Recent Posts

Monday, January 20, 2025
ಕ್ರೈಮ್ಸುದ್ದಿ

ಪ್ರಿಯಕರನ ಜೊತೆ ಬೆತ್ತಲಾದ ಮೂರು ಮಕ್ಕಳ ತಾಯಿ ನಸ್ರೀನ್ ; ವೈರಲಾದ ವೀಡಿಯೋ ನೋಡಿ ಪತಿ ಯೂನುಸ್ ಕಂಗಾಲು – ಕಹಳೆ ನ್ಯೂಸ್

ಥಾಣೆ : ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನೇ ಬರ್ಬರವಾಗಿ ಕೊಲೆಗೈದು ಬಳಿ ಪೊಲೀಸರಿಗೆ ಶರಣಾದ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಮೃತ ಪತ್ನಿಯನ್ನು ನಸ್ರೀನ್ ಎಂದು ಗುರುತಿಸಲಾಗಿದೆ. ಈಕೆಯನ್ನು ಪತಿ ಯೂನುಸ್(50) ಕೊಲೆ ಮಾಡಿದ್ದಾನೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಬಳಿಕ ನೇರವಾಗಿ ಠಾಣೆಗೆ ತೆರಳಿ ಪೊಲೀಸರಿಗೆ ಶರಣಾಗಿದ್ದಾನೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕೊರೊನಾ ಲಾಕ್‍ಡೌನ್ ಹಿನ್ನೆಲೆಯಲ್ಲಿ ಪತಿ ಯೂನುಸ್ ಕೆಲಸ ಕಳೆದುಕೊಂಡಿದ್ದ. ಹೀಗಾಗಿ ನಸ್ರೀನ್ ತನ್ನ ಮೂವರು ಮಕ್ಕಳೊಂದಿಗೆ ಭೀವಾಂಡಿಯಲ್ಲಿರುವ ಸಹೋದರಿ ಮನೆ ಸೇರಿದ್ದಳು. ಈ ಮಧ್ಯೆ ಆಕೆ ಪ್ರಿಯತಮ ಸದ್ದಾಂ ಜೊತೆ ಇರುವ ಬೆತ್ತಲೆ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಲು ಆರಂಭವಾಗಿದೆ. ಈ ವೀಡಿಯೋವನ್ನು ಯೂನುಸ್ ನೋಡಿದ್ದಾನೆ.

ಪತ್ನಿಯ ವೀಡಿಯೋ ನೋಡಿ ರೊಚ್ಚಿಗೆದ್ದ ಯೂನುಸ್, ನೇರವಾಗಿ ಪತ್ನಿಯನ್ನು ಭೇಟಿಯಾಗಲು ತೆರಳಿದ್ದಾನೆ. ಹೀಗೆ ಹೋದವನು ಆಕೆಯ ಅಕ್ಕನ ಮನೆಯಲ್ಲಿದ್ದ ಪತ್ನಿಯನ್ನು ಚಾಕುವಿನಿಂದ ತಿವಿದು ಹತ್ಯೆ ಮಾಡಿದ್ದಾನೆ. ಪತ್ನಿಯನ್ನು ಕೊಲೆ ಮಾಡಿದ ಬಳಿಕ ಯೂನುಸ್, ಶಾಂತಿನಗರ ಠಾಣೆಗೆ ತೆರಳಿ ಪೊಲೀಸರಿಗೆ ಶರಣಾಗಿದ್ದಾನೆ.

ಇತ್ತ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸಿದ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಯೂನುಸ್, ನನ್ನ ಪತ್ನಿ ಬೇರೊಬ್ಬನ ಜೊತೆ ಮಲಗಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಹಿನ್ನೆಲೆಯಲ್ಲಿ ನನಗೆ ಭಾರೀ ಅವಮಾನ ಆಗಿದೆ. ನನಗೆ ಮುಜುಗರ ತಂದ ಪತ್ನಿ ಜೀವಂತವಾಗಿ ಉಳಿಯಬಾರದು ಎಂದು ಈ ಕೃತ್ಯ ಎಸಗಿರುವುದಾಗಿ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ.