Recent Posts

Sunday, January 19, 2025
ರಾಜಕೀಯ

ಧರ್ಮ ಪಾಲಕನಾಗಿ, ನಿಮ್ಮ ಸೇವಕನಾಗಿ, ಪ್ರಮಾಣಿಕವಾಗಿ ಕೆಲಸ ಮಾಡುತ್ತೇನೆ – ರಾಜೇಶ್ ನಾಯಕ್

ಬಂಟ್ವಾಳ : ಬಿಜೆಪಿ ಗ್ರಾಮ ಸಮಿತಿ ಬಾಳ್ತಿಲ ಇದರ ಆಶ್ರಯದಲ್ಲಿ ಬಂಟ್ವಾಳ ಕ್ಷೇತ್ರದ ನೂತನ ಶಾಸಕರಾಗಿ ಆಯ್ಕೆಯಾದ ಉಳಿಪ್ಪಾಡಿ ರಾಜೇಶ್ ನಾಯಕ್ ಅವರಿಗೆ ಅಭಿನಂದನಾ ಕಾರ್ಯಕ್ರಮ ಪೂರ್ಲಿಪಾಡಿಯಲ್ಲಿ ನಡೆಯಿತು.

ಅಭಿನಂದನೆ ಸ್ವೀಕರಿಸಿ ಮಾತನಾಡಿದ ಶಾಸಕ ರಾಜೇಶ್ ನಾಯಕ್, ನಾನು ರಾಜಧರ್ಮವನ್ನು ಪಾಲಿಸುವ ನಿಮ್ಮ ಸೇವಕನಾಗಿ ಐದು ವರ್ಷ ಇತಿ ಮಿತಿಯೊಳಗೆ ಪ್ರಮಾಣಿಕವಾಗಿ ಕೆಲಸ ಮಾಡುತ್ತೇನೆ. ನೀವು ನೀಡಿದ ಜವಬ್ದಾರಿಗೆ ಕುಂದು ಬಾರದ ರೀತಿಯಲ್ಲಿ ಬಂಟ್ವಾಳ ಕ್ಷೇತ್ರವನ್ನು ಮಾದರಿ ಕ್ಷೇತ್ರವಾಗಿ ಮಾಡಲು ನನ್ನ ಶಕ್ತಿ ಮೀರಿ ಪ್ರಯತ್ನ ಮಾಡುತ್ತೇನೆ. ಇದಕ್ಕೆ ಕ್ಷೇತ್ರದ ಜನರ ಸಹಕಾರವನ್ನು ಬಯಸುತ್ತೇನೆ ಎಂದು ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಕ್ಷೇತ್ರದ ಜನರಿಗೆ ಯಾವುದೇ ತೊಂದರೆಯಾಗದ ರೀತಿಯಲ್ಲಿ ಸಭ್ಯ ರಾಜಕಾರಣ ಮಾಡುವ ಮೂಲಕ ನೀವು ನನ್ನ ಮೇಲೆ ಇಟ್ಟಿರುವ ನಿರೀಕ್ಷೆಗೆ ಚ್ಯುತಿ ಬಾರದ ರೀತಿಯಲ್ಲಿ ಕ್ಷೇತ್ರವನ್ನು ಅಭಿವೃದ್ಧಿಯ ಪಥದಲ್ಲಿ ಕೊಂಡುಹೋಗುತ್ತೇನೆ. ನನ್ನ ಗೆಲುವಿಗೆ ಕಾರಣರಾದ ಎಲ್ಲಾ ಕಾರ್ಯಕರ್ತರಿಗೆ, ಮತದಾರರಿಗೆ ಅಬಾರಿಯಾಗಿದ್ದೇನೆ ಎಂದು ಹೇಳಿದರು.

ಬಿಜೆಪಿ ವಕ್ತಾರ ಹರಿಕೃಷ್ಣ ಬಂಟ್ವಾಳ ಮಾತನಾಡಿ, ಕಲ್ಲಡ್ಕ ಎನ್ನುವುದು ಕ್ರಾಂತಿಯ ಕ್ಷೇತ್ರ. ಕಲ್ಲಡ್ಕದಲ್ಲಿ ಕ್ರಾಂತಿಯಾದರೆ ಮಾತ್ರ ಜನರಿಗೆ ಶಾಂತಿ ಸಿಗುತ್ತದೆ. ಧಾರ್ಮಿಕ, ಸಾಮಾಜಿಕ, ರಾಜಕೀಯವಾದ ಕ್ರಾಂತಿ ಹುಟ್ಟು ಕಲ್ಲಡ್ಕದಲ್ಲಿ ಆಗಲಿದೆ. ಕಲ್ಲಡ್ಕದ ಶಾಲೆಗೆ “ಕೈ” ಹಾಕಿದವರಿಗೆ ಸೋಲಾಗಿದೆ ಎನ್ನುವುದು ಸತ್ಯ ಎಂದು ಅವರು ಹೇಳಿದರು.