿಯರನ್ನು ಕೂಡಲೇ ಅಮಾನತು ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಹಿಜಬ್ ಮಾನಸಿಕತೆ ಮೋಸ್ಟ್ ಡೇಂಜರಸ್ ಇದು ಟೆರರಿಸ್ಟ್ ಮಾನಸಿಕತೆ ಇಸ್ಲಾಮೀಕರಣ ಇದು ನಡೆಯಲ್ಲ. ಬೆಂಗಳೂರಿನ ರೈಲ್ವೆ ನಿಲ್ದಾಣದಲ್ಲಿ ಮಸೀದಿ ನಿರ್ಮಾಣ, ಮುಸ್ಲಿಂ ಹೆಚ್ಚು ಇರುವ ಗ್ರಾಮದಲ್ಲಿ ಹಿಂದೂ ಅಂಗನವಾಡಿ ಶಿಕ್ಷಕಿಗೆ ವಿರೋಧಿಸಲಾಗಿದೆ. ಕೇಸರೀಕರಣ ಸಹ ಸರಿಯಲ್ಲ. ಹಿಜಬ್ ಹಾಕಿದ್ದರಿಂದ ಕೇಸರಿ ಶಾಲು ಹಾಕಲಾಗಿದೆ. ಹಿಂದೂಗಳಲ್ಲಿ ಈ ರೀತಿಯ ಮಾನಸಿಕತೆ ಇಲ್ಲ. ಏಕತೆಯ ಮನೋಭಾವ ಇದೆ ಎಂದು ಹೇಳಿದ್ದಾರೆ.

ಇದೇ ವೇಳೆ ಕಾಶ್ಮೀರದಲ್ಲಿ ಮಾಜಿ ಸಿಎಂ ಮೆಹಬೂಬ್ ಮುಫ್ತಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಕಾಶ್ಮೀರದಲ್ಲಿ ಇಸ್ಲಾಮೀಕರಣ ಅನಾಹುತ ಮಾಡಿದ್ದೀರಿ. ಸೈನಿಕರಿಗೆ ಅವಮಾನ ಮಾಡಿದ್ದೀರಿ. ನೀವು ಕರ್ನಾಟಕದ ವಿಚಾರದಲ್ಲೂ ಮೂಗು ತೂರಿಸುವ ಅವಶ್ಯಕತೆ ಇಲ್ಲ. ಈಗಾಗಲೇ ಕೇರಳ ಹೈಕೋರ್ಟ್ ಸಹ ಹಿಜಬ್‍ಗೆ ಅವಕಾಶ ಕೊಟ್ಟಿಲ್ಲ. ಕರ್ನಾಟಕದಲ್ಲಿ ರಿಜೆಕ್ಟ್ ಆಗಲಿದೆ ಎಂದು ತಿಳಿಸಿದ್ದಾರೆ.