Recent Posts

Sunday, January 19, 2025
ಉಡುಪಿರಾಜಕೀಯರಾಜ್ಯಸುದ್ದಿ

ಹಿಜಾಬ್ ವಿವಾದ ಹೈಕೋರ್ಟ್ ಉತ್ತಮ ಆದೇಶ ನೀಡಿದೆ ; ಶಾಸಕ ರಘುಪತಿ ಭಟ್ – ಕಹಳೆ ನ್ಯೂಸ್

ಉಡುಪಿ, ಫೆ 10 : ಹಿಜಾಬ್ ಮತ್ತು ಕೇಸರಿ ಶಾಲು ವಿಚಾರವಾಗಿದೆ ಹೈಕೋರ್ಟ್ ಉತ್ತಮ ಆದೇಶ ನೀಡಿದ್ದು, ನಾವೆಲ್ಲರೂ ಕೋರ್ಟ್ ಆದೇಶ ವನ್ನು ಪಾಲಿಸೋಣ ಎಂದು ಶಾಸಕ ರಘುಪತಿ ಭಟ್ ಹೇಳಿದ್ದಾರೆ.


ಈ ಕುರಿತು ಮಾತನಾಡಿದ ಅವರು, ಹಿಜಾಬ್ ವಿವಾದದ ಬಗ್ಗೆ ಮುಂದಿನ ವಾರದಿಂದ ಪ್ರತಿದಿನ ವಿಚಾರಣೆ ನಡೆಯುತ್ತದೆ. ಇದೊಂದು ಜವಾಬ್ದಾರಿಯುತ ನಿರ್ಣಯ. ಮಕ್ಕಳ ಭವಿಷ್ಯಕ್ಕೆ ತೊಂದರೆ ಆಗಬಾರದು ಎಂಬ ಉದ್ದೇಶದಿಂದ ಈ ಆದೇಶ ನೀಡಿದೆ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಇನ್ನು ಮುಂದಿನ ಒಂದು ತಿಂಗಳಿನಲ್ಲಿ ಪರೀಕ್ಷೆ ಪ್ರಾರಂಭ ಆಗುತ್ತದೆ. ಹೆಚ್ಚು ರಜೆ ನೀಡಿದರೆ ಮಕ್ಕಳ ಭವಿಷ್ಯ ಕ್ಕೆ ತೊಂದರೆ ಆಗುತ್ತದೆ‌ ಎಂಬ ಹಿನ್ನಲೆ ಈ ಆದೇಶ ನೀಡಿದ್ದು, ಹಿಂದೆ ನಡೆದ ಘಟನೆಗಳನ್ನು ಮರೆತು ಕಾಲೇಜು ಪ್ರಾರಂಭಿಸಲು ಸಹಕರಿಸೋಣ ಎಂದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ನಮ್ಮ ಶೈಕ್ಷಣಿಕ ಭವಿಷ್ಯ ದೃಷ್ಟಿಯಿಂದ ಧಾರ್ಮಿಕ ಆಚರಣೆಗಳನ್ನು ಮನೆಯಲ್ಲಿ ಆಚರಿಸೋಣ. ಈಗಾಗಲೇ ಅಂತರಾಷ್ಟ್ರೀಯ ಮಟ್ಟದಲ್ಲಿ ಈ ವಿಚಾರ ಚರ್ಚೆ ಆಗಿದೆ. ನಾವು ಏನೇ ಇದ್ದರೂ ಒಟ್ತಾಗಿದ್ದೇವೆ ಎಂಬ ಸಂದೇಶ ನೀಡೋಣ . ಸರಕಾರ ನಾಳೆಯಿಂದ ಕ್ಲಾಸ್ ಗಳನ್ನು ಪ್ರಾರಂಭಿಸಲಿ. ಕೇಸರಿ ಶಾಲನ್ನು ಹಾಕಬೇಡಿ. ಹಿಜಾಬ್ ಅನ್ನು ಕ್ಲಾಸ್ ನ ಒಳಗೆ ಹಾಕಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.