Monday, January 20, 2025
ದಕ್ಷಿಣ ಕನ್ನಡಸುದ್ದಿ

ಮಂಗಳೂರು ಪಡುಪೆರಾರ ಗ್ರಾಮದ ಶ್ರೀ ಕ್ಷೇತ್ರ ಪೆರಾರ ಬ್ರಹ್ಮ ಬಲವಾಂಡಿ ದೈವಸ್ಥಾನವನ್ನು ಸಂಪರ್ಕಿಸುವ ಕಾಂಕ್ರೀಟಿಕರಣಗೊಂಡ ಮುಖ್ಯ ರಸ್ತೆಯ ಲೋಕಾರ್ಪಣೆ – ಕಹಳೆ ನ್ಯೂಸ್

ಮಂಗಳೂರು: 2 ಕೋಟಿ ರೂಪಾಯಿ ವೆಚ್ಚದಲ್ಲಿ ಕಾಂಕ್ರೀಟಿಕರಣಗೊಳಿಸಲಾದ ಮಂಗಳೂರು ನಗರ ಉತ್ತರದ ಪಡುಪೆರಾರ ಗ್ರಾಮದ ಶ್ರೀ ಕ್ಷೇತ್ರ ಪೆರಾರ ಬ್ರಹ್ಮ ಬಲವಾಂಡಿ ದೈವಸ್ಥಾನವನ್ನು ಸಂಪರ್ಕಿಸುವ ಮುಖ್ಯ ರಸ್ತೆಯನ್ನು ಶಾಸಕ ಡಾ.ವೈ ಭರತ್ ಶೆಟ್ಟಿಯವರು ಇಂದು ಲೋಕಾರ್ಪಣೆಗೊಳಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ಪಂಚಾಯತ್ ಅಧ್ಯಕ್ಷರಾದ ಅಮಿತಾ ಮೋಹನ್ ಶೆಟ್ಟಿ, ಉಪಾಧ್ಯಕ್ಷರಾದ ಸೇಸಮ್ಮ, ಪಂಚಾಯತ್ ಸದಸ್ಯರಾದ ಯಶವಂತ್ ಮುಂಡೇವು, ದೇವಪ್ಪ ಶೆಟ್ಟಿ, ಸೀತಾರಾಮ, ಜಯಂತ್ ಸಾಲ್ಯಾನ್, ಗಣೇಶ್ ಮುರ, ಗಣೇಶ್ ಅಳಿಕೆ, ವಿನೋದ್ , ವನಿತಾ, ಸುಜಾತ, ಮೀನಾಕ್ಷಿ, ಅರುಣ ಕೋಟ್ಯಾನ್, ವಿದ್ಯಾ ಜೋಗಿ, ಬಬಿತಾ, ಮೋಹಿನಿ, ಎಡಪದವು ಮಹಾಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ಅನಿಲ್ ಕುಮಾರ್, ಪಡುಪೆರಾರ ಶಕ್ತಿಕೇಂದ್ರ ಅಧ್ಯಕ್ಷರಾದ ಶೇಖರ ಸಪಲಿಗ, ಮೂಡುಪೆರಾರ ಶಕ್ತಿ ಕೇಂದ್ರ ಅಧ್ಯಕ್ಷರಾದ ಗುರು ಪ್ರಸಾದ್ ಶೆಟ್ಟಿ, ಜಿಲ್ಲಾ ಯುವ ಮೋರ್ಚಾದ ಕಾರ್ಯಕಾರಿಣಿ ಸಮಿತಿ ಸದಸ್ಯರಾದ ಅನೂಜ್, ಉತ್ತರ ಮಂಡಲದ ಕಾರ್ಯಕಾರಿಣಿ ಸಮಿತಿ ಸದಸ್ಯರಾದ ಕಾಶೀನಾಥ್ ಕಾಮತ್, ಗಣ್ಯರು, ಪಕ್ಷದ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.