Monday, January 20, 2025
ಸುದ್ದಿ

ಬ್ರೈನ್ ಡೆಡ್, ಕುಸಿದು ಬಿದ್ದ ಮದುಮಗಳು..!! ದಾಂಪತ್ಯ ಜೀವನಕ್ಕೆ ಕಾಲಿರಿಸುವಾಗಲೇ ಅಂತ್ಯಕಂಡ ಬದುಕು…! – ಕಹಳೆ ನ್ಯೂಸ್

ಕೋಲಾರ: ಆರತಕ್ಷತೆ ಸಂಭ್ರಮದಲ್ಲಿದ್ದ ಮದುಮಗಳ ಬದುಕು ದಾಂಪತ್ಯ ಜೀವನಕ್ಕೆ ಕಾಲಿಡುವ ಮುನ್ನವೇ ದುರಂತ ಅಂತ್ಯ ಕಂಡಿದೆ.

ಮದುವೆಯ ಆರತಕ್ಷತೆ ವೇಳೆ ಇದ್ದಕ್ಕಿದ್ದಂತೆ ಮದುಮಗಳು ಅಸ್ವಸ್ಥಳಾಗಿ ಬಿದ್ದಿದ್ದು, ತಕ್ಷಣ ಆಕೆಯನ್ನು ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈಕೆಯನ್ನು ಪರೀಕ್ಷಿಸಿದ ವೈದ್ಯರು ಮೆದುಳು ನಿಷ್ಕ್ರಿಯಗೊಂಡಿದೆ ಎಂದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ವಿಷಯ ತಿಳಿದ ಬಳಿಕ ಕುಟುಂಬದ ರೋಧನ ಮುಗಿಲುಮುಟ್ಟಿತ್ತು. ಪೋಷಕರನ್ನು ಸಮಾಧಾನಿಸಿದ ವೈದ್ಯರು, ಚೈತ್ರ ಸಾವನ್ನಪ್ಪಿದರೂ ಬೇರೆಯವರ ಬಾಳಿಗೆ ಬೆಳಕಾಗುವಂತೆ ಅಂಗಾಂಗ ದಾನ ಮಾಡಲು ಮನವೊಲಿಸಿದ್ದಾರೆ. ವೈದ್ಯರ ಮಾತಿಗೆ ಸಮ್ಮತಿ ಸೂಚಿಸಿದ ಪೋಷಕರು, ಚೈತ್ರಳ ಅಂಗಾಗ ದಾನ ಮಾಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಕುರಿತು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಟ್ವಿಟ್ ಮಾಡಿದ್ದು, “26 ವರ್ಷದ ಚೈತ್ರಾಗೆ ಇದು ದುರಂತದ ದಿನ. ಚೈತ್ರಾ ಬಾಳಲ್ಲಿ ವಿಧಿ ಬೇರೆ ಪ್ಲಾನ್ ಮಾಡಿರುವಂತೆ ಗೋಚರಿಸುತ್ತಿದೆ” ಎಂದು ಹೇಳಿದ್ದಾರೆ.