Sunday, January 19, 2025
ಬೆಂಗಳೂರುರಾಜಕೀಯರಾಜ್ಯಸುದ್ದಿ

ಸೇಡಂ ಬಿಜೆಪಿ ಶಾಸಕರ ಖಾಸಗಿ ವಿಡಿಯೋ ತೆಗೆದು ಹಣ ಕೊಡುವಂತೆ ಒತ್ತಾಯ ; ಬ್ಲ್ಯಾಕ್‌ಮೇಲ್‌ ಪ್ರಕರಣ – ತಮಿಳುನಾಡಿನಲ್ಲಿ ನಾಲ್ವರು ವಶ – ಕಹಳೆ ನ್ಯೂಸ್

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಪದೇ ಪದೇ ಸಿಡಿ ಕೇಸ್ ಸೇರಿದಂತೆ ಹಲವು ಬ್ಲಾಕ್‍ಮೇಲ್ ಕೇಸ್ ಸದ್ದು ಮಾಡುತ್ತಿದೆ. ಈ ನಡುವೆ ಇದೀಗ ಮತ್ತೊಂದು ಬ್ಲಾಕ್‍ಮೇಲ್ ಕೇಸ್ ವರದಿಯಾಗಿದ್ದು, ಸೇಡಂ ಬಿಜೆಪಿ ಶಾಸಕ ರಾಜ್ಕುಮಾರ್ ಪಾಟೀಲ್‍ಗೆ ಮಹಿಳೆಯೊಬ್ಬರು ಬ್ಲಾಕ್ ಮೇಲ್ ಮಾಡಿರುವ ಆರೋಪ ಕೇಳಿ ಬಂದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

 

ಜಾಹೀರಾತು
ಜಾಹೀರಾತು
ಜಾಹೀರಾತು

ಶಾಸಕರು ಉತ್ತರ ಕರ್ನಾಟಕ ಮೂಲದವರಾಗಿದ್ದು, ಮಹಿಳೆ ವಿರುದ್ಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈಗಾಗಲೇ ಶಾಸಕರ ದೂರಿನ ಮೇರೆಗೆ ನಾಲ್ವರು ಆರೋಪಿಗಳನ್ನು ಪೊಲೀಸರು ತಮಿಳುನಾಡಿನಲ್ಲಿ ವಶಕ್ಕೆ ಪಡೆದಿದ್ದಾರೆ.

ಸಿಎಂ ಫೇಸ್‍ಬುಕ್ ಪೇಜ್‍ನಲ್ಲಿ ಬಹಿರಂಗವಾಗಿ ಮಹಿಳೆ ಮೆಸೇಜ್ ಮಾಡಿದ್ದರು. ಮಹಿಳೆಯ ಬ್ಲ್ಯಾಕ್‍ಮೇಲ್ ಬೆದರಿಕೆಯಿಂದ ಎಂಎಲ್‍ಎ ದೂರು ನೀಡಿದ್ದಾರೆ. ಇತ್ತ ಪ್ರಕರಣ ಸಂಬಂಧ ಮಹಿಳೆಯು ವಕೀಲ ಜಗದೀಶ್ ಜೊತೆ ವಿಧಾನ ಸೌಧ ಪೊಲೀಸ್ ಠಾಣೆಗೆ ತೆರಳಿದ್ದಾರೆ.

ಮಹಿಳೆ ತನಗೆ ಮೋಸವಾಗಿದೆ ಎಂದು ಸುಳ್ಳು ಹೇಳುತ್ತಿದ್ದು, ಆಕೆ ಬ್ಲ್ಯಾಕ್‌ಮೇಲ್‌ ಮಾಡುತ್ತಿರುವುದಾಗಿ ಆರೋಪಿಸುತ್ತಿರುವ ಬಿಜೆಪಿ ಶಾಸಕ ಮಹಿಳೆ ವಿರುದ್ಧ ಕ್ರಮ ಕೈಗೊಳ್ಳುವಂತೆ ವಿಧಾನಸೌಧ ಪೊಲೀಸ್​ ಠಾಣೆಗೆ ದೂರು ನೀಡಿದ್ದಾರೆ. ಈ ದೂರಿನ ಮೇರೆಗೆ ಪೊಲೀಸರು, ತಮಿಳುನಾಡಿನಲ್ಲಿ ನಾಲ್ವರನ್ನು ವಶಕ್ಕೆ ಪಡೆದು ನಗರಕ್ಕೆ ಕರೆತಂದು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ತಿಳಿದುಬಂದಿದೆ.

ಈ ಮಹಿಳೆ ತನಗೆ ಕೆಲಸ ಮಾಡಿಕೊಡಿ ಎಂದು ಶಾಸಕರ ಬಳಿ ಹೋಗಿದ್ದಾರೆ. ನಂತರ ಅವರ ಮೊಬೈಲ್‌ ಸಂಖ್ಯೆಯನ್ನು ಪಡೆದು ಅವರೊಂದಿಗೆ ಸಂಪರ್ಕದಲ್ಲಿದ್ದಾರೆ. ಶಾಸಕರ ಖಾಸಗಿ ವಿಡಿಯೋ ತೆಗೆದು ಹಣ ಕೊಡುವಂತೆ ಒತ್ತಾಯಿಸಿದ್ದಾಳೆ. ಶಾಸಕರು ಹಣ ಕೊಡಲು ನಿರಾಕರಿಸಿದಾಗ ವಿಡಿಯೋ ಲೀಕ್‌ ಮಾಡುವುದಾಗಿ ಬೆದರಿಕೆ ಹಾಕಿದ್ದಾಳೆ ಎನ್ನಲಾಗುತ್ತಿದ್ದು, ಈ ಬಗ್ಗೆ ಇನ್ನಷ್ಟೇ ಸತ್ಯಾಸತ್ಯತೆ ತಿಳಿಯಬೇಕಿದೆ.