Monday, January 20, 2025
ದಕ್ಷಿಣ ಕನ್ನಡಪುತ್ತೂರುಸುದ್ದಿ

ವಿವೇಕಾನಂದ ಕನ್ನಡ ಶಾಲೆಯಲ್ಲಿ ಸೂರ್ಯ ನಮಸ್ಕಾರ ಅಭ್ಯಾಸ ಸಪ್ತಾಹ ಸಮಾರೋಪ– ಕಹಳೆ ನ್ಯೂಸ್

ಪುತ್ತೂರು: ವಿವೇಕಾನಂದ ಕನ್ನಡ ಶಾಲೆ ತೆಂಕಿಲದಲ್ಲಿ ಸೂರ್ಯ ನಮಸ್ಕಾರ ಅಭ್ಯಾಸ ಸಪ್ತಾಹದ ಸಮಾರೋಪ ಕಾರ್ಯಕ್ರಮ ನಡೆಯಿತು. ಶಾಲಾ ದೈಹಿಕ ಹಾಗೂ ಯೋಗಾಭ್ಯಾಸ ಶಿಕ್ಷಕರಾದ ದಾಮೋದರ್, ಹರಿಣಾಕ್ಷಿ ಹಾಗೂ ಯೋಗಾಭ್ಯಾಸ ಶಿಕ್ಷಕರಾದ ರಂಗಪ್ಪ, ಗಣೇಶ್, ವೀಣಾಸರಸ್ವತಿ ಇವರ ಸಂಯೋಜನೆಯಲ್ಲಿ ಶಾಲಾ ಏಕಲವ್ಯ ಕ್ರೀಡಾ ಪ್ರಕಲ್ಪದಲ್ಲಿ ಆರಂಭಗೊಂಡ ಸೂರ್ಯ ನಮಸ್ಕಾರ ಅಭ್ಯಾಸ ಸಪ್ತಾಹವು ಸಮಾರೋಪದೊಂದಿಗೆ ಸಂಪನ್ನಗೊಂಡಿತು.

ಕಾರ್ಯಕ್ರಮದಲ್ಲಿ 1ನೇ ತರಗತಿಯಿಂದ 10ನೇ ತರಗತಿಯ ಮಕ್ಕಳು, ಶಿಕ್ಷಕರು ಸೂರ್ಯ ನಮಸ್ಕಾರ ಅಭ್ಯಾಸ ಸಪ್ತಾಹದಲ್ಲಿ ಭಾಗವಹಿಸಿದ್ದು, ಸಮಾರೋಪದಂದು ಶಾಲಾ ಕ್ರೀಡಾಂಗಣದಲ್ಲಿ ಸಾಮೂಹಿಕ ಸೂರ್ಯ ನಮಸ್ಕಾರ ಮಾಡಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ಸೂರ್ಯ ನಮಸ್ಕಾರದ ಪ್ರಾಶಸ್ತ್ಯ, ಭಾರತೀಯರು ಪುರಾತನ ಕಾಲದಿಂದಲೂ ಸೂರ್ಯನನ್ನು ಪೂಜಿಸುತ್ತಾ ಬಂದಿರುವ ಬಗ್ಗೆ ಹಾಗೂ ಸೂರ್ಯನಿಗೆ ಸಂಬಂಧಿಸಿದ ಬೀಜ ಮಂತ್ರಗಳ ಮಹತ್ವವನ್ನು ಹೇಳಲಾಯಿತು. ಶಾಲಾ ಅಧ್ಯಕ್ಷರಾದ ರಮೇಶ್ಚಂದ್ರ ಕಾವು ಇವರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಲಾ ಸಂಚಾಲಕರಾದ ವಸಂತ ಸುವರ್ಣ ರಥಸಪ್ತಮಿಯಂದು ನಮ್ಮ ಮೈಸೋಕುವ ಬಿಸಿಲಿಗೆ ವಿಶೇಷ ಶಕ್ತಿಯಿದ್ದು ಇದು ಶಾರೀರಿಕ ಸುಸ್ಥಿತಿಗೆ ಸಹಕಾರಿಯಾಗಿದೆ. ಆದ್ದರಿಂದ ಈ ದಿನದ ಸೂರ್ಯ ನಮಸ್ಕಾರಕ್ಕೆ ವಿಶೇಷ ಪ್ರಾಶಸ್ತ್ಯವಿರುತ್ತದೆ ಎಂದು ಹೇಳಿದರು.