Sunday, January 19, 2025
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಚಾಲಕನ ನಿಯಂತ್ರಣ ತಪ್ಪಿ ಹೊಟೇಲ್‍ಗೆ ನುಗ್ಗಿ ಪಕ್ಕದ ಕಂದಕಕ್ಕೆ ಉರುಳಿದ ಕಾರು- ಕಹಳೆ ನ್ಯೂಸ್

ಬಂಟ್ವಾಳ: ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆ ಬದಿಯಲ್ಲಿರುವ ಹೊಟೇಲಿಗೆ ನುಗ್ಗಿ ಬಳಿಕ ಪಕ್ಕದ ಕಂದಕಕ್ಕೆ ಉರುಳಿದ ಘಟನೆ ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಗಡಿಯಾರ ಎಂಬಲ್ಲಿ ನಡೆದಿದೆ.

ಮಂಗಳೂರಿನಿಂದ ಉಪ್ಪಿನಂಗಡಿ ಕಡೆ ಸಾಗುತ್ತಿದ್ದ ಇಂಡಿಕಾ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಿರುವ ಹೊಟೇಲ್‍ಗೆ ನುಗ್ಗಿದ ಪರಿಣಾಮ, ಹೊಟೇಲ್ ಮಾಲಕ ಗಂಭೀರ ಗಾಯಗೊಂಡಿದ್ದು, ಮೂವರು ಹೊಟೇಲ್ ಸಿಬಂದಿಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಗಂಭೀರ ಗಾಯಗೊಂಡಿರುವ ಹೊಟೇಲ್ ಮಾಲಕರಾದ ರಿಯಾಝ್ ಅವರನ್ನು ಮಂಗಳೂರು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಇನ್ನು ಅಪಘಾತದ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಚಾಲಕ ಅಪಾಯದಿಂದ ಪಾರಾಗಿದ್ದಾನೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು