ದೇಶದಲ್ಲಿ ಹಿಜಾಬ್ ವಿವಾದ ದಿನೇ ದಿನೇ ಹೊತ್ತಿ ಉರಿಯುತ್ತಿದ್ದೆ. ನಿನ್ನೆ ಕರ್ನಾಟಕ ಹೈಕೋರ್ಟ್ ಮಧ್ಯಂತರ ಆದೇಶ ಹೊರಡಿಸಿದ ಮೇಲೆ ಈ ವಿವಾದ ಬೂದಿ ಮುಚ್ಚಿದ ಕೆಂಡದ0ತಾಗಿದೆ. ಈ ನಡುವೆ ಮದ್ರಾಸ್ ಹೈಕೋರ್ಟ್ನ ಮುಖ್ಯ ನ್ಯಾಯಾಧೀಶ ಎಂ ಎನ್ ಭಂಡಾರಿ ಹಾಗೂ ಡಿ ಭರತ ಚಕ್ರವರ್ತಿ ಇದ್ದ ಪೀಠವು ರಾಜ್ಯಾದ್ಯಂತ ಹಬ್ಬುತ್ತಿರುವ ಹಿಜಾಬ್- ಕೇಸರಿ ಶಾಲು ವಿವಾದಕ್ಕೆ ಸಂಬ0ಧಪಟ್ಟ0ತೆ ಮಹತ್ವದ ಪ್ರಶ್ನೆಯನ್ನು ಕೇಳಿದೆ.
‘ರಾಷ್ಟç ಹಾಗೂ ಧರ್ಮಗಳಲ್ಲಿ ಯಾವುದಕ್ಕೆ ಮೊದಲ ಆದ್ಯತೆ…? ಕೆಲವರು ಹಿಜಾಬ್ ಪರವಾದರೆ ಕೆಲವರು ಟೋಪಿ ಪರ ಮತ್ತು ಕೆಲವು ಇತರೆ ವಸ್ತುಗಳ ಪರ. ಇದು ಒಂದು ದೇಶವೋ ಅಥವಾ ಧರ್ಮಾಧರಿತವಾಗಿ ವಿಭಜನೆಯಾಗಿಬಿಟ್ಟಿದೆಯೋ. ಇದು ಅಚ್ಚರಿ ಮೂಡಿಸುವ ವಿಚಾರ ಎಂದಿದೆ.
ರಾಜ್ಯಾದ್ಯಂತ ದೇವಸ್ಥಾನಗಳಿಗೆ ಹಿಂದೂಯೇತರರಿಗೆ ಪ್ರವೇಶ ನಿರಾಕರಿಸಿ, ದೇವಾಲಯಗಳ ಆವರಣಗಳಲ್ಲಿ ವ್ಯಾಪಾರಿ ಚಟುವಟಿಕೆಗಳಿಗೆ ನಿಷೇಧ ಹೇರಿ, ದೇಗುಲಗಳ ಪ್ರದೇಶಗಳಲ್ಲಿ ವಸ್ತçಸಂಹಿತೆಯ ಕಟ್ಟುನಿಟ್ಟಿನ ಅನುಷ್ಠಾನಕ್ಕೆ ಆದೇಶ ನೀಡುವಂತೆ ಕೋರಿ ತಿರುಚ್ಚಿರಾಪ್ಪಳ್ಳಿ ಜಿಲ್ಲೆಯ ಶ್ರೀರಂಗ0ನ ರಂಗರಾಜನ್ ನರಸಿಂಹನ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಆಲಿಕೆ ವೇಳೆ ಮದ್ರಾಸ್ ಹೈಕೋರ್ಟ್ ಈ ವಿಚಾರ ಉಲ್ಲೇಖ ಮಾಡಿದೆ.