ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ (ರಿ) ವಿಟ್ಲ ವತಿಯಿಂದ ಡಿಜಿಟಲ್ ಸೇವಾ ಕೇಂದ್ರ ಉದ್ಘಾಟನೆ – ಕಹಳೆ ನ್ಯೂಸ್
ಬಂಟ್ವಾಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ (ರಿ) ವಿಟ್ಲ ವತಿಯಿಂದ ಕೇಂದ್ರ ಸರ್ಕಾರದ ಯೋಜನೆಯಾದ ಡಿಜಿಟಲ್ ಸೇವಾ ಕೇಂದ್ರವನ್ನು ಕಲ್ಲಡ್ಕ ವಲಯದ ಕಛೇರಿಯಲ್ಲಿ ಕೆ.ಎಸ್. ಬಿಲ್ಡಿಂಗ್ ನ ಮಾಲೀಕರು ಹಾಗೂ ಗೋಳ್ತಮಜಲು ಗ್ರಾಮ ಪಂಚಾಯತ್ ನ ಸದಸ್ಯರಾದ ಶ್ರೀಯುತ ಮುಸ್ತಫಾ ರವರು ಉದ್ಘಾಟನೆ ಮಾಡಿದರು.
ಬಾಳ್ತಿಲ ಗ್ರಾಮ ಪಂಚಾಯತ್ ನ ಅಧ್ಯಕ್ಷರಾದ ಶ್ರೀಮತಿ ಹಿರಣ್ಮಯಿರವರು ದೀಪ ಬೆಳಗಿಸಿ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಕೃಷಿ ಅಧಿಕಾರಿಯಾದ ಶ್ರೀಯುತ ಚಿದಾನಂದ ರವರು ಡಿಜಿಟಲ್ ಸೇವಾ ಕೇಂದ್ರದ ಮೂಲಕ ಅಸಂಘಟಿತ ವಲಯದ ಕಾರ್ಮಿಕರಿಗೆ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಕಲ್ಲಡ್ಕ ವಲಯ ಮೇಲ್ವಿಚಾರಕಿ ಶ್ರೀಮತಿ ಸುಗುಣ ಶೆಟ್ಟಿ, ಕಲ್ಲಡ್ಕ ವಲಯ ಅಧ್ಯಕ್ಷ ಶ್ರೀ ಈಶ್ವರ ನಾಯ್ಕ, ಕಲ್ಲಡ್ಕ ವಲಯಕ್ಕೆ ಸಂಬಂಧಿಸಿದ 9 ಒಕ್ಕೂಟಗಳ ಅಧ್ಯಕ್ಷರುಗಳಾದ ಶ್ರೀಮತಿ ತುಳಸಿ, ಶ್ರೀ ಸೀತಾರಾಮ, ಶ್ರೀಮತಿ ಮಮತಾ ಶೆಟ್ಟಿ, ಶ್ರೀ ದಯಾನಂದ ಗೌಡ, ಶ್ರೀ ಹರೀಶ್.ವಿ.ಮಾಡ, ಶ್ರೀಮತಿ ಸೀತಾ, ಶ್ರೀಮತಿ ಶಾಂಭವಿ, ಶ್ರೀಮತಿ ಉಮಾವತಿ, ಹಾಗೂ ಒಕ್ಕೂಟಗಳಸೇವಾ ಪ್ರತಿನಿಧಿಗಳಾದ ಸೌಮ್ಯ, ಸುಕನ್ಯಾ, ಯಶೋಧ, ಲೀಲಾವತಿ, ರೇವತಿ, ವಿದ್ಯಾ ಉಪಸ್ಥಿತರಿದ್ದರು.
ಗೋಳ್ತಮಜಲು ಸಿ ಒಕ್ಕೂಟದ ಸೇವಾಪ್ರತಿನಿಧಿಯಾದ ಗಿರಿಜಾರವರು ಸ್ವಾಗತಿಸಿದರು. ಗೋಳ್ತಮಜಲು ಎ ಒಕ್ಕೂಟದ ಸೇವಾ ಪ್ರತಿನಿಧಿಯಾದ ಕೌಶಿತರವರು ವಂದಿಸಿ, ಕೆಲಿಂಜ ಒಕ್ಕೂಟದ ಸೇವಾ ಪ್ರತಿನಿಧಿಯಾದ ರೇಣುಕಾ ಕಾರ್ಯಕ್ರಮ ನಿರೂಪಿಸಿದರು.