Friday, September 20, 2024
ರಾಜಕೀಯ

ಇಂದು ಸಂಪುಟ ವಿಸ್ತರಣೆ: ಯಾರಾಗಲಿದ್ದಾರೆ ನೂತನ ಸಚಿವರು? – ಕಹಳೆ ನ್ಯೂಸ್

ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟ ಸರ್ಕಾರದ ಸಚಿವ ಸಂಪುಟ ಇಂದು ರಚನೆಯಾಗುತ್ತಿದ್ದು, ಉಭಯ ಪಕ್ಷಗಳ ಸಚಿವರ ಪಟ್ಟಿ ಅಂತಿಮಗೊಂಡಿದೆ.

12 ಗಂಟೆ ವೇಳೆಗೆ ನೂತನ ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದು, ಕಾಂಗ್ರೆಸ್ ನಿಂದ ಡಿ.ಕೆ. ಶಿವಕುಮಾರ್, ಕೆ.ಜೆ. ಜಾರ್ಜ್, ಕೃಷ್ಣ ಭೈರೇಗೌಡ, ಯು.ಟಿ. ಖಾದರ್, ಆರ್.ವಿ. ದೇಶಪಾಂಡೆ, ವೆಂಕಟರಮಣಪ್ಪ, ಶಿವಾನಂದ ಪಾಟೀಲ್, ಜಮೀರ್ ಅಹಮದ್ ಖಾನ್, ಶಿವಶಂಕರರೆಡ್ಡಿ, ಜಯಮಾಲಾ, ಪ್ರಿಯಾಂಕ ಖರ್ಗೆ, ಪುಟ್ಟರಂಗಶೆಟ್ಟಿ, ತುಕಾರಾಂ, ರಮೇಶ್ ಜಾರಕಿಹೊಳಿ, ರಾಜಶೇಖರ್ ಪಾಟೀಲ್ ಹಾಗೂ ಪಕ್ಷೇತರ ಶಾಸಕ ಶಂಕರ್ ಸಚಿವರಾಗಲಿದ್ದಾರೆಂದು ತಿಳಿದು ಬಂದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು

ಇನ್ನು ಜೆಡಿಎಸ್ ಪಾಲಿಗೆ ಸಿಕ್ಕಿರುವ 12 ಸಚಿವ ಸ್ಥಾನಗಳ ಪೈಕಿ ಹತ್ತು ಸ್ಥಾನಗಳಿಗೆ ಮಾತ್ರ ಪ್ರಮಾಣವಚನ ಸ್ವೀಕರಿಸಲಿದ್ದು, ಮೊದಲ ಹಂತದಲ್ಲಿ ಹೆಚ್.ಡಿ. ರೇವಣ್ಣ, ಬಂಡೆಪ್ಪ ಕಾಶೆಂಪುರ, ಎನ್. ಮಹೇಶ್, ಸತ್ಯನಾರಾಯಣ, ಸಾರಾ ಮಹೇಶ್, ಜಿ.ಟಿ. ದೇವೇಗೌಡ, ಸಿ.ಎಸ್. ಪುಟ್ಟರಾಜು, ಹೆಚ್.ಕೆ. ಕುಮಾರಸ್ವಾಮಿ, ವೆಂಕಟರಾವ್ ನಾಡಗೌಡ ಸಚಿವರಾಗಲಿದ್ದಾರೆಂದು ತಿಳಿದು ಬಂದಿದೆ.

ಅಚ್ಚರಿಯ ಸಂಗತಿಯೆಂದರೆ ಕಾಂಗ್ರೆಸ್ ಪಟ್ಟಿಯಲ್ಲಿ ಹಲವು ಹಿರಿಯ ಶಾಸಕರು ಸಚಿವ ಸ್ಥಾನ ವಂಚಿತರಾಗಿದ್ದಾರೆ. ಹಾಗೆಯೇ ಜೆಡಿಎಸ್ ಪಟ್ಟಿಯಲ್ಲೂ ಕೂಡ ಬಸವರಾಜ ಹೊರಟ್ಟಿ, ಹೆಚ್. ವಿಶ್ವನಾಥ್ ಮೊದಲಾದ ಹಿರಿಯ ನಾಯಕರು ಸ್ಥಾನ ಪಡೆದಿಲ್ಲ.