Recent Posts

Sunday, January 19, 2025
ಸುದ್ದಿ

ದ್ವಿಚಕ್ರ ವಾಹನಕ್ಕೆ ಬುಲೆರೋ ಡಿಕ್ಕಿ : ದ್ವಿಚಕ್ರ ವಾಹನ ಸವಾರರಿಗೆ ಗಂಭೀರ ಗಾಯ –ಕಹಳೆ ನ್ಯೂಸ್

ಕೊರಟಗೆರೆ :- ತಾಲ್ಲೂಕಿನ ಗೌರಿಬಿದನೂರು ಮಾರ್ಗದ ಬೈಪಾಸ್ ರಸ್ತೆಯಲ್ಲಿ ದ್ವಿಚಕ್ರ ವಾಹನಕ್ಕೆ ಅಪರಿಚಿತ ಬುಲೆರೋ ವಾಹನವೊಂದು ಡಿಕ್ಕಿ ಹೊಡೆದು ಪರಾರಿ ದ್ವಿಚಕ್ರ ವಾಹನ ಸವಾರರಿಗೆ ಗಂಭೀರ ಗಾಯವಾಗಿದೆ. ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ದ್ವಿಚಕ್ರ ವಾಹನದಲ್ಲಿ ತಮ್ಮ ಸ್ವಗ್ರಾಮ ಗುಂಡಿನ ಪಾಳ್ಯಕ್ಕೆ ತೆರಳುತ್ತಿದ್ದ ಕುಂಬಯ್ಯ 40 ವರ್ಷ ಹಾಗೂ ಅವರ ಪತ್ನಿ ಮಂಜಮ್ಮ 34ವರ್ಷ ದ್ವಿಚಕ್ರ ವಾಹನ ಸವಾರ ಕುಂಬಯ್ಯ ಗಾರೆ ಕೆಲಸ ಮಾಡುತ್ತಿದ್ದು ಅವರ ಪತ್ನಿ ಮಂಜುಳಾ ಗಾರ್ಮೆಂಟ್ಸ್ ಒಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದರು.

ತಮ್ಮ ದಿನನಿತ್ಯದ ಕೆಲಸ ಮುಗಿಸಿಕೊಂಡು ಮನೆಗೆ ಹಿಂತಿರುಗುವಾಗ ಕೊರಟಗೆರೆ ಹಾಗೂ ಗೌರಿಬಿದನೂರು ಬೈಪಾಸ್ ರಸ್ತೆಯಲ್ಲಿ ಅಪರಿಚಿತ ಬುಲೆರೋ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯವಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇನ್ನೂ ಇದಕ್ಕೆಲ್ಲ ಕಾರಣ ಬೈಪಾಸ್ ರಸ್ತೆಯ ಪಕ್ಕದಲ್ಲಿರುವ ಹೈಮಾಸ್ಕ್ ಬೀದಿ ದೀಪಗಳು ಆನ್ ಆಗದೇ ಇರುವುದು ಹಾಗೆ ಬೈಪಾಸ್ ರಸ್ತೆಯ ಅಕ್ಕಪಕ್ಕದಲ್ಲಿ ಅನೇಕ ವಾಹನಗಳು ನಿಲ್ಲುತ್ತವೆ ಆದ್ದರಿಂದ ರಸ್ತೆಯಲ್ಲಿ ಈ ಬದಿಯಿಂದ ಆ ಬದಿಗೆ ಸಂಚರಿಸುವ ವಾಹನಗಳು ಕಾಣದೆ ಬರುವುದರಿಂದ ಈ ಅಪಘಾತಗಳಿಗೆ ಕಾರಣವಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ…. ಕೊರಟಗೆರೆಯ ಸ್ಥಳೀಯ ಪೊಲೀಸ್ ಅಧಿಕಾರಿ ಎ.ಎಸ್ ಐ ಯೋಗೀಶ್ ಎ.ಎಸ್ ಐ ಶಂಕರ್ ನಾರಾಯಣ್ ಹಾಗು ಹೆಡ್ ಕಾನ್ಸ್ಟೇಬಲ್ ತಿಪ್ಪೇಸ್ವಾಮಿ ಮತ್ತು ಅವರ ತಂಡ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ಕೈಗೊಂಡಿದ್ದಾರೆ ಎನ್ನಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ವರದಿ – ದೇವರಾಜ್ ಕೆ ಎನ್ ಕೊರಟಗೆರೆ