Recent Posts

Sunday, January 19, 2025
ಕಡಬದಕ್ಷಿಣ ಕನ್ನಡಸುದ್ದಿ

ಕಡಬದ ಕೋಡಿಂಬಾಳ ಕೊಠಾರಿಯಲ್ಲಿ ಆಸೀಡ್ ದಾಳಿಗೆ ಒಳಗಾದ ಮಹಿಳೆಯನ್ನ ಮತಾಂತರಕ್ಕೆ ಯತ್ನ – ಮನೆಗೆ ದಾಳಿ ನಡೆಸಿ ಅನ್ಯಕೋಮಿನ ವ್ಯಕ್ತಿಯನ್ನ ಪೊಲೀಸರಿಗೆ ಒಪ್ಪಿಸಿದ ಸಂಘಟನೆಯ ಕಾರ್ಯಕರ್ತರು –ಕಹಳೆ ನ್ಯೂಸ್

ಕಡಬ ಇಲ್ಲಿನ ಕೋಡಿಂಬಾಳದ ಕೊಠಾರಿ ಎಂಬಲ್ಲಿ ಹಿಂದೂ ಮಹಿಳೆಯ ಮನೆಯಲ್ಲಿ ಅನ್ಯಕೋಮಿನ ವ್ಯಕ್ತಿಯೊಬ್ಬ ಪತ್ತೆಯಾಗಿದ್ದು, ಈತನನ್ನು ಸ್ಥಳೀಯ ಹಿಂದೂ ಸಂಘಟನೆಯ ಕಾರ್ಯಕರ್ತರು ಪತ್ತೆ ಹಚ್ಚಿ ಪೋಲಿಸ್ ವಶಕ್ಕೆ ನೀಡಿದ ಘಟನೆ ಫೆ. 11 ರಂದು ಮುಂಜಾನೆ ನಡೆದಿದೆ.

ವರ್ಷದ ಹಿಂದೆ ಜಿಲ್ಲೆಯನ್ನೆ ತಲ್ಲನಗೊಳಿಸಿದ ವಿಧವೆ ಮಹಿಳೆ ಹಾಗೂ ಆಕೆಯ ಎರಡು ವರ್ಷದ ಮಗುವಿನ ಮೇಲೆ ಮಹಿಳೆಯ ಪತಿಯ ಅಣ್ಣ ಆಸೀಡ್ ಎರಚಿದ ಪ್ರಕರಣ ನಮಗೆಲ್ಲ ತಿಳಿಸದೆ ಇದೇ. ಈ ಮಹಿಳೆಯ ಮನೆಯಲ್ಲೆ ಅನ್ಯ ಕೋಮಿನ ವ್ಯಕ್ತಿ ಪತ್ತೆಯಾಗಿರುವುದು. ಇದೇ ಮಹಿಳೆಯನ್ನು ಮತಾಂತರ ಮಾಡುವ ಉದ್ದೇಶದಿಂದ ಹಲವಾರು ಸಮಯಗಳಿಂದ ಪ್ರಯತ್ನಗಳು ಈ ವ್ಯಕ್ತಿಯಿಂದ ನಡೆದಿದೆ ಎನ್ನಲಾಗಿದ್ದು, ಇದಕ್ಕೆ ಪೂರಕ ಸಾಕ್ಷಾಧಾರಗಳು ದೊರೆತಿರುವುದರಿಂದ ಮಹಿಳೆಯ ಮನೆಗೆ ಕಡಬ ಸಂಘಟನೆಯ ಕಾರ್ಯಕರ್ತರು ಭೇಟಿ ಮಾಡಿ ಮನವೊಲಿಸಿದ್ದರು, ಆದರೆ ಈ ವ್ಯಕ್ತಿಯೂ ಹಲವಾರು ಸಮಯದಿಂದ ಮಹಿಳೆಯ ಮನೆಗೆ ಬರುತ್ತಿರುವುದು ಸಂಘಟನೆಯವರ ಕೆಂಗಣ್ಣಿಗೆ ಗುರಿಯಾಗಿತ್ತು. ಈ ಹಿನ್ನೆಲೆಯಲ್ಲಿ ಫೆ.11 ರಂದು ಮುಂಜಾನೆ ಆ ವ್ಯಕ್ತಿಯನ್ನು ಪೋಲಿಸ್ ವಶಕ್ಕೆ ನೀಡಿದ್ದು ಸದ್ಯ ಆ ವ್ಯಕ್ತಿ ಪೋಲಿಸ್ ವಶವಾಗಿದ್ದಾನೆ.

ಜಾಹೀರಾತು
ಜಾಹೀರಾತು
ಜಾಹೀರಾತು

ವರ್ಷದ ಹಿಂದೆ ಜಿಲ್ಲೆಯನ್ನೆ ತಲ್ಲನಗೊಳಿಸಿದ್ದ ಆಸೀಡ್ ದಾಳಿಗೊಳಗಾದ ಸಂತ್ರಸ್ಥೆಯ ಮಹಿಳೆಯನ್ನೆ ಮತಾಂತರಗೊಳಿಸಲು ಯತ್ನಿಸುತ್ತಿರುವ ಆರೋಪವಾಗಿದೆ. ಒಂದು ವರ್ಷದ ಹಿಂದೆ ತನ್ನ ಬಾವನಿಂದ ಜಾಗದ ತಕರಾರು,ಮಾನಭಂಗ ಯತ್ನ ವಿಚಾರವೊಂದಕ್ಕೆ ಸಂಬಂಧಿಸಿ ಆಸೀಡ್ ದಾಳಿಗೊಳಗಾಗಿದ್ದರು, ಬಳಿಕ ದಿನಗಳಲ್ಲಿ ಆರೋಪಿ ಮಹಿಳೆಯ ಬಾವ ಪೋಲಿಸ್ ವಶವಾಗಿದ್ದು ಬಳಿಕ ಜಾಮೀನು ನೀಡಲಾಗಿತ್ತು, ಈ ಜಾಮೀನು ನೀಡಿರುವುದನ್ನು ಪ್ರಶ್ನಿಸಿ ಮಹಿಳೆ ಹೈಕೋರ್ಟ್‍ಗೆ ಜಾಮೀನು ರದ್ದುಗೊಳಿಸುವಂತೆ ಅರ್ಜಿ ನೀಡಿದ್ದರು, ಇದನ್ನು ಪುರಸ್ಕರಿಸಿದ ನ್ಯಾಯಾಲಯ ಕೆಳ ನ್ಯಾಯಾಲಯ ನೀಡಿದ ಜಾಮೀನನ್ನು ರದ್ದುಗೊಳಿಸಿರುವುದನ್ನು, ಹಾಗೂ ಆಸೀಡ್ ದಾಳಿಯ ಪ್ರಕರಣದಲ್ಲಿ ಕರ್ತವ್ಯ ಲೋಪ ಆರೋಪದಲ್ಲಿ ಕಡಬ ಠಾಣೆಯ ಎ.ಎಸ್.ಐ. ಅಮಾನತುಗೊಂಡಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು