Sunday, January 19, 2025
ಕ್ರೈಮ್ದಕ್ಷಿಣ ಕನ್ನಡಸುದ್ದಿ

ಮಂಗಳೂರಿನಲ್ಲಿ ಅಪ್ರಾಪ್ತ ವಿದ್ಯಾರ್ಥಿನಿಯರನ್ನು ಬಳಸಿ ವೇಶ್ಯಾವಾಟಿಕೆ ದಂಧೆ – ಕೌನ್ಸಿಲಿಂಗ್​ನಲ್ಲಿ ಇನ್ನಷ್ಟು ಆಘಾತಕಾರಿ ಸಂಗತಿ ಬಯಲು ; ಅಪ್ರಾಪ್ತ ವಿದ್ಯಾರ್ಥಿನಿಯರೇ ವೇಶ್ಯವಾಟಿಕೆ ದಂಧೆಯ ಟಾರ್ಗೆಟ್ – ಕಹಳೆ ನ್ಯೂಸ್

ಮಂಗಳೂರು: ಅಪ್ರಾಪ್ತ ವಿದ್ಯಾರ್ಥಿನಿಯರನ್ನು ಬಳಸಿ ವೇಶ್ಯವಾಟಿಕೆ ದಂಧೆ ನಡೆಸುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಷ್ಟು ಆತಂಕಕಾರಿ ವಿಚಾರಗಳು ಬಯಲಿಗೆ ಬಂದಿದೆ.

ದಂಧೆಯಲ್ಲಿ ಇನ್ನಷ್ಟು ವಿದ್ಯಾರ್ಥಿನಿಯರು ಸಿಲುಕಿದ್ದು, ಈ ಜಾಲದ ಕಾರ್ಯಾಚರಣೆಯ ಮಾಹಿತಿ ಎಲ್ಲರನ್ನೂ‌ ದಿಗ್ಭ್ರಮೆ‌ ಮೂಡಿಸುವಂತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಮಕ್ಕಳ ಸಹಾಯವಾಣಿ ನಡೆಸಿದ ಕೌನ್ಸಿಲಿಂಗ್​ನಲ್ಲಿ ಹಲವು ಮಾಹಿತಿಗಳು ಬೆಳಕಿಗೆ ಬಂದಿದೆ.

ಅಪ್ರಾಪ್ತ ವಿದ್ಯಾರ್ಥಿನಿಯರೇ ವೇಶ್ಯವಾಟಿಕೆ ದಂಧೆಯ ಟಾರ್ಗೆಟ್ ಎನ್ನಲಾಗಿದೆ. ಆನ್​ಲೈನ್ ಕ್ಲಾಸ್ ಶುರುವಾದ ಬಳಿಕ ಅಪ್ರಾಪ್ತೆಯರನ್ನು ಈ ದಂಧೆಗೆ ಸೇರಿಸುವ ಪ್ರಕ್ರಿಯೆ ಹೆಚ್ಚಾಗಿದೆ. ಫೋಟೋ, ವಿಡಿಯೋ ಇಟ್ಕೊಂಡು ಮೊಬೈಲ್ ಮೂಲಕ ಅಪ್ರಾಪ್ತೆಯರನ್ನು ದಂಧೆಯ ಪ್ರಮುಖರು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ.

ಕೌನ್ಸಿಲಿಂಗ್ ಸಂದರ್ಭವೂ ವಿದ್ಯಾರ್ಥಿನಿಯೊಬ್ಬಳ ಬ್ಯಾಂಕ್ ಅಕೌಂಟ್​ಗೆ ಹಣ ವರ್ಗಾವಣೆಯಾಗಿದೆ. ವಿದ್ಯಾರ್ಥಿನಿಯರ ಅಟೆಂಡೆನ್ಸ್ ಕೊರತೆ, ವರ್ತನೆಯಲ್ಲಿ ಬದಲಾವಣೆ ಕಂಡು ಬಂದಾಗ ಪೋಷಕರು ಹಾಗೂ ಶಿಕ್ಷಣ ಸಂಸ್ಥೆಯವರು ಎಚ್ಚೆತ್ತುಕೊಂಡರೆ ಮುಂದಾಗಬಹುದಾದ ಅನಾಹುತವನ್ನು ತಪ್ಪಿಸಬಹುದಾಗಿದೆ. ಪಾಲಕರು ಮುನ್ನೆಚ್ಚರಿಕೆ ವಹಿಸುವಂತೆ ಮಕ್ಕಳ ಸಹಾಯವಾಣಿಯಿಂದ ಕರೆ ಮಾಡಲಾಗಿದೆ.