Sunday, January 19, 2025
ಕಾಸರಗೋಡುಕ್ರೈಮ್ಸುದ್ದಿ

ಶವವಾಗಿ ಬಾವಿಯಲ್ಲಿ ಪತ್ತೆಯಾದ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ – ಕಹಳೆ ನ್ಯೂಸ್

ತಿರುವನಂತಪುರಂ: ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯೊಬ್ಬಳ ಶವ ಬಾವಿಯಲ್ಲಿ ಪತ್ತೆಯಾಗಿದೆ.

ಮೃತಳನ್ನು ಶಾಂತವನ(19) ಎಂದು ಗುರುತಿಸಲಾಗಿದೆ. ಈಕೆ ಇರಿಂಜಲಕುಡ ನಿವಾಸಿಯಾಗಿದ್ದು, ಕೊಡುಂಗಲ್ಲೂರಿನ ಕೆಕೆಟಿಎಂ ಕಾಲೇಜು ವಿದ್ಯಾರ್ಥಿನಿ.

ಜಾಹೀರಾತು
ಜಾಹೀರಾತು
ಜಾಹೀರಾತು

ಜ್ಯೋತಿ ಪ್ರಕಾಶ್ ಮತ್ತು ರಜಿತಾ ದಂಪತಿ ಪುತ್ರಿಯಾಗಿರುವ ಈಕೆ ಗುರುವಾರ 11.30ರ ಸುಮಾರಿಗೆ ಬಾವಿಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಘಟನೆ ನಡೆದಾಗ ಶಾಂತವನ ಹೆತ್ತವರು ಮನೆಯಲ್ಲಿ ಇರಲಿಲ್ಲ. ಸ್ಥಳೀಯರು ಬಾವಿಯಲ್ಲಿ ಶವ ನೋಡಿ ಪೊಲೀಸರಿಗೆ ಮಾಹಿತಿ ನೀಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸ್ಥಳಕ್ಕೆ ದೌಡಾಯಿಸಿದ ಪೊಳಿಸರು ಬಾವಿಯಿಂದ ಶಾಂತವನ ಮೃತದೇಹವನ್ನು ಮೇಲಕ್ಕೆತ್ತಿದ್ದಾರೆ. ನಂತರ ಮರಣೋತ್ತರ ಪರೀಕ್ಷೆಗೆ ತರರಿಸ್ಸೂರ್ ಮೆಡಿಕಲ್ ಕಾಲೇಜಿಗೆ ರವಾನಿಸಿದ್ದಾರೆ.

ಘಟನೆಗೆ ಕಾರಣವೇನೆಂದು ತಿಳಿದುಬಂದಿಲ್ಲ. ಈ ಸಂಬಂಧ ಕಟ್ಟುರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.