Recent Posts

Sunday, January 19, 2025
ದಕ್ಷಿಣ ಕನ್ನಡಮೂಡಬಿದಿರೆಸುದ್ದಿ

ಜೈನ ಧರ್ಮಿಯರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿರುವ ಅಯೂಬ್ ಖಾನ್ ವಿರುದ್ಧ ಭಾರತೀಯ ದಂಡ ಸಂಹಿತೆಯ ಪ್ರಕಾರ ಪ್ರಕರಣ ದಾಖಲಿಸುವಂತೆ ಅಗ್ರಹಿಸಿ ಮೂಡಬಿದರೆ ಜೈನ ಸಮಾಜಭಾಂದವರ ವತಿಯಿಂದ ಮನವಿ – ಕಹಳೆ ನ್ಯೂಸ್

ಮೂಡುಬಿದಿರೆ: ಜೈನ ಧರ್ಮಿಯರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿರುವುದು ಮಾತ್ರವಲ್ಲದೆ ಅಪರಾಧಿಕ ಒಳಸಂಚು ಮಾಡಿ ಭಾರತದ ಸಂವಿಧಾನದ ಧಾರ್ಮಿಕ ಸ್ವಾತಂತ್ರ್ಯಕ್ಕೆ ಅಡ್ಡಿಪಡಿಸುತ್ತಿರುವ ಅಯೂಬ್ ಖಾನ್ ವಿರುದ್ಧ ಭಾರತೀಯ ದಂಡ ಸಂಹಿತೆಯ ಪ್ರಕಾರ ಪ್ರಕರಣ ದಾಖಲಿಸಿ , ವಿಚಾರಣೆಗೆ ಒಳಪಡಿಸಿ ಶೀಘ್ರ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಮೂಡಬಿದರೆ ಜೈನ ಸಮಾಜದವರು ಶ್ರೀ ಯತಿರಾಜ್ ಶೆಟ್ಟಿ ಮೂಲಕ ಮೂಡಬಿದ್ರೆಯ ಠಾಣಾಧಿಕಾರಿ ಶ್ರೀ ಸುದೀಪ್ ಎಂ.ವಿ.ಇವರಲ್ಲಿ ದೂರನ್ನು ದಾಖಲಿಸಿದರು.


ಈ ಸಂದರ್ಭದಲ್ಲಿ ಶ್ವೇತಾ ಜೈನ್, ಮಹೇಂದ್ರವರ್ಮ ಜೈನ್, ದಿನೇಶ್ ಆನಡ್ಕ , ರಶ್ಮಿತಾ ಯುವರಾಜ್, ಯತಿರಾಜ್ ಶೆಟ್ಟಿ , ಸೂರಜ್, ಸುಭಾಸ್ ಜೈನ್, ನಮಿರಾಜ್ ಶೆಟ್ಟಿ, ಮಿತ್ರ ಸೇನಾ ಇಂದ್ರ, ಪದ್ಮಪ್ರಸಾದ್ ಮೊದಲಾದವರು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು