Sunday, January 19, 2025
ಕ್ರೈಮ್ಸುದ್ದಿ

ಬೀದಿ ನಾಯಿಯನ್ನೂ ಬಿಡದ 58 ವರ್ಷದ ಕಾಮುಕ ; ಸಿಸಿಟಿವಿಯಲ್ಲಿ ರೆಕಾರ್ಡ್! – ಕಹಳೆ ನ್ಯೂಸ್

ಹೈದರಾಬಾದ್: ಮಹಿಳೆಯರಿಗೆ ಸುರಕ್ಷತೆ ಇಲ್ಲ ಎಂದು ಹೇಳುತ್ತಿರುವಾಗ ಇಲ್ಲೊಬ್ಬ ಕಾಮುಕ ಬೀದಿ ನಾಯಿಯನ್ನೂ ಬಿಡದೆ ಅತ್ಯಾಚಾರ ಮಾಡಿರುವ ಆಘಾತಕಾರಿ ಘಟನೆ ತೆಲಂಗಾಣದ ಹೈದರಾಬಾದ್‍ನಲ್ಲಿ ಬೆಳಕಿಗೆ ಬಂದಿದೆ. ಈ ದೃಶ್ಯಾವಳಿಗಳು ಸಿಸಿಟಿವಿಯಲ್ಲಿಯೂ ಸೆರೆಯಾಗಿದೆ.

58 ವರ್ಷದ ವ್ಯಕ್ತಿಯೊಬ್ಬ ಬೀದಿ ನಾಯಿಯ ಮೇಲೆ ಅತ್ಯಾಚಾರವೆಸಗಿದ್ದು, ಈ ಹೇಯ ಕೃತ್ಯ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದೆ. ಪರಿಣಾಮ ವೀಡಿಯೋ ನೋಡಿದ ಪ್ರಾಣಿ ಪ್ರೇಮಿಯೊಬ್ಬ ಆರೋಪಿ ವಿರುದ್ಧ ದೂರು ಕೊಟ್ಟಿದ್ದಾರೆ. ಈ ಘಟನೆ ಹೈದರಾಬಾದ್‍ನ ನಲ್ಲಕುಂಟಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಸುದ್ದಿ ಬಹಿರಂಗವಾದಾಗಿನಿಂದ ನಲ್ಲಕುಂಟಾದಲ್ಲಿ ಸಂಚಲನ ಮೂಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

RAPE CASE

ಜಾಹೀರಾತು
ಜಾಹೀರಾತು
ಜಾಹೀರಾತು

ಪೊಲೀಸರಿಗೆ ದೂರು ನೀಡಿದ ಪ್ರಾಣಿ ಪ್ರೇಮಿ, ಈ ರೀತಿಯ ವ್ಯಕ್ತಿಗಳು ಸಮಾಜದಲ್ಲಿ ಇದ್ರೆ, ಮಹಿಳೆಯರಿಗೂ ಸುರಕ್ಷಿತವಲ್ಲ. ಈ ರೀತಿ ಹೇಯ ಕೃತ್ಯ ಮಾಡುವವರು ಜೈಲಿನಲ್ಲಿರಬೇಕು. ಇಂಥವರು ಹೊರಗೆ ಉಳಿಯುವುದು ಅಪಾಯಕಾರಿ ಎಂದು ತಿಳಿಸಿದ್ದು, ಆರೋಪಿಯನ್ನ ಅರೆಸ್ಟ್ ಮಾಡುವಂತೆ ಪೊಲೀಸರಿಗೆ ಒತ್ತಡ ಹೇರಲಾಗುತ್ತಿದೆ.

ತನಿಖೆಯಲ್ಲಿ ತಿಳಿದಿದ್ದೇನು?
ಆರೋಪಿ ತನ್ನ ಪತ್ನಿಯೊಂದಿಗೆ ನಲ್ಲಕುಂಟಾ ಸ್ಥಳದಲ್ಲಿಯೇ ವಾಸವಾಗಿದ್ದಾನೆ. ಆರೋಗ್ಯ ಸಮಸ್ಯೆಯಿದ್ದ ಹಿನ್ನೆಲೆ ಆತ ಮನೆಯಲ್ಲಿಯೇ ವಾಸಿಸುತ್ತಿದ್ದನು. ಆದರೆ ಆತನ ಪತ್ನಿ ಕೆಲಸ ಮಾಡುತ್ತಿದ್ದಳು. ಈ ವೇಳೆ ಆತ ಬೀದಿ ನಾಯಿಯೊಂದಿಗೆ ಅಸ್ವಾಭಾವಿಕ ಸಂಬಂಧ ಹೊಂದಿರುವುದು ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದೆ. ಈ ಘಟನೆ ಮಂಗಳವಾರ ನಡೆದಿದೆ ಎಂದು ಪೊಲೀಸರ ತನಿಖೆ ಮೂಲಕ ತಿಳಿದುಬಂದಿದೆ.