Saturday, November 23, 2024
ಸುದ್ದಿ

Breaking News : ಗೋಕರ್ಣ 33 ಉಪಾದಿವಂತ ಕುಟುಂಬದವರಿಂದ ಪುಂಡಾಟಿಕೆ ; ಗೋಕರ್ಣ ಕ್ಷೇತ್ರದ ನಿಯಮ ಉಲ್ಲಂಘಿಸಿ, ಶಾಂತಿ ಬಂಗಕ್ಕೆ ಯತ್ನ, ವ್ಯಾಪಕ ಖಂಡನೆ – ಕಹಳೆ ನ್ಯೂಸ್

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ ಕ್ಷೇತ್ರದಲ್ಲಿ ಇದೀಗ ದೇವಸ್ಥಾನದ ಪೂಜಾ ಕಾರ್ಯಕ್ಕೆ ವಿವಾದ ಸೃಷ್ಟಿಯಾಗಿದೆ. ದೇವಸ್ಥಾನದಲ್ಲಿ ಅನುವಂಶೀಯವಾಗಿ ಪೂಜಾ ಕಾರ್ಯ ಮಾಡಿಕೊಂಡು ಬಂದಿರುವ 33 ಅರ್ಚಕರಿಗೆ ಪೂಜೆಗೆ ಅವಕಾಶ ಕೊಡಬೇಕೆಂದು ನ್ಯಾಯಾಲಯ ಆದೇಶವನ್ನ ನೀಡಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ಆದರೆ, ದೇವಾಲಯದ ನಿಯಮಾವಳಿಗಳ ಅನುಸಾರ ಯಾವ ಅರ್ಚಕರು ದೇವಾಲಯದಲ್ಲಿ ತಮ್ಮ ಹೆಸರನ್ನು ನೋಂದಾಯಿಸುತ್ತಾರೋ ಅವರಿಗೆ ಮಾತ್ರ ಹೊಗಿನಿಂದ ಭಕ್ತರನ್ನು ಕರೆತಂದು ಪೂಜೆ ನಡೆಸಬಹುದು ಎಂದು ಕೋರ್ಟ್ ಹೇಳಿತ್ತು. ಆದರೇ, ಈ ನಿಯಮವನ್ನು ಗಾಳಿಗೆ ತೂರಿ ಕ್ಷೇತ್ರದ ಪಾವಿತ್ರೆತೆಯನ್ನು ಹಾಳು ಮಾಡಲು ಉಪಾದಿವಂತರು ಹೊರಟ್ಟಿದ್ದಾರೆ. ನ್ಯಾಯಾಲಯದ ಮತ್ತು ದೇವಾಲಯದ ನಿಯಮ ಉಲ್ಲಂಘಿಸಿ, ಹೊಗಿನಿಂದ ಬಂದ ಭಕ್ತರನ್ನು ಕರೆದುಕೊಂಡು ಯಾವುದೇ ನೋವ ರಾವಣ ಮಾಡದೇ ಪೂಜೆ ಮಾಡಲು ಉಪಾದಿವಂತ ಕುಟುಂಬದ ಅರ್ಚಕ ಮಧುಕರ್ ಸೂರಿ ಮುಂದಾಗಿದ್ದಾರೆ. ಇದಕ್ಕೆ ಆಡಳಿತ ಮಂಡಳಿ ಕಾನೂನು ಬದ್ಧವಾಗಿ ಆಕ್ಷೇಪ ವ್ಯಕ್ತಪಡಿಸಿದೆ, ಆದರೆ, ಈ ಸಂದರ್ಭದಲ್ಲಿ ಮಧುಕರ್ ಸೂರಿ ಮತ್ತು ಜೊತೆಗಿದ್ದವರು ದುರ್ವರ್ತನೆ ತೋರಿ, ಪುಂಡಾಟಿಕೆ ನಡೆಸಲು ಮುಂದಾಗಿದ್ದಾರೆ. ತಮ್ಮೂಲಕ ಗೋಕರ್ಣ ಕ್ಷೇತ್ರಕ್ಕೆ ಅಪಚಾರ ಮಾಡುಲು ಈ ನೀಚರು ಹೊರಟ್ಟಿದ್ದಾರೆ ಎಂಬ ಭಕ್ತರು ಆರೋಪಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕರ್ನಾಟಕ ರಾಜ್ಯದ ಐಎಸ್ ಓ ದರ್ಜೆಯ ದೇವಾಲಯ ಎಂಬ ಪ್ರಖ್ಯಾತಿಗೆ ಪಾತ್ರವಾಗಿ, ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮಿಗಳ ಸಮರ್ಥ ಮಾರ್ಗದಶನದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿಯಿರುವ ಕ್ಷೇತ್ರದ ಮತ್ತು ಮಠದ ಯಶಸ್ಸನ್ನು ಸಹಿಸದೇ ಈ ಕೃತ್ಯ ಮಾಡುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ನೋಂದಣಿ ಕಡ್ಡಾಯ:
ಈ ಬಗ್ಗೆ ದೇವಸ್ಥಾನದ ಆಡಳಿತ ಮಂಡಳಿಯವರ ಬಳಿ ಕೇಳಿದರೆ ದೇವಸ್ಥಾನದಲ್ಲಿನ ಪೂಜಾ ಕಾರ್ಯ ನಿಯಮಬದ್ಧವಾಗಿ ನಡೆಯಲು ಎಲ್ಲರು ನೊಂದಣಿ ಮಾಡಿಸಿಕೊಳ್ಳಲೇಬೇಕು ಅನ್ನುವ ನಿಯಮ ಮಾಡಲಾಗಿದೆ. ಅದರಂತೆ ಸುಮಾರು 500 ಕುಟುಂಬವದರು ನೋಂದಣಿ ಮಾಡಿಕೊಂಡು ಪೂಜಾ ಕಾರ್ಯ ಮಾಡಿಸುತ್ತಿದ್ದಾರೆ. ಇನ್ನು 33 ಕುಟುಂಬದವರು ನೋಂದಣಿ ಮಾಡಿಕೊಂಡು ಪೂಜೆ ಮಾಡಲು ಪ್ರಾರಂಭಿಸಲಿ. ಅದಕ್ಕೆ ನಮ್ಮ ಅಭ್ಯಂತರವಿಲ್ಲ. ನೋಂದಣಿ ಮಾಡಿಸಿಕೊಳ್ಳದೇ ಪೂಜಾ ಕಾರ್ಯ ಮಾಡಲು ಬಿಡುವುದಿಲ್ಲ ಎಂದು ದೇವಸ್ಥಾನದ ಆಡಳಿತ ಮಂಡಳಿ ಸದಸ್ಯ ಬಾಲಕೃಷ್ಣ ಜಂಬೆ ಹೇಳುತ್ತಾರೆ.

ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಕೆಲ ಅರ್ಚಕರ ನಡುವೆ ಹಿಂದಿನಿಂದ ಗುದ್ದಾಟ ನಡೆಯುತ್ತಾ ಬಂದಿದ್ದು, ದೇವಸ್ಥಾನದ ಆಡಳಿತವನ್ನ ರಾಮಚಂದ್ರಾಪುರ ಮಠಕ್ಕೆ ಸರ್ಕಾರ ನೀಡಿದ್ದ ಕ್ರಮದ ವಿರುದ್ಧ ಅನುವಂಶೀಯ ಅರ್ಚಕರು ವಿರೋಧಿಸಿದ್ದರು. ನ್ಯಾಯಾಲಯದ ತೀರ್ಪಿನ ನಂತರ ಅನುವಂಶೀಯ ಅರ್ಚಕರು ಪೂಜೆಗೆ ಬಂದ ವೇಳೆಯಲ್ಲಿ ದೇವಸ್ಥಾನದ ಆವರಣದಲ್ಲಿ ಯಾವುದೇ ಗಲಭೆ ಆಗದಂತೆ ಪೊಲೀಸರು ಮುಂಜಾಗೃತಾ ಕ್ರಮವನ್ನ ವಹಿಸಿದ್ದರು.

ಒಟ್ಟಿನಲ್ಲಿ ಪುರಾಣ ಪ್ರಸಿದ್ಧ ದೇವಸ್ಥಾನವಾದ ಗೋಕರ್ಣದಲ್ಲಿ ಇದೀಗ ಪೂಜಾ ಕಾರ್ಯ ಸಂಬಂಧ 2 ಗುಂಪಿನ ಅರ್ಚಕರ ನಡುವೆ ಗುದ್ದಾಟ ನಡೆಯುತ್ತಿದ್ದು, ಅನುವಂಶೀಯ ಅರ್ಚಕರಿಗೆ ಪೂಜೆ ಅವಕಾಶ ಸಿಗುತ್ತದೆಯೋ ಇಲ್ಲವೇ ಅಥವಾ ಈ ವಿವಾದ ಮತ್ತಷ್ಟು ದೊಡ್ಡದಾಗುತ್ತದೆಯೋ ಅನ್ನುವುದನ್ನ ಕಾದು ನೋಡಬೇಕಾಗಿದೆ.