Recent Posts

Monday, January 20, 2025
ಬೆಂಗಳೂರುಸುದ್ದಿ

ಬೆಂಗಳೂರಿನಲ್ಲಿ ಸೆಕ್ಸ್ ದಂದೆ ನಡೆಸುತ್ತಿದ್ದ ಸ್ಪಾ ಮೇಲೆ ಪೋಲಿಸ್ ದಾಳಿ ; ವಿದೇಶಿ ಮಹಿಳೆ ಸೇರಿ ಅನೇಕ ಮಹಿಳೆಯರ ರಕ್ಷಣೆ – ಕಹಳೆ ನ್ಯೂಸ್

ಬೆಂಗಳೂರು(ಫೆ.06): ಅನೈತಿಕ ಚಟುವಟಿಕೆಗಳ ಶಂಕೆ ಹಿನ್ನೆಲೆಯಲ್ಲಿ ನಗರದ ಮೂರು ‘ಸ್ಪಾ’(Spa) ಮೇಲೆ ದಾಳಿ ನಡೆಸಿದ ಸಿಸಿಬಿ ಪೊಲೀಸರು(CCB Police), ವಿದೇಶಿಯರು ಸೇರಿ 13 ಮಂದಿ ಮಹಿಳೆಯರನ್ನು ರಕ್ಷಿಸಿದ್ದಾರೆ.

ಉತ್ತರ ಭಾರತ(North India) ಮೂಲದ ದೇವೆಂದರ್‌, ಅಭಿಜಿತ್‌ ಬಂಧಿತರು. ನಗರದ ರಾಯಲ್‌ ಸ್ಪಾ ಆ್ಯಂಡ್‌ ಸಲೂನ್‌, ಅಸ್ತೇಟಿಕ್‌ ಯೂನಿಸೆಕ್ಸ್‌ ಸೆಲೂನ್‌ ಆ್ಯಂಡ್‌ ಸ್ಪಾ, ನಿಸರ್ಗ ಆಯುರ್ವೇದಿಕ್‌ ಕ್ಲಿನಿಕ್‌ಗಳ ಮೇಲೆ ಸಿಸಿಬಿ ದಾಳಿ(CCB Raid) ನಡೆಸಿದೆ. ಕೆಲಸದ ನೆಪದಲ್ಲಿ ಯುವತಿಯರನ್ನು(Girls) ಕರೆತಂದು ಅಕ್ರಮ ಚಟುವಟಿಕೆಗೆ ಬಳಸುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದು ಸಿಸಿಬಿಯ ಮಹಿಳಾ ಸಂರಕ್ಷಣಾ ದಳ ಕಾರ್ಯಾಚರಣೆ ನಡೆಸಿತು ಎಂದು ಅಧಿಕಾರಿಗಳು ಹೇಳಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ದಾಳಿ ವೇಳೆ ನೇಪಾಳ(Nepal) ಹಾಗೂ ಟರ್ಕಿ(Turkey) ದೇಶದ ಇಬ್ಬರು ಮಹಿಳೆಯರು(Woman), ನಾಗಾಲ್ಯಾಂಡ್‌ನ ಇಬ್ಬರು, ಅಸ್ಸಾಂನ ಮೂವರು ಮಹಿಳೆಯರು, ದೆಹಲಿಯ ಒಬ್ಬರು, ಪಶ್ಚಿಮ ಬಂಗಾಳದ ಮೂವರು ಹಾಗೂ ಸ್ಥಳೀಯ ಇಬ್ಬರು ಮಹಿಳೆಯರನ್ನು ರಕ್ಷಿಸಲಾಗಿದೆ. ಈ ಸಂಬಂಧ 9 ಮಂದಿ ವಿರುದ್ಧ ಎಚ್‌ಎಸ್‌ಆರ್‌ ಲೇಔಚ್‌, ಅಶೋಕ ನಗರ ಹಾಗೂ ಮಡಿವಾಳ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು